ಎಷ್ಟೋ ಜನ ಹುಡುಗರು, ಯುವಕರು ಹಣ ಮಾಡೋದಿಕ್ಕೆ ಹರಸಾಹಸ ಪಡುತ್ತಾರೆ. ಆದ್ರೆ ಸುಲಭವಾಗಿ 70 ಲಕ್ಷ ಹಣ ಮಾಡುವ ಒಂದು ದಾರಿಯಿದೆ. ಇದರಲ್ಲಿ ಯಾವ ಮೋಸನೂ ಇಲ್ಲ. ಹೌದಪ್ಪಾ, ನೀವು ಐರ್ಲೆಂಡ್ ಹುಡುಗಿನ ಮದುವೆಯಾದ್ರೆ ಸಾಕು ನಿಮಗೆ 70₹ ಲಕ್ಷ ಹಣ ಕೊಡ್ತಾರೆ. ಅಲ್ಲಿನ ಸರ್ಕಾರವೇ ಇದನ್ನು ಘೋಷಣೆ ಮಾಡಿದ್ದು, ಕೆಲವು ಷರತ್ತುಗಳು ಕೂಡ ಇದೆ. ನೀವು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದು. ಹೇಗೆ ಅಂತೀರಾ? ಈ ವರದಿ ಓದಿ.

ನೀವು ಕೇವಲ ಅಲ್ಲಿನ ಹುಡುಗೀರನ್ನ ಮದುವೆಯಾದ್ರೆ ಸಾಕಾಗೋದಿಲ್ಲ. ಮದುವೆ ಆದಮೇಲೆ ಅಲ್ಲಿಯೇ ಜೀವ ಮಾಡೋದಿಕ್ಕೆ ರೆಡಿ ಇರ್ಬೇಕು. ದೇಶದ ಜನಸಂಖ್ಯೆ ಹೆಚ್ಚಿಸಲು ಹಾಗೂ ಆರ್ಥಿಕತೆ ಬಲ ಪಡಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಮಾಡಿದ್ದು, ಜು.1ರಿಂದ ಆಗಸ್ಟ್ 31ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ಅರ್ಜಿ ಸಲ್ಲಿಸೋದು ಹೇಗೆ?
ಇದಕ್ಕೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್ ಸೈಟ್ https://www.gov.ie/ಗೆ ಭೇಟಿ ನೀಡಿ. ನಂತರ ಅಪ್ಲಿಕೇಶನ್ ಸೆಕ್ಷನ್ ಅನ್ನು ಕ್ಲಿಕ್ ಮಾಡಿ. ಬಳಿಕ ರಿಜಿಸ್ಟ್ರೇಷನ್ ಲಿಂಕ್ ಕ್ಲಿಕ್ ಮಾಡಿದರೆ ಅಪ್ಲಿಕೇಷನ್ ಫಾರ್ಮ್ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಹೆಸರು, ವಿಳಾಸ, ಫೋನ್ ನಂಬರ್ ನಮೂದಿಸಿ. ಗುರುತಿನ ಚೀಟಿ, ಶೈಕ್ಷಣಿಕ ಅರ್ಹತೆ, ವೀಸಾ ಮಾಹಿತಿ, ವಯಸ್ಸಿಗೆ ಸಂಬಂಧಿಸಿದ ಮಾಹಿತಿ ನೀಡಿ. ನಂತರ ಷರತ್ತುಗಳನ್ನು ಸೂಕ್ಷ್ಮವಾಗಿ ಓದಿ. ಬಳಿಕ ಸಬ್ ಮಿಟ್ ಬಟನ್ ಒತ್ತಿ. ನಿಮ್ಮ ಅರ್ಜಿ ಸ್ವೀಕೃತವಾದರೆ ಅಧಿಕಾರಿಗಳೇ ನಿಮ್ಮನ್ನು ಸಂಪರ್ಕಿಸುತ್ತಾರೆ.
ಅರ್ಜಿ ಸಲ್ಲಿಸಲು ಪಾಸ್ ಪೋರ್ಟ್, ವೀಸಾ, ವಯಸ್ಸು ಸೂಚಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರ, ವಸತಿ ಪುರಾವೆ, ಆದಾಯದ ದಾಖಲೆ, ಉದ್ಯೋಗದ ಅನುಭವ, ಮೂಲ ದೇಶದ ಗುರುತಿನ ಚೀಟಿಯ ಅವಶ್ಯಕತೆ ಇದೆ. ಈ ದಾಖಲೆಗಳಿದ್ರೆ ನೀವು ಅರ್ಜಿ ಸಲ್ಲಿಸಬಹುದು.
ಷರತ್ತುಗಳೇನಿದೆ?
1.ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಪಟ್ಟಿರಬೇಕು.
2.ಐರ್ಲೆಂಡ್ ನಲ್ಲಿ ವಾಸಿಸಲು ಅಗತ್ಯವಾದ ವೀಸಾ ಹೊಂದಿರಬೇಕು.
3.ಅರ್ಜಿದಾರರು ಐರ್ಲೆಂಡಿಗೆ ಸ್ಥಳಾಂತರಗೊಳ್ಳಲು ನಿಜವಾದ ಕಾರಣ ಮತ್ತು ಉದ್ದೇಶ ತಿಳಿಸಬೇಕು.
4.ಅರ್ಜಿದಾರರು ದೇಶದ ಪ್ರಗತಿಗೆ ಕೊಡುಗೆ ನೀಡುವ ಕೌಶಲ್ಯ ಹೊಂದಿರಬೇಕು.
5.ಯಾವುದೇ ಅಪರಾಧದ ಹಿನ್ನಲೆ ಇರಬಾರದು.