ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಷ್ಯಾ ಕಪ್ ನ ಪರಿಷ್ಕೃತ ವೇಳಾಪಟ್ಟಿಯನ್ನು ಐ.ಸಿ.ಸಿ ಆಗಸ್ಟ್ 9 ರಂದು ಬಿಡುಗಡೆ ಮಾಡಿದೆ, ನೂತನ ವೇಳಾಪಟ್ಟಿಯಲ್ಲಿ ಐ ಸಿ ಸಿ ಒಟ್ಟು 9 ಪಂದ್ಯಗಳಲ್ಲಿ ದಿನಾಂಕವನ್ನು ಬಿಡುಗಡೆಗೊಳಿಸಿದೆ, ಈ 9 ಪಂದ್ಯಗಳಲ್ಲಿ ಟೀಂ ಇಂಡಿಯಾದ ಎರಡು ಪಂದ್ಯಗಳು ಸೇರಿದ್ದರೆ ಪಾಕಿಸ್ತಾನದ ಮೂರು ಪಂದ್ಯಗಳು ಸೇರಿವೆ, ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 14ರಂದು ನಡೆಯಲಿದೆ,

ಹಾಗೇಯೇ ನವೆಂಬರ್ 12 ರಂದು ನಡೆಯಬೇಕಾಗಿದ್ದ ಭಾರತ ಮತ್ತು ನೆದರ್ ಲ್ಯಾಂಡ್ ನಡುವಿನ ಪಂದ್ಯ ನವೆಂಬರ್ 11 ರಂದು ನಡೆಯಲಿದೆ, ಪಂದ್ಯಗಳ ದಿನಾಂಕಗಳ ಬದಲಾವಣೆಯ ಮಾಹಿತಿಯನ್ನು ಜೊತೆ ಜೊತೆಗೆ ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟದ ಬಗ್ಗೆಯೂ ಐ ಸಿ ಸಿ ಮಾಹಿತಿ ನಿಡಿದ್ದು ಆಗಸ್ಟ್ 15 ರಿಂದ ಟಿಕೆಟ್ ಗಳ ನೊಂದಣಿ ಪ್ರಕೃಯೆ ಆರಂಭವಾಗಲಿದೆ, ಎಂದು ತಿಳಿಸಿದೆ, ಆಗಸ್ಟ್ 25 ರಿಂದ ಆನ್ಲೈನ್ ನಲ್ಲಿ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ, ಟಿಕೆಟ್ ಮಾರಾಟದ ಬಗ್ಗೆ ಬಿ ಸಿ ಸಿ ಕಾರ್ಯದರ್ಶಿ ಜಯ್ ಷ ಪ್ರತಿಕ್ರಿಯಿಸಿದ್ದು, ‘ ಕ್ರಿಕೆಟ್ ಅಭಿಮಾನಿಗಳು ಎರಡು ರೀತಿಯಲ್ಲಿ ಟಿಕೆಟ್ ಖರೀದಿಸಬಹುದು, ಟಿಕೆಟ್ ಗಳು ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಲಭ್ಯವಿರುತ್ತದೆ’ ಎಂದು ತಿಳಿಸಿದ್ದಾರೆ.

ಆನ್ಲೈನ್ ನಲ್ಲಿ ಟಿಕೆಟ್ ಗಳನ್ನು ಐ ಸಿ ಸಿ ವೆಬ್ ಸೈಟ್ ನಲ್ಲಿ ಖರೀದಿಸಬಹುದಾಗಿದ್ದು, ಸಿಕ್ಕಿರುವ ಮಾಹಿತಿಯ ಪ್ರಕಾರ ಆಗಸ್ಟ್ 25 ರಿಂದ ಆನ್ಲೈನ್ ಟಿಕೆಟ್ ಮಾರಾಟವಾಗಲಿದೆ, ಸೆಮಿಫೈನಲ್ ಮತ್ತು ಫೈನಲ್ ಗಳ ಟಿಕೆಟ್ ಗಳನ್ನು ಸೆಪ್ಟೆಂಬರ್ 15 ರಿಂದ ಖರೀದಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ, ‘ಐ ಸಿ ಸಿ ವೆಬ್ ಸೈಟ್ ಹೊರತು ಪಡಿಸಿ 7 ಅಥವಾ 8 ಚಾನೆಲ್ ಗಳ ಮೂಲಕ ಆಫ್ ಲೈನ್ ನಲ್ಲಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತದ.
, ಅಲ್ಲದೆ ಆನ್ಲೈನ್ ನಲ್ಲಿ ಟಿಕೆಟ್ ಕಾಯ್ದಿರಿಸಿರುವ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ನ ಪ್ರಿಂಟನ್ನು ಕ್ರೀಡಾಂಗಣದಲ್ಲಿ ತನ್ನೊಂದಿಗೆ ಇಟ್ಟುಕೊಳ್ಳುವುದು ಕಡ್ಡಾಯ’ ಎಂದು ಜಯ್ ಷಾ ರವರು ಹೇಳಿದ್ದಾರೆ, ಇನ್ನು ಟಿಕೆಟ್ ಬುಕ್ ಮಾಡುವುದು ಹೇಗೆ ಅಂತ ನೋಡುವುದಾದರೆ ಕ್ರಿಕೆಟ್ ಅಭಿಮಾನಿಗಳು ಆಗಸ್ಟ್ 15 ರಿಂದ ಐ ಸಿ ಸಿ ನ ಅಧಿಕೃತ ವೆಬ್ ಸೈಟ್ ಆಗಿರುವ www.cricketworldcup.com ಗೆ ರಿಜಿಸ್ಟ್ರರ್ ಆಗಿ ವಿಶ್ವಕಪ್ ಕ್ರಿಕೆಟ್ ಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ, ನೊಂದಣಿಯ ನಂತರ ಹೆಚ್ಚಿನ ಮಾಹಿತಿಯನ್ನು ಐ ಸಿ ಸಿ ಒದಗಿಸುತ್ತದೆ.
ಇದರ ಮಧ್ಯೆ ಟೀಂ ಇಂಡಿಯಾದ ಪಂದ್ಯದ ಟಿಕೆಟ್ ಗಳು ಆಗಸ್ಟ್ 3 ರಿಂದ ಸೆಪ್ಟೆಂಬರ್ 30 ರ ನಡುವೆ ಖರೀದಿಸಬಹುದಾಗಿದೆ, ಟೀಂ ಇಂಡಿಯಾ ಮತ್ತು ಪಾಕಿಸ್ತಾನದ ನಡುವಿನ ಟಿಕೆಟ್ ಸೆಪ್ಟೆಂಬರ್ 3 ರಂದು ಖರೀದಿಗೆ ಲಭ್ಯವಿರುತ್ತದೆ, ಎಂದು ಮಾಹಿತಿ ನೀಡಿದ್ದಾರೆ, ಇನ್ನು ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್ ಮಾರಾಟದ ವೇಳಾಪಟ್ಟಿಯ ಆವೃತ್ತಿ ಹೇಗಿದೆ ಎಂದು ನೋಡುವುದಾದರೆ ಆಗಸ್ಟ್ 25 ರಂದು ಟೀಂ ಇಂಡಿಯಾವನ್ನು ಹೊರತುಪಡಿಸಿದ ಅಭ್ಯಾಸ ಪಂದ್ಯಗಳು ಮತ್ತು ಇತರ ಪಂದ್ಯಗಳ ಟಿಕೆಟ್ ಗೆ ಅವಕಾಶವಿರಲಿದೆ,
ಆಗಸ್ಟ್ 30 ರಂದು ಗೋಹಾಟಿ ಮತ್ತು ತಿರುವನಂತಪುರ ದಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ, ಆಗಸ್ಟ್ 31 ರಂದು ಚೆನೈ, ದೆಹಲಿ ಮತ್ತು ಪುಣೆಯಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್ ಗಳು ಖರೀದಿಗೆ ಲಭ್ಯವಿರುತ್ತದೆ ಅಂತ ಹೇಳಬಹುದು ಇನ್ನು ಅಂತಿಮವಾಗಿ ಸೆಪ್ಟೆಂಬರ್ 15 ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಐ ಸಿ ಸಿ ಮತ್ತು ಬಿ ಸಿ ಸಿ ಐ ದೃಢಪಡಿಸಿದೆ.