ಮಸೂದ್ ಅಜರ್.. ಮೊನ್ನೆ ಭಾರತ ಮಾಡಿದ ದಾಳಿಯಲ್ಲಿ ಇಡೀ ಕುಟುಂಬನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.. ಈತ ಜಾಗತಿಕ ಉಗ್ರ ಎಂದು ವಿಶ್ವಂಸ್ಥೆಯೇ ಘೋಷಣೆ ಮಾಡಿದೆ.. ಅಂತಹ ಉಗ್ರನಿಗೆ ಪಾಕಿಸ್ತಾನ ಆಶ್ರಯ ಕೊಟ್ಟು ಸಲಹುತ್ತಿದೆ.. ಅಂದಹಾಗೆ ಈತ ಭಾರತಕ್ಕೆ ಬಂದಿದ್ದ.. ಭಾರತದ ಜೈಲಿನಿಂದ ತಪ್ಪಿಸಿಕೊಳ್ಳಲು ಸುರಂಗ ಕೊರೆದು ಹರಸಾಹಸಪಟ್ಟಿದ್ದ.. ಸುರಂಗದಲ್ಲಿ ಸಿಲುಕಿಕೊಂಡು ಒದ್ದಾಡಿದ್ದಾರೆ.. ಈ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರವನ್ನು ನೋಡೋಣ.. ಮಸೂದ್ ಅಜರ್ 1994ರ ಜನವರಿ 29ರಂದು ಬಾಂಗ್ಲಾದೇಶದ ವಿಮಾನದಲ್ಲಿ ಢಾಕಾದಿಂದ ನವದೆಹಲಿಗೆ ಬಂದಿಳಿದಿದ್ದ.. ಆಗ ಆತನ ಬಳಿ ಪೋರ್ಚುಗೀಸ್ ಪಾಸ್ಪೋರ್ಟ್ ಇತ್ತು.. ಇದನ್ನು ನೋಡಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅನುಮಾನ ಬಂದಿತ್ತು.. ಒಬ್ಬ ಅಧಿಕಾರಿಯಂತೂ ನೀವು ಪೋರ್ಚುಗೀಸರ ತರಾ ಕಾಣುತ್ತಿಲ್ಲವಲ್ಲ ಎಂದು ಅನುಮಾನಪಟ್ಟಿದ್ದರು.. ಆಗ ಇದೇ ಮಸೂದ್ ನಾನು ಗುಜರಾತಿ ಮೂಲದವನು, ನನಗೆ ಪೋರ್ಚುಗೀಸ್ ಪೌರತ್ವ ಸಿಕ್ಕಿದೆ ಎಂದು ಹೇಳಿದ್ದ.. ಆಗ ಅಧಿಕಾರಿ ಹೆಚ್ಚು ವಿಚಾರಣೆ ಮಾಡದೇ ಪಾಸ್ ಪೋರ್ಟ್ ಮೇಲೆ ಮುದ್ರೆ ಒತ್ತಿದ್ದ.. ಹಾಗೆ ಭಾರತ ಪ್ರವೇಶಿಸಿದ ಮಸೂದ್ ಅಜರ್, ಕೆಲವೇ ದಿನಗಳಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕಾಣಿಸಿಕೊಳ್ಳೋದಕ್ಕೆ ಶುರು ಮಾಡಿದ.. ಯುವಕರನ್ನು ಸೇರಿಸಿಕೊಂಡು ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದ.. ಜನರನ್ನು ಸೇರಿಸಿ ಪ್ರಚೋದನಾಕಾರಿ ಭಾಷಣ ಮಾಡುವುದು, ಯುವಕರನ್ನು ಭಯೋತ್ಪಾದನೆಯತ್ತ ಆಕರ್ಷಿಸುವುದು, ಕಾಶ್ಮೀರಿ ಪ್ರತ್ಯೇಕತಾವಾದಿಗಳ ನಡುವೆ ಘರ್ಷಣೆಗಳು ನಡೆದರೆ ಮಧ್ಯಸ್ಥಿಕೆ ವಹಿಸುವುದು ಮಾಡುತ್ತಿದ್ದ..

ಹೀಗೆಯೇ ಒಂದು ದಿನ ಮಸೂದ್ ಅಜರ್ ಅನಂತ್ನಾಗ್ನಲ್ಲಿ ಸಜ್ಜದ್ ಅಫ್ಘಾನಿ ಜೊತೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ.. ಇದನ್ನು ನೋಡಿದ ಸೈನಿಕರು ಅವರನ್ನು ತಡೆದಿದ್ದರು.. ಈ ವೇಳೆ ಇಬ್ಬರೂ ಆಟೋದಿಂದ ಹಾರಿ ಪರಾರಿಯಾಗಲು ಯತ್ನಿಸಿದರು.. ಈ ವೇಳೆ ಸೈನಿಕರು ಮಸೂದ್ ಅಜರ್ ಹಾಗೂ ಸಜ್ಜದ್ ಅಫ್ಘಾನಿ ಇಬ್ಬರನ್ನೂ ಹಿಡಿದರು.. ಆಗ ಆ ಮಸೂದ್ ಅಜರ್ ಹೇಳಿದ್ದೇನು ಗೊತ್ತಾ..? ಭಾರತಕ್ಕೆ ನನ್ನನ್ನು ಹೆಚ್ಚು ಕಾಲ ಜೈಲಿನಲ್ಲಿರುವ ಶಕ್ತಿ ಇಲ್ಲ ಅಂತ.. ಇದನ್ನು ಮಸೂದ್ ಅಜರ್ ಸಾಕಷ್ಟು ಬಾರಿ ಹೇಳುತ್ತಲೇ ಬಂದಿದ್ದ.. ಮಸೂದ್ ಬಂಧನವಾದ ಹತ್ತು ತಿಂಗಳ ನಂತರ ಭಯೋತ್ಪಾದಕರು ದೆಹಲಿಯಲ್ಲಿ ಹಲವು ವಿದೇಶೀಯರನ್ನು ಕಿಡ್ನ್ಯಾಪ್ ಮಾಡಿದ್ದರು.. ಅವರನ್ನು ಬಿಡುಗಡೆ ಮಾಡಬೇಕು ಅಂದ್ರೆ ಮಸೂದ್ ಅಜರ್ನನ್ನು ಜೈಲಿನಿಂದ ಬಿಡಬೇಕು ಎಂದು ಬೇಡಿಕೆ ಇಟ್ಟಿದ್ದರು.. ಆದ್ರೆ ಉಗ್ರರ ಪ್ರಯತ್ನ ವಿಫಲವಾಯಿತು.. ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸರು ಸಹರಾನ್ಪುರದಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರು.
ಸುರಂಗ ತೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ!
ಬಂಧನವಾಗಿ ಒಂದು ವರ್ಷದ ನಂತರ ಹರ್ಕತ್-ಉಲ್-ಅನ್ಸಾರ್ ಸೇರಿ ಒಂದಷ್ಟು ವಿದೇಶಿಯರನ್ನು ಉಗ್ರರು ಅಪಹರಿಸಿದರು.. ಆ ಮೂಲಕ ಮಸೂದ್ ಅಜರ್ನನ್ನು ಬಂಧಮುಕ್ತಗೊಳಿಸಲು ಪ್ರಯತ್ನ ಮಾಡಿದರು.. ಆದ್ರೆ ಅದು ಕೂಡಾ ವಿಫಲವಾಗಿತ್ತು.. ಕೊನೆಗೆ ಉಗ್ರರ ಇಂತಹ ಪ್ರಯತ್ನಗಳನ್ನು ಕೈಬಿಟ್ಟರು.. ಕೊನೆಗೆ ಮಸೂದ್ ಅಜರ್ ಜೈಲಿನಿಂದ ಸುರಂಗ ಮಾರ್ಗ ತೋಡಿ ಅಲ್ಲಿಂದ ತಪ್ಪಿಸಿಕೊಳ್ಳೋದಕ್ಕೆ ಯತ್ನಿಸಿದ್ದ.. 1999ರಲ್ಲಿ ಜಮ್ಮುನಲ್ಲಿರುವ ಕೋಟ್ ಭಲಾವಲ್ ಜೈಲಿನಿಂದ ಸುರಂಗವನ್ನು ತೋಡಿ ಮಸೂದ್ ಅಜರ್ ತಪ್ಪಿಸಿಕೊಳ್ಳೋದಕ್ಕೆ ಮುಂದಾಗಿದ್ದ.. ಆದ್ರೆ ಸುರಂಗಕ್ಕಿಂತ ಮಸೂದ್ ಅಜರ್ ದಪ್ಪಗಿದ್ದ.. ಹೀಗಾಗಿ ಸುರಂಗದಲ್ಲೇ ಸಿಕ್ಕಿಹಾಕಿಕೊಂಡು ಒದ್ದಾಡತೊಡಗಿದ್ದ.. ಹೀಗಾಗಿ ಆತ ಜೈಲಧಿಕಾರಿಗಳ ಕೈಗೆ ಸಿಕ್ಕಿಬಿದ್ದದ್ದ.. ಇದಾಗಿ ಕೆಲವು ತಿಂಗಳುಗಳ ನಂತರ ಅಂದರೆ, 1999ರ ಡಿಸೆಂಬರ್ನಲ್ಲಿ ಉಗ್ರರು ಏರ್ ವಿಮಾನವನ್ನು ಹೈಜಾಕ್ ಮಾಡಿದರು. ಅದನ್ನು ಕಂದಹಾರ್ಗೆ ತೆಗೆದುಕೊಂಡು ಹೋಗುತ್ತಾರೆ.. ವಿಮಾನದಲ್ಲಿದ್ದ 155 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕುತ್ತಾರೆ.. ಮಸೂದ್ ಅಜರ್ನನ್ನು ಬಿಡುಗಡೆ ಮಾಡಿದರೆ ಮಾತ್ರ ಒತ್ತೆಯಾಳುಗಳನ್ನು ಬಿಡುವುದಾಗಿ ಹೇಳುತ್ತಾರೆ.. ಆಗ ಮಸೂದ್ ಅಜರ್ ಸೇರಿ ಮೂವರು ಭಯೋತ್ಪಾದಕರನ್ನು ಬಿಡುಗಡೆ ಮಾಡಲು ಭಾರತ ಸರ್ಕಾರ ಒಪ್ಪುತ್ತದೆ..

ರಾ ಮುಖ್ಯಸ್ಥರು ದೆಹಲಿಯಿಂದ ಗಲ್ಫ್ಸ್ಟ್ರೀಮ್ ಎಂಬ ಸಣ್ಣ ವಿಮಾನದಲ್ಲಿ ಶ್ರೀನಗರಕ್ಕೆ ಬರುತ್ತಾರೆ.. ಜರ್ಗರ್ನನ್ನು ಶ್ರೀನಗರದ ಜೈಲಿನಿಂದ ಮತ್ತು ಮಸೂದ್ ಅಜರ್ನನ್ನು ಜಮ್ಮುವಿನ ಕೋಟ್ ಭಲಾವಲ್ ಜೈಲಿನಿಂದ ಕರೆತರಲಾಗುತ್ತದೆ.. ನಂತರ ಭಾರತದ ಗುಪ್ತಚರ ಸಂಸ್ಥೆ ‘ರಾ’ ಮುಖ್ಯಸ್ಥ ಅಮರ್ಜೀತ್ ಸಿಂಗ್ ದುಲತ್ ಮತ್ತು ಇಬ್ಬರೂ ಉಗ್ರರನ್ನು ಆ ಗಲ್ಫ್ಸ್ಟ್ರೀಮ್ ವಿಮಾನದಲ್ಲಿ ಕೂರಿಸಲಾಗುತ್ತದೆ.. ವಿಮಾನ ಹತ್ತುವ ಮೊದಲು ಇಬ್ಬರೂ ಉಗ್ರರ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು.. ಅವರಿಬ್ಬರೂ ವಿಮಾನದ ಹಿಂಭಾಗದಲ್ಲಿ ಕುಳಿತಿದ್ದರು. ವಿಮಾನದ ಮಧ್ಯದಲ್ಲಿ ಒಂದು ಪರದೆ ಇತ್ತು. ಪರದೆಯ ಒಂದು ಬದಿಯಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ’ ಮುಖ್ಯಸ್ಥ ಅಮರ್ಜೀತ್ ಸಿಂಗ್ ದುಲತ್, ಇನ್ನೊಂದು ಬದಿಯಲ್ಲಿ ಭಯೋತ್ಪಾದಕರಾದ ಜರ್ಗರ್ ಮತ್ತು ಮಸೂದ್ ಅಜರ್ ಇದ್ದರು.. ಈ ವಿಮಾನ ದೆಹಲಿಗೆ ಹೋಯಿತು.. ಅದಾಗಲೇ ಮೂರನೇ ಉಗ್ರ ಒಮರ್ ಶೇಖ್ನನ್ನೂ ಅಲ್ಲಿಗೆ ಕರೆತರಲಾಗಿತ್ತು.. ಅಲ್ಲಿಂದ ಮೂವರನ್ನೂ ಮತ್ತೊಂದು ವಿಮಾನದಲ್ಲಿ ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಕಂದಹಾರ್ಗೆ ಕರೆದೊಯ್ದರು.. ವಿದೇಶಾಂಗ ಸಚಿವರೇ ಅಲ್ಲಿಗೆ ಹೋದರೆ ಸರ್ಕಾರದಿಂದ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ತಕ್ಷಣವೇ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ.
ಮೂವರು ಭಯೋತ್ಪಾದಕರು ಹಾಗೂ ಜಸ್ವಂತ್ ಸಿಂಗ್ ಇದ್ದ ವಿಮಾನ ಕಂದಹಾರ್ನಲ್ಲಿ ಲ್ಯಾಂಡ್ ಆಯಿತು.. ಆದ್ರೆ ಸುಮಾರು ಸಮಯದ ತನಕ ವಿಮಾನ ಹೈಜಾಕ್ ಮಾಡಿದ್ದ ಉಗ್ರರು ಜಸ್ವಂತ್ ಸಿಂಗ್ ಅವರನ್ನು ಭೇಟಿಯಾಗೋದಕ್ಕೆ ಬರಲೇ ಇಲ್ಲ.. ಸುಮಾರು ಸಮಯದವರೆಗೆ ಜಸ್ವಂತ್ ಸಿಂಗ್ ಹಾಗೂ ಮೂವರು ಉಗ್ರರು ವಿಮಾನದಲ್ಲೇ ಕುಳಿತಿದ್ದರು.. ಇನ್ನು ಜಸ್ವಂತ್ ಸಿಂಗ್ ಅವರು ತಮ್ಮ ಆತ್ಮಕಥೆ ‘ಎ ಕಾಲ್ ಟು ಆನರ್ – ಇನ್ ಸರ್ವಿಸ್ ಆಫ್ ಎಮರ್ಜಿಂಗ್ ಇಂಡಿಯಾ’ದಲ್ಲಿ ಬರೆದುಕೊಂಡಿದ್ದಾರೆ.. ತುಂಬಾ ಹೊತ್ತಿನ ನಂತರ ವಾಕಿಟಾಕಿ ಶಬ್ದ ಕೇಳಲು ಶುರುವಾಯಿತು.. ಆಗ ಮೂವರೂ ಭಯೋತ್ಪಾದಕರನ್ನು ಕೆಳಗಿಳಿಸಲಾಯಿತು.. ನಂತರ ವಿಮಾನ ಮೆಟ್ಟಿಲುಗಳನ್ನು ಮುಚ್ಚಲಾಯಿತು.. ಮಸೂದ್ ಅಜರ್ ಸೇರಿ ಮೂವರೂ ಕೆಳಗಿಳಿಯುತ್ತಿದ್ದಂತೆ ಉಗ್ರರಲ್ಲಿ ಉತ್ಸಾಹ ಹೆಚ್ಚಾಯಿತು.. ಎಲ್ಲರೂ ಚಪ್ಪಾಳೆ ತಟ್ಟುತ್ತಾ ಅವರನ್ನು ಬರಮಾಡಿಕೊಂಡರು.. ಮೂವರೂ ಭಯೋತ್ಪಾದಕರು ನಿಜವಾದವರೇನಾ ಎಂದು ಪರೀಕ್ಷೆ ಮಾಡಿ ಖಚಿತ ಮಾಡಿಕೊಂಡರು.. ಅದಕ್ಕಾಗಿ ಅವರ ಬಂಧುಗಳನ್ನು ಕರೆಸಲಾಗಿತ್ತು.. ಅನಂತರವೇ ಅಪಹರಣವಾಗಿದ್ದ ವಿಮಾನದಲ್ಲಿದ್ದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.. ಅನಂತರ ಎಲ್ಲರೂ ಸೇಫಾಗಿ ದೆಹಲಿ ಸೇರಿದರು..



