ನವೆಂಬರ್ ಮುಗಿದು ಡಿಸೆಂಬರ್ಗೆ ಕಾಲಿಟ್ಟಿದ್ದೇವೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿ 12 ರಾಶಿಗಳಿಗೆ ವಿವಿಧ ಫಲ ದೊರೆಯಲಿದೆ. ಗ್ರಹಗಳು ಆಗಿಂದ್ದಾಗ್ಗೆ ತಮ್ಮ ರಾಶಿಯನ್ನು ಬದಲಿಸುತ್ತವೆ. ಇದನ್ನು ಗ್ರಹಗಳ ಸಂಕ್ರಮಣ ಎಂದು ಕರೆಯಲಾಗುತ್ತದೆ. ಪ್ರತಿ ದಿನ, ಪ್ರತಿ ವಾರ ಹಾಗೇ ಪ್ರತಿ ತಿಂಗಳು ನಮ್ಮ ಭವಿಷ್ಯ ಹೇಗಿರಬಹುದು? ಏನಾದರೂ ಸಮಸ್ಯೆ ಇದೆಯೇ? ಅದಕ್ಕೆ ಪರಿಹಾರ ಏನು ದೊರೆಯಬಹುದು ಎಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಯಾವ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ? ಯಾವ ರಾಶಿಯವರಿಗೆ ಮಿಶ್ರ ಹಾಗೂ ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಉಂಟಾಗಲಿದೆ, ಅದಕ್ಕೆ ಪರಿಹಾರವೇನು ಡಿಸೆಂಬರ್ ತಿಂಗಳ ಮಾಸ ಭವಿಷ್ಯ ಹೀಗಿದೆ.
ಮೇಷ ರಾಶಿ
ಈ ರಾಶಿಯವರಿಗೆ ಡಿಸೆಂಬರ್ ತಿಂಗಳು ಏರಿಳಿತಗಳೊಂದಿಗೆ ಪ್ರಾರಂಭವಾಗುತ್ತದೆ. ಈ ತಿಂಗಳ ಆರಂಭದಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ದೊರೆಯುತ್ತದೆ. ಸ್ನೇಹಿತರಿಂದ ಬೆಂಬಲ ನಿಮಗೆ ಇದೆ. ಆದರೆ ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸಬಹುದು. ಹೊಸ ಮನೆ ಖರೀದಿಸಲು ಇದು ಉತ್ತಮ ಸಮಯ. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಚ್ಚರ. ಆಸ್ತಿ ವಿವಾದ ಹೆಚ್ಚಾಗಬಹುದು. ಮಾತಿನ ಮೇಲೆ ನಿಯಂತ್ರಣ ಮುಖ್ಯ.
ಪರಿಹಾರ: ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸುವುದು ಒಳ್ಳೆಯದು.
ವೃಷಭ ರಾಶಿ
ಈ ರಾಶಿಯವರಿಗೆ ಈ ತಿಂಗಳು ತುಂಬಾ ಲಾಭದಾಯಕವಾಗಿದೆ. ವ್ಯವಹಾರದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಬಾಕಿ ಉಳಿದಿರುವ ಹಳೆಯ ಕೆಲಸಗಳು ಪೂರ್ಣಗೊಳ್ಳಲಿದ್ದು ಮನಸ್ಸಿಗೆ ಸಮಾಧಾನ ಎನಿಸುತ್ತದೆ. ಹೊಸ ಮನೆಯನ್ನು ಖರೀದಿಸುವ ಸಾಧ್ಯತೆಗಳಿವೆ, ಆದರೆ ಆರೋಗ್ಯ ಸಮಸ್ಯೆಗಳಿರಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಪರಿಹಾರ: ಪ್ರತಿ ಸೋಮವಾರ ಶಿವನ ಪೂಜೆ ಮಾಡುವುದು ಒಳ್ಳೆಯದು.
ಮಿಥುನ ರಾಶಿ
ಈ ತಿಂಗಳು ಉತ್ತಮವಾಗಿರುತ್ತದೆ. ದೀರ್ಘ ಪ್ರವಾಸಕ್ಕಾಗಿ ಯೋಜನೆಗಳನ್ನು ಮಾಡುವಿರಿ. ಆರೋಗ್ಯ ಸಮಸ್ಯೆಗಳಿರಬಹುದು. ಕೆಲಸದಲ್ಲಿ ನೀವು ಮೆಚ್ಚುಗೆ ಪಡೆಯುತ್ತೀರಿ. ಹೊಸ ಕೆಲಸವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ಕೌಟುಂಬಿಕ ಸಮಸ್ಯೆಗಳು ನಿಮಗೆ ಮಾನಸಿಕ ಹಿಂಸೆ ನೀಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗಲಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
ಪರಿಹಾರ: ಪ್ರತಿ ಶನಿವಾರ ವೆಂಕಟೇಶ್ವರನ ಪೂಜೆ ಮಾಡುವುದು ಒಳ್ಳೆಯದು.
ಕರ್ಕಾಟಕ ರಾಶಿ
ಈ ತಿಂಗಳು ಕಟಕ ರಾಶಿಯವರಿಗೆ ಅನುಕೂಲಕರವಾಗಿದೆ. ಹೊಸ ಕೆಲಸದ ಹುಡುಕಾಟದಲ್ಲಿ ನೀವು ಯಶಸ್ವಿಯಾಗುತ್ತೀರಿ, ಆರ್ಥಿಕ ಲಾಭ ಪಡೆಯುತ್ತೀರಿ. ಧಾರ್ಮಿಕ ಪ್ರವಾಸವನ್ನು ಯೋಜಿಸಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ, ಹಳೆಯ ಆಸ್ತಿ ವಿವಾದಗಳು ಬಗೆಹರಿಯಲಿವೆ. ಹೊಸ ಕೆಲಸವನ್ನು ಪ್ರಾರಂಭಿಸಲಿದ್ದೀರಿ. ಆದರೆ ಯಾರೊಂದಿಗೂ ನಿಮ್ಮ ವೈಯಕ್ತಿಕ ರಹಸ್ಯಗಳನ್ನು ಹಂಚಿಕೊಳ್ಳಬೇಡಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
ಪರಿಹಾರ: ಪ್ರತಿ ಬುಧವಾರ ಹಸುವಿಗೆ ಬೆಲ್ಲ ತಿನ್ನಿಸಿದರೆ ಶುಭ
ಸಿಂಹ ರಾಶಿ
ಈ ತಿಂಗಳು ಸಿಂಹ ರಾಶಿಯವರಿಗೆ ಉತ್ತಮವಾಗಿರುತ್ತದೆ. ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತದೆ. ಪರಸ್ಪರ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸಬಹುದು. ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದ್ದರೂ ಕೆಲವು ವಿಘ್ನಗಳು ಎದುರಾಗಬಹುದು. ಕುಟುಂಬಕ್ಕಾಗಿ ಹೊಸ ವಸ್ತುಗಳನ್ನು ಖರೀದಿಸಬಹುದು, ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ. ಹೊಸಬರನ್ನು ಭೇಟಿಯಾಗುವ ಅವಕಾಶವಿರುತ್ತದೆ.. ಪರಿಹಾರ: ಪ್ರತಿ ಶನಿವಾರ ನವಗ್ರಹ ಪ್ರದಕ್ಷಿಣೆ ಮಾಡಿ, ಶನೈಶ್ಚರನ ಮುಂದೆ ಎಳ್ಳೆಣ್ಣೆ ದೀಪ ಹಚ್ಚಿ.
ಕನ್ಯಾ ರಾಶಿ
ಈ ತಿಂಗಳು ಕನ್ಯಾ ರಾಶಿಯವರಿಗೆ ಮಿಶ್ರ ಫಲ ದೊರೆಯಲಿದೆ. ಕುಟುಂಬದಲ್ಲಿ ಘರ್ಷಣೆಗಳು ಇರಬಹುದು, ಆದ್ದರಿಂದ ನಿಮ್ಮ ಮಾತುಗಳನ್ನು ನಿಯಂತ್ರಿಸುವುದು ಮುಖ್ಯ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಹಣಕಾಸಿನ ನಷ್ಟವನ್ನು ಉಂಟುಮಾಡಬಹುದು. ನಿಮ್ಮನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಜನರಿಂದ ದೂರಿವಿರಿ. ಸ್ವಲ್ಪ ದಿನಗಳ ಕಾಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ಮುಂದೂಡಿ.
ಪರಿಹಾರ: ಶನಿವಾರದಂದು ವೆಂಕಟೇಶ್ವರನ ದರ್ಶನ ಮಾಡಿ.
ತುಲಾ ರಾಶಿ
ಈ ತಿಂಗಳು ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭದಾಯಕ ಅವಕಾಶಗಳಿವೆ, ದೊಡ್ಡ ಪಾಲುದಾರಿಕೆ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಲಾಭವನ್ನು ಪಡೆಯುತ್ತೀರಿ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ, ಹೊಸ ಅತಿಥಿಗಳು ಆಗಮಿಸುತ್ತಾರೆ. ಪತಿ-ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಪ್ರತಿ ಗುರುವಾರ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಒಳ್ಳೆಯದು.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಇದು ಲಾಭದಾಯಕ ತಿಂಗಳು. ಒಳ್ಳೆ ಉದ್ದೇಶಕ್ಕಾಗಿ ಕುಟುಂಬದಿಂದ ದೂರ ಹೋಗುವ ಸಾಧ್ಯತೆ ಇದೆ, ಕೆಲಸದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ದೂರದ ಪ್ರಯಾಣವು ಆಯಾಸವಾಗಬಹುದು, ಆದರೆ ಆರ್ಥಿಕ ಲಾಭವಿದೆ. ಸ್ನೇಹಿತರ ಸಂಖ್ಯೆ ಹೆಚ್ಚಾಗುತ್ತದೆ, ಪ್ರಯೋಜನಕಾರಿ ಯೋಜನೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಹಳೆಯ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
ಪರಿಹಾರ: ಪ್ರತಿ ಸೋಮವಾರ ಶಿವನ ಪೂಜೆ ಮಾಡುವುದು ಒಳ್ಳೆಯದು.
ಧನು ರಾಶಿ
ಈ ತಿಂಗಳು ಧನು ರಾಶಿಯವರಿಗೆ ಏರಿಳಿತಗಳಿಂದ ಕೂಡಿರುತ್ತದೆ. ಆರಂಭದಲ್ಲಿ ಆರ್ಥಿಕ ಲಾಭಗಳಿರುತ್ತವೆ, ಆದರೆ ಅಂತಿಮವಾಗಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ. ಪೂರ್ವಿಕರ ಆಸ್ತಿ ವಿಚಾರವಾಗಿ ವಿವಾದ ಉಂಟಾಗುವ ಸಾಧ್ಯತೆ ಇದೆ. ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ, ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.
ಪರಿಹಾರ: ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸುವುದು ಒಳ್ಳೆಯದು.
ಮಕರ ರಾಶಿ
ಈ ತಿಂಗಳು ಉತ್ತಮವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಸ್ನೇಹಿತರಿಂದ ಆರ್ಥಿಕ ಲಾಭವಿದೆ, ಆದರೆ ಕೆಲಸದಲ್ಲಿ ಕೆಲವು ಸಮಸ್ಯೆಗಳಿರಬಹುದು. ಭೂಮಿಗೆ ಸಂಬಂಧಿಸಿದ ಕೆಲಸಗಳಿಂದ ದೂರವಿರಿ. ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಪರಿಹಾರ: ಪ್ರತಿ ಬುಧವಾರ ವಿಘ್ನ ನಿವಾರಕ ಗಣಪತಿ ಪೂಜೆ ಮಾಡುವುದು ಒಳ್ಳೆಯದು.
ಕುಂಭ ರಾಶಿ
ಈ ತಿಂಗಳು ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯಲಿದೆ. ವ್ಯಾಪಾರದಲ್ಲಿ ಹೊಸ ಬದಲಾವಣೆಗಳನ್ನು ನೋಡುವಿರಿ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಕುಟುಂಬ ಹಾಗೂ ಕೆಲಸದಲ್ಲಿ ಒತ್ತಡ ದೂರವಾಗುತ್ತದೆ. ಹೊಸ ವಿಷಯಗಳನ್ನು ಪ್ರಾರಂಭಿಸಲು ಉತ್ತಮ ಸಮಯ.
ಪರಿಹಾರ: ಪ್ರತಿ ಸೋಮವಾರ ಶಿವನ ಪೂಜೆ ಮಾಡುವುದು ಒಳ್ಳೆಯದು.
ಮೀನ ರಾಶಿ
ಈ ತಿಂಗಳು ಉತ್ತಮವಾಗಿರುತ್ತದೆ. ಭೂ ಲಾಭವಿದೆ, ಪೂರ್ವಿಕರ ಆಸ್ತಿಯಲ್ಲಿ ನಿಮಗೆ ಪಾಲು ದೊರೆಯಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ, ಹೊಸ ಅತಿಥಿಗಳು ಆಗಮಿಸುತ್ತಾರೆ. ಕಚೇರಿಯಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆ, ಆದರೆ ನಿಮ್ಮ ಸುತ್ತಮುತ್ತಲಿನ ಜನರೊಂದಿಗೆ ಜಾಗರೂಕರಾಗಿರಿ.
ಪರಿಹಾರ: ಪ್ರತಿ ಶುಕ್ರವಾರ ಸುಬ್ರಹ್ಮಣ್ಯಸ್ವಾಮಿಯನ್ನು ಪೂಜಿಸಿದರೆ ಉತ್ತಮ ಫಲ ನೀಡುತ್ತದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರ, ಪುರಾಣ ಕಥೆಗಳನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಿ.