ಬೇಬಿ ಶಾಮಿಲಿ, ಅವರ ನಿಜವಾದ ಹೆಸರು ಶಾಮಿಲಿ ಬಾಬು.ಇವರು ಹೆಚ್ಚಾಗಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಭಾರತೀಯ ನಟಿ. ಶಾಮಿಲಿ ಜುಲೈ 10, 1987 ರಂದು ಭಾರತದ ತಮಿಳುನಾಡಿನ ಚೆನ್ನೈನಲ್ಲಿ ಜನಿಸುತ್ತಾರೆ. ಶಾಮಿಲಿ ಚಿತ್ರರಂಗದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು ಹಾಗೂ ದಕ್ಷಿಣ ಭಾರತದ ಜನಪ್ರಿಯ ನಟಿ ಶಾಲಿನಿ ಅವರ ತಂಗಿಯಾದ್ದರಿಂದ ಇವರಿಗೆ ಸಣ್ಣ ವಯಸ್ಸಿನಲ್ಲಿಯೇ ಚಿತ್ರರಂಗ ಪ್ರವೇಶಿಸುವುದು ಸುಲಭದ ದಾರಿಯಾಗಿರುತ್ತದೆ. ಹೀಗೆ ಶ್ಯಾಮಿಲಿ 1990 ರಲ್ಲಿ “ರಾಜ ಕೈಯಾ ವಾಚಾ” ಎಂಬ ತಮಿಳು ಚಲನಚಿತ್ರದೊಂದಿಗೆ ತನ್ನ ಎರಡನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ಮೊದಲ ನಟನೆಯನ್ನು ಮಾಡುತ್ತಾರೆ. ಹಾಗೆಯೇ ತಮಿಳು ಚಲನಚಿತ್ರವಾದ “ಅಂಜಲಿ”ಯಲ್ಲಿ ಪುಟ್ಟ ಪಾತ್ರವನ್ನು ಮಾಡಿ ವ್ಯಾಪಕ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತಾರೆ.

ಚಿತ್ರದಲ್ಲಿನ ಅವರ ಅಭಿನಯವು ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆದುಕೊಳ್ಳುತ್ತದೆ ಹಾಗೂ ಅವರ ಈ ಚಿತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದೆಗಾಗಿ ಕೊಡುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. “ಅಂಜಲಿ” ಚಿತ್ರದ ಯಶಸ್ಸಿನ ನಂತರ, ಬೇಬಿ ಶಾಮಿಲಿ ಹಲವಾರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರಗಳಾದ ದಾಕ್ಷಾಯಿಣಿ, ಜಗದೀಶ್ವರಿ, ಕರುಳಿನಕುಡಿ ಮುಂತಾದ ಸಿನಿಮಾದಲ್ಲೂ ನಟಿಸುತ್ತಾರೆ ಅಷ್ಟೆ ಅಲ್ಲದೆ ವಿಷ್ಣುವರ್ಧನ್, ಲೋಕೇಶ್, ದೇವರಾಜ್ ಮುಂತಾದ ದಿಗ್ಗಜರ ಜೊತೆ ಅಭಿನಯಿಸಿದ ಹೆಗ್ಗಳಿಕೆಯೂ ಇವರಿಗಿದೆ.
ಅವರ ಕೆಲವು ಗಮನಾರ್ಹ ಚಲನಚಿತ್ರಗಳೆಂದರೆ “ಮಾಲೂಟಿ”, “ಕುಟ್ಟಿ” , ಮತ್ತು “ಓಯ್!”, ಮುಗ್ಧ ಮತ್ತು ದುರ್ಬಲರಿಂದ ಹಿಡಿದು ಚೇಷ್ಟೆಯ ಮತ್ತು ಬುದ್ಧಿವಂತರವರೆಗಿನ ವಿವಿಧ ಪಾತ್ರಗಳನ್ನು ಚಿತ್ರಿಸುವ ಮೂಲಕ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ ಶಾಮಿಲಿ ಚಿತ್ರರಂಗವನ್ನು ಬಿಟ್ಟು ಹೋಗುತ್ತಾರೆ. ತನ್ನ ಶಿಕ್ಷಣದತ್ತ ಗಮನ ಹರಿಸಲು ನಟನೆಯಿಂದ ವಿರಾಮ ತೆಗೆದುಕೊಳ್ಳುತ್ತಾರೆ. ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ಮನೋವೈದ್ಯಕೀಯ ಸಮಾಜ ಕಾರ್ಯದಲ್ಲಿ ತಮ್ಮ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸುತ್ತಾರೆ.
ಶಾಮಿಲಿ ವಯಸ್ಕ ನಟಿಯಾಗಿ ಚಿತ್ರರಂಗಕ್ಕೆ ಮರಳುತ್ತಾರೆ.ವಯಸ್ಕ ನಟಿಯಾಗಿ, ಶಾಮಿಲಿ ಮೊದಲು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಅವರು ಶಾಜಿ ಎನ್. ಕರುಣ್ ನಿರ್ದೇಶನದ ಮಲಯಾಳಂ ಚಲನಚಿತ್ರ “ಓಲು” ಸಿನಿಮಾದಲ್ಲಿ ಪ್ರಮುಖ ನಟಿಯಾಗಿ ಮತ್ತೆ ಪಾದಾರ್ಪಣೆ ಮಾಡುತ್ತಾರೆ . ಆದರೆ ಅವರು ನಾಯಕಿಯಾಗಿ ನಟಿಸಿದ ಸಿನಿಮಾಗಳು ಅಷ್ಟೊಂದು ಯಶಸ್ವುಯಾಗುವುದಿಲ್ಲ. ಶಾಮಿಲಿ ಇದೀಗ ಕಲಾವಿದೆಯಾಗಿದ್ದು ಚಿತ್ರಗಳ ರಚನೆಯನ್ನೇ ವೃತ್ತಿ, ಪ್ರವೃತ್ತಿ ಎರಡಾಗಿಯೂ ಮಾಡಿಕೊಂಡಿದ್ದಾರೆ.ಶಾಮಿಲಿ ಉದ್ಯಮಿಯಾಗಿದ್ದು ಶೀ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಚೆನ್ನೈನಲ್ಲಿ ತಮ್ಮ ಚಿತ್ರಕಲೆಯ ಪ್ರದರ್ಶನವನ್ನು ಮಾಡಿದ್ದರು. ಇದಕ್ಕೆ ಹಲವರು ನಟರು, ಸಂಗೀತ ನಿರ್ದೇಶಕರು ಆಗಮಿಸಿದ್ದರು. ಶಾಮಿಲಿ ಸಿನಿಮಾ ನಿರ್ದೇಶಿಸುವ ಕನಸನ್ನೂ ಹೊತ್ತಿದ್ದಾರೆ. ಶಾಮಿಲಿ ತನ್ನ ಪ್ರಾಜೆಕ್ಟ್ಗಳನ್ನು ಆಯ್ಕೆಮಾಡುವಲ್ಲಿ ತುಲನಾತ್ಮಕವಾಗಿ ಯೋಚಿಸಿದ್ದರೂ,ಉದ್ಯಮದಲ್ಲಿ ಗೌರವಾನ್ವಿತ ಮತ್ತು ಪ್ರತಿಭಾವಂತ ನಟಿಯಾಗಿ ಮುಂದುವರೆದಿದ್ದಾರೆ. ಅವರ ಕಲೆಗೆ ಅವರ ಸಮರ್ಪಣೆ ಮತ್ತು ಬಾಲ ಕಲಾವಿದರಿಂದ ವಯಸ್ಕ ನಟಿಯಾಗಿ ಪರಿವರ್ತನೆಯಾಗುವ ಅವರ ಸಾಮರ್ಥ್ಯವು ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ.