ರಾಕಿಂಗ್ ಸ್ಟಾರ್ ಯಶ್ ನಟನೆ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಿಂದ ಇಡೀ ದೇಶವನ್ನೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದು ‘ಕೆಜಿಎಪ್’ ಸಿನಿಮಾ. ಇದೀಗ ಆ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರು ತಮ್ಮ ಹಾಟ್&ಬೋಲ್ಡ್ ಫೋಟೋಶೂಟ್ ಮೂಲಕ ಟ್ರೆಂಡಿಂಗ್ ನಲ್ಲಿದ್ದಾರೆ. ಕೆಜಿಎಪ್-1 ಸಿನಿಮಾದಲ್ಲಿ ತನ್ನ ಮಗುವನ್ನು ಉಳಿಸಿಕೊಳ್ಳಲು ಪರದಾಡುವ ಅಸಹಾಯಕ ತಾಯಿಯಾಗಿ ನಟಿಸಿದ್ದ ರೂಪಾ ರಾಯಪ್ಪನ್ ಇದೀಗ ತುಂಡುಡುಗೆಯಲ್ಲಿ ಮಿರಮಿರ ಮಿಂಚಿದ್ದು, ಈ ಹಸಿಬಿಸಿ ಫೋಟೋ ಕಂಡು ಪಡ್ಡೆ ಹುಡುಗರು ಕಂಗಾಲಾಗಿದ್ದಾರೆ.

ಕೆಜಿಎಪ್ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ್ದರೂ ಕೂಡ ರೂಪಾ ರಾಯಪ್ಪನ್ ಅವರ ಅದ್ಭುತ ನಟನೆಗೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದ ಮೂಲಕ ರೂಪಾ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡಿದ್ದರು. ಇದೀಗ ಮತ್ತೆ ರೂಪಾ ರಾಯಪ್ಪನ್ ತಮ್ಮ ಹಸಿಬಿಸಿ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಕೆಜಿಎಪ್ ನಲ್ಲಿ ಡಿ-ಗ್ಲಾಮರ್ ಆಗಿ ಕಾಣಿಸಿಕೊಂಡ ರೂಪಾ ಫೋಟೋಶೂಟ್ ನಲ್ಲಿ ಸಕ್ಕತ್ ಗ್ಲಾಮರ್ ಆಗಿ ಕಂಗೊಳಿಸಿದ್ದಾರೆ.
ರೂಪಾ ರಾಯಪ್ಪನ್ ತಮ್ಮ ಈ ಹಾಟ್ ಫೋಟೋಗಳನ್ನಿ ಸಾಮಾಜಿಕಿ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ನಟಿಯ ಗ್ಲಾಮರ್ ಲುಕ್ ಕಂಡು ಫಿದಾ ಆಗಿದ್ದಾರೆ. ಪಡ್ಡೆ ಹುಡುಗರು ರೂಪಾ ಸೌಂದರ್ಯ ಕಂಡು ಕಂಗಾಲಾಗಿದ್ದಾರೆ. ಇನ್ನೂ ಕೆಲವರು ‘ಇಂತಹ ಫೋಟೋಶೂಟ್ ಯಾಕೆ ಮಾಡುತ್ತೀರ. ಇದು ನಿಮ್ಮ ಸೌಂದರ್ಯಕ್ಕೆ ಶೋಭೆಯಲ್ಲ’ ಎಂದು ಬುದ್ಧಿಮಾತು ಹೇಳಿದ್ದಾರೆ. ಸದ್ಯ, ರೂಪಾ ರಾಯಪ್ಪನ್ ರವಿಚಂದ್ರನ್ ನಟನೆಯ ‘ಜಡ್ಜ್ ಮೆಂಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.