ದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕುಸಿತ ಕಂಡಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಇಳಿಕೆ ಕಾಣುತ್ತಿರುವ ಹಿನ್ನೆಲೆ ಆಭರಣ ಖರೀದಿ ಸುಲಭವಾಗುತ್ತಿದೆ. ಯಾಕಂದ್ರೆ ಮದುವೆಗಳ ಸೀಸನ್ ಇನ್ನೇನು ಶುರುವಾಗುತ್ತಿದ್ದು, ಅದಕ್ಕೂ ಮೊದಲೇ ಚಿನ್ನಕ್ಕೆ ಆರ್ಡರ್ ಕೊಡಲು ಜನರಿಗೆ ಕೂಡ ಸುಲಭವಾಗಲಿದೆ.

10 ಗ್ರಾಂ ಶುದ್ಧ ಚಿನ್ನದ ದರ 1750 ರೂಪಾಯಿ ಇಳಿಕೆಯಾಗಿದ್ದು, 77,800ರೂ.ಗೆ ಮಾರಾಟವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂ ಗೆ 1,750 ರೂ.ಇಳಿಕೆಯಾಗಿದ್ದು, 77,400 ರೂಪಾಯಿಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿ ದರ ಕೆಜಿಗೆ 2700 ರೂ. ಕಡಿಮೆಯಾಗಿದ್ದು, 91,300 ರೂಪಾಯಿಗೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಚಿನ್ನದ ಬೆಲೆ ಕುಸಿತ ಕಂಡಾಗ ಷೇರು ಮಾರುಕಟ್ಟೆ ಮೇಲೆ ಏರುತ್ತದೆ ಎನ್ನುವ ವಾದ ಇದೆ. ಆದರೆ ಈಗ ಎಲ್ಲಾ ಉಲ್ಟಾ ಆಗುತ್ತಿದೆ. ಯಾಕಂದ್ರೆ ಒಂದು ಕಡೆ ಚಿನ್ನದ ಬೆಲೆ ಕುಸಿತವನ್ನ ಕಂಡರೂ, ಷೇರು ಮಾರುಕಟ್ಟೆ ಮೇಲೆ ಹೋಗುತ್ತಿಲ್ಲ. ಬದಲಾಗಿ ಷೇರು ಪೇಟೆ ಕೂಡ ಈಗ ಕುಸಿತ ಕಾಣುತ್ತಿದೆ. ಚಿನ್ನದ ಜೊತೆಯಲ್ಲಿ ಇದೀಗ ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದಲ್ಲೇ ಕುಸಿತ ಕಂಡಿದೆ.