ಶ್ರೀಮಂತ ವ್ಯಕ್ತಿಗಳಿಗೆ ವಾಹನಗಳನ್ನು ಖರೀದಿಸುವ ಕ್ರೇಜ಼್ ಇರುವುದು ಹೊಸದೇನಲ್ಲ. ಮಾರುಕಟ್ಟೆಗೆ ಬರುವ ಐಶಾರಾಮಿ ಕಾರುಗಳೆಲ್ಲ ಮೊದಲು ನಮ್ಮ ಅಂಗಳಕ್ಕೆ ಬರಬೇಕು ಎಂದೇ ಅವರು ಭಾವಿಸುತ್ತಾರೆ. ಆದರೆ ಈ ಒಂದು ಸೂಪರ್ ಕಾರು ಕುಭೇರ ಪುತ್ರ ಅಂಬಾನಿಗೂ ಸಿಕ್ಕಿಲ್ಲ. ಆದ್ರೆ ಈ ವ್ಯಕ್ತಿ ಈ ಐಶಾರಾಮಿ ಕಾರನ್ನ ಖರೀದಿ ಮಾಡಿ. ಈ ಸೂಪರ್ ಕಾರ್ ಖರೀದಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಅಷ್ಟಕ್ಕೂ ಈ ಕಾರಿನಲ್ಲಿ ಅಂತಹದ್ದೇನಿದೆ ಎಂತೀರಾ? ಈ ಸ್ಟೋರಿ ಓದಿ.

ಸೂಪರ್ ಕಾರ್ ಖರೀದಿಸಿದ್ದು ಯಾರು?
ಭಾರತದ ಫ್ಯಾಷನ್ ಮತ್ತು ಜೀವನಶೈಲಿ ಉದ್ಯಮದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಪರ್ಪಲ್ ಸ್ಟೈಲ್ ಲ್ಯಾಬ್ಸ್ ಸಿಇಒ ಅಭಿಷೇಕ್ ಅಗರ್ವಾಲ್ ಸೂಪರ್ ಕಾರೊಂದನ್ನ ಖರೀದಿಸಿ ಸುದ್ದಿಯಲಿದ್ದಾರೆ. ಅವರು ಸೂಪರ್ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವ ಮೆಕ್ಲಾರೆನ್ ಅರ್ಟುರಾ ಸೂಪರ್ ಕಾರಿನೊಂದಿಗೆ ತೆಗೆಸಿಕೊಂಡಿದ್ದಾರೆ.
ಪ್ರಸಿದ್ಧ ಫೋಟೋಗ್ರಫರ್ ವೈರಲ್ ಭಯಾನಿ ಅವರು ಈ ಫೋಟೋಗಳನ್ನು ತೆಗೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇದೊಂದು ಹೈಬ್ರಿಡ್ ಕಾರಾಗಿರುವುದರಿಂದ ಮೆಕ್ಲಾರೆನ್ ಅರ್ಟುರಾ ಅತ್ಯುತ್ತಮ ಮೈಲೇಜ್ ನೀಡುವುದು ಗ್ಯಾರಂಟಿ ಎನ್ನಲಾಗಿದೆ. ಈ ಸೂಪರ್ ಕಾರು ಲೀ.ಗೆ 20 ರಿಂದ 22 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದು ಕೇವಲ 3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವಷ್ಟು ಸಶಕ್ತವಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಜೊತೆಗೆ ಇ-ಮೋಡ್, ಕಂಫರ್ಟ್ ಮೋಡ್, ಸ್ಪೋರ್ಟ್ ಮೋಡ್ ಮತ್ತು ಟ್ರ್ಯಾಕ್ ಮೋಡ್ ಎಂಬ ಒಟ್ಟು 4 ಡ್ರೈವಿಂಗ್ ಮೋಡ್ಗಳು ಲಭ್ಯವಿದೆ. ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಮಾರ್ಟ್ಫೋನ್ ಮಿರರಿಂಗ್ ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಇನ್ನು ಕಾರಿನ ಬೆಲೆ 5.09 ಕೋಟಿ ರೂ. ನಿಂದ ಆರಂಭವಾಗಲಿದೆ. ಈ ಕಾರಿನ ತೂಕ ಕೇವಲ 1,489 ಕೆ.ಜಿ. ಹಾಗಾಗಿಯೇ ಈ ಕಾರು ಕೂಡ 3 ಕೇವಲ ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಈ ಕಾರಿನಲ್ಲಿದೆ.