ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ T20 ವಿಶ್ವಕಪ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ಗೆದ್ದಿದೆ. ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಗೆಲುವಿನ ನಂತ್ರ ಹಾರ್ದಿಕ್ ತುಂಬಾ ಭಾವುಕರಾಗಿದ್ರು. ಈ ಗೆಲುವಿನ ನಂತ್ರ, ತಮ್ಮ ಕ್ರಿಕೆಟ್ಗಾಗಿ ತಮ್ಮ ಕುಟುಂಬವು ಮಾಡಿದ ತ್ಯಾಗವನ್ನ ನೆನಪಿಸಿಕೊಂಡರು ಮತ್ತು ನಂತ್ರ ಮೈದಾನದಲ್ಲಿ ತಮ್ಮ ಅಳಲು ತೋಡಿಕೊಂಡರು.
ಅಳುತ್ತಲೇ ಹಾರ್ದಿಕ್ ಅವರು ತಮ್ಮ ಕ್ರಿಕೆಟ್ಗಾಗಿ ಕುಟುಂಬದವರು ಮಾಡಿದ ಶ್ರಮ ಮತ್ತು ತ್ಯಾಗವನ್ನು ನೆನಪಿಸಿಕೊಂಡರು. ತಮಗಾಗಿ ಅವರು ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆರಳಿದರು. ಸ್ವಂತ ಮಗನನ್ನ ತುಂಬಾ ಪ್ರೀತಿಸುವ ತಂದೆ ಮತ್ತು ಕುಟುಂಬಸ್ಥರು ಮಾಡಿದ ತ್ಯಾಗ ದೊಡ್ಡದು ಎಂದು ಪಾಂಡ್ಯ ವಿಡಿಯೋದಲ್ಲಿ ಹೇಳಿದ್ದಾರೆ.
ಪಂದ್ಯದ ಮುಕ್ತಾಯದ ನಂತರ ಪ್ರಸಾರ ತಂಡದೊಂದಿಗೆ ಹಾರ್ದಿಕ್ ಪಾಂಡ್ಯ ಮಾತನಾಡಿ, “ನನ್ನ ತಂದೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನಾನು ನನ್ನ ತಂದೆಯ ಬಗ್ಗೆ ಅಳಲಿಲ್ಲ. ನಾನು ನನ್ನ ಮಗನನ್ನು ಪ್ರೀತಿಸುತ್ತೇನೆ, ಆದರೆ ನನ್ನ ತಂದೆ ನನಗಾಗಿ ಮಾಡಿದ್ದನ್ನು ನಾನು ಅವನಿಗೆ ಮಾಡಲು ಸಾಧ್ಯವಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ. ಅವರು ಆರು ಬಾರಿ ನಗರಗಳನ್ನು ಬದಲಾಯಿಸಿದರು. ಈ ಗೆಲುವನ್ನು ಅವರಿಗೆ ಸಮರ್ಪಿಸಲು ಬಯಸುತ್ತೇನೆ” ಎಂದು ಹೇಳಿದರು