ಸೆಲೆಬ್ರಿಟಿಗಳು ಹಾಗೂ ವಿವಾದ ಇವೆರಡು ಒಂದೇ ನಾಣ್ಯದ ಎರಡು ಮುಖಗಳಂತಾಗಿದೆ ಇಂದಿನ ಪರಿಸ್ಥಿತಿ. ಕ್ರೀಡೆ, ಸಿನಿಮಾ ರಂಗದ ಸೆಲೆಬ್ರಿಟಿಗಳು ದಿನಕ್ಕೊಂದು ವಿವಾದದೊಂದಿ್ಎ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಟೀಂ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ ಆ ಸರದಿಯಲ್ಲಿದ್ದಾರೆ. 3 ವರ್ಷಗಳ ಹಿಂದೆ ಕೊರೋನಾ ಸಮಯದಲ್ಲಿ ಸಿಂಪಲ್ಲಾಗಿ ವಿವಾಹವಾಗಿದ್ದ ಹಾರ್ದಿಕ್ ಮತ್ತು ನತಾಶಾ ಜೋಡಿ ಇತ್ತೀಚೆಗಷ್ಟೇ, ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಅದ್ದೂರಿಗಿ ಮತ್ತೆ ವಿವಾಹವಾಗಿದ್ದಾರೆ.ಈ ನಡುವೆ ಇವರಿಬ್ಬರ ಬೆಡ್ ರೂಂ ಹಸಿಬಿಸಿ ಫೋಟೋಗಳು ವೈರಲ್ ಆಗಿದ್ದು ನೆಟ್ಟಿಗರು ಕೋಪದಿಂದ ಬೆಂಕಿಯುಗುಳುತ್ತಿದ್ದಾರೆ.

ಇದೇ ವರ್ಷ ಫೆಬ್ರವರಿಯಲ್ಲಿ ಹಾರ್ದಿಕ್ ಮತ್ತು ನತಾಶಾ ಜೋಡಿ ಅದ್ದೂರಿಯಾಗಿ ಸಿನಿಮಾ, ಕ್ರೀಡಾ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿವಾಹವಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ದಂಪತಿ ಸಮೇತ ವಿವಾಹದಲ್ಲಿ ಪಾಲ್ಗೊಂಡದ್ದಷ್ಟೇ ಅಲ್ಲದೆ ಯಶ್ ಹಾಗೂ ಹಾರ್ದಿಕ್ ಒಟ್ಟಿಗೆ ಸ್ಟೆಪ್ ಹಾಕಿದ್ದರು. ಇದೀಗ ಹಾರ್ದಿಕ್ ದಂಪತಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೆಡ್ ರೂಂ ನಲ್ಲಿ ಕ್ಲಿಕ್ಕಿಸಿದ ಹಸಿಬಿಸಿ ಫೋಟೋಗಳನ್ನು ಹಂಚಿಕೊಂಡಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮತ್ತೆ ವಿವಾಹವಾದ ಈ ಜೋಡಿ ಬೆಡ್ ರೂಂ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾರ್ದಿಕ್ ಕಪ್ಪು ಡ್ರೆಸ್ ಹಾಗೂ ನತಾಶಾ ಬ್ಲಾಕ್ & ವೈಟ್ ಡ್ರೆಸ್ ತೊಟ್ಟು ಮಿಂಚಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿ ಇವರಿಬ್ಬರು ಮಂಚದ ಮೇಲೆ ಕುಳಿತು ಪರಸ್ಪರ ಚುಂಬಿಸುವ ರೀತಿ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.ಅಷ್ಟಕ್ಕೇ ಸುಮ್ಮನಾಗದ ಈ ಕಿರಿಕ್ ಜೋಡಿ ಆ ಫೋಟೋಗಳನ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಜೋಡಿಯ ಹಸಿಬಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆಕ್ರೋಶಗೊಂಡ ನೆಟ್ಟಿಗರು, ‘ನಿಮ್ಮ ಮನೆಯ ರೂಂ ನಲ್ಲಿ ಕಿಸ್ಸಿಂಗ್ ಮಾಡಿ ಅದನ್ನು ಊರಿಗೆಲ್ಲ ಯಾಕೆ ಹಂಚುತ್ತೀರಿ. ಕ್ರಿಕೆಟ್ ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರನಿಗೆ ಇಂತಹ ವರ್ತನೆಗಳು ಸೂಕ್ತವಲ್ಲ. ಇಂತಹ ತೋರಿಕೆಯ ಅಸಭ್ಯತೆ ನಮ್ಮ ಸಂಸ್ಕೃತಿಯಲ್ಲ’ ಎಂದು ಹಾರ್ದಿಕ್ ಪಾಂಡ್ಯಾಗೆ ಬುದ್ಧಿ ಹೇಳಿದ್ದಾರೆ. ಆದರೆ ನೆಟ್ಟಿಗರ ಯಾವ ಪ್ರಶ್ನೆಗೂ, ಬೈಗುಳಕ್ಕೂ ಹಾರ್ದಿಕ್ & ನತಾಶಾ ಜೋಡಿ ಮರು ಉತ್ತರಿಸಿಲ್ಲ.