ಪ್ರಸ್ತುತ ವಿದ್ಯಮಾನವನ್ನು ನೋಡುತ್ತಾ ಹೋದರೆ ತಾವಾಗಿಯೇ ತಮ್ಮ ಪ್ರತಿಭೆಯ ಮೂಲಕ ಪ್ರಸಿದ್ದರಾದವರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಪ್ರಮುಖರು ಡಾ. ಬ್ರೋ. ಕನ್ನಡದ ಜನತೆಗೆ ಯೂಟ್ಯೂಬ್ ಮೂಲಕ ದೇಶ ವಿದೇಶಗಳ ಪರಿಚಯ ಮಾಡಿಸುತ್ತಾ ಫುಲ್ ಫೇಮಸ್ ಆಗಿದ್ದಾರೆ. ಇವರ ಮಾತಿನ ಶೈಲಿಗೆ ಜನ ಕೂಡಾ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಇವರಿಗೆ ಇನ್ಸ್ಟಾಗ್ರಾಮ್ನಲ್ಲಿ 9ಲಕ್ಷದ ಇಪ್ಪತ್ತು ಸಾವಿರ ಫಾಲ್ಲೋರ್ಸ್ ಇದ್ದು ಒಂದು ಪೋಸ್ಟ್ ಮಾಡಿದರೆ ಸಾಕು ಕ್ಷಣಮಾತ್ರದಲ್ಲಿ ಲಕ್ಷಕ್ಕೂ ಮೀರಿ ವೀವ್ಸ್ ಹಾಗೂ ಲೈಕ್ಸ್ ಪಡೆದುಕೊಳ್ಳುತ್ತದೆ.

ಏನೂ ಇಲ್ಲದೆ ತನ್ನಷ್ಟಕ್ಕೆ ತಾನೇ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಇದೀಗ ಅದರಿಂದಲೇ ಸಾವಿರಗಟ್ಟಲೆ ಸಂಪಾದಿಸುತ್ತಾರೆ. ಮನುಷ್ಯನಿಗೆ ಅಸಾಧ್ಯ ಯಾವುದೂ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ . ಇದೀಗ ಡಾ. ಬ್ರೋ ಸ್ಯಾಂಡಲ್ ವುಡ್ ನ ಸ್ಟಾರ್ ನಟರನ್ನು ಭೇಟಿ ಮಾಡಿ ಅದರ ಸಂತೋಷವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟರ ಜೊತೆಗಿನ ಫೋಟೋಗಳನ್ನು ಹಾಕಿ “ನಾನು ಚಿಕ್ಕಂದಿನಿಂದ ಎಲ್ಲರನ್ನು ನೋಡ್ತಾ ಇದ್ದೆ. ಇಂದು ಅಚಾನಕ್ಕಾಗಿ ಎಲ್ಲರನ್ನೂ ಒಟ್ಟಾಗಿ ನೋಡಿ ಸೈಕ್ ಆದೆ “ಎಂಬ ಶೀರ್ಷಿಕೆಯನ್ನೂ ಹಾಕಿದ್ದಾರೆ.
ಕನ್ನಡದ ಸೆಲೆಬ್ರಿಟಿಸ್ ಗಳಾದ ಡಾಲಿ ಧನಂಜಯ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ ಇವರೆಲ್ಲರ ಜೊತೆ ತೆಗೆದುಕೊಂಡ ಸೆಲ್ಫೀ ಗೆ 1500ಕ್ಕೂ ಹೆಚ್ಚು ಕಾಮೆಂಟ್ ಬಂದಿದೆ. ಇದಕ್ಕೆ ಕೆಲ ಫ್ಯಾನ್ಸ್ “ಹಿಂದೆ ನಿಂತಿರೋರು ಕನ್ನಡ ಚಿತ್ರರಂಗದವರು, ಮುಂದೆ ನಿಂತಿರೋರು ಚರಿತ್ರೆ ನ ಸೃಷ್ಟಿಸಿದವರು ” ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೂ ಇನ್ನೂ ಕೆಲವರು” ಸೆಲೆಬ್ರಿಟ್ಸ್ ನಿಮ್ಮನ್ನ ನೋಡೋಕೆ ಪುಣ್ಯ ಮಾಡಿದ್ರು “ಎಂದೂ ಹೇಳಿದ್ದಾರೆ.
ಅಷ್ಟಕ್ಕೂ ಡಾ. ಬ್ರೋ ಕನ್ನಡ ಸ್ಟಾರ್ ಗಳನ್ನು ಭೇಟಿ ಆಗಿದ್ದು ಎಲ್ಲಿ ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಬಂದಿಲ್ಲ. ಮೂಲಗಳು ದುಬೈ ಎಂದು ತಿಳಿಸಿದೆ. ಡಾ. ಬ್ರೋ ನನ್ನು ಜಿ ಕನ್ನಡದಲ್ಲಿ ಪ್ರಸಾರ ವಾಗುತ್ತಿದ್ದ ವೀಕೆಂಡ್ ವಿಥ್ ರಮೇಶ್ ಗೆ ಕರಿಸುಕೊಳ್ಳುವ ಬಗ್ಗೆಯೂ ಚರ್ಚೆ ನಡೆದಿತ್ತು. ಇದಕ್ಕೆ ಕೆಲವು ಪಾಸಿಟಿವ್ ಕಾಮೆಂಟ್ ಬಂದರೆ ಇನ್ನೂ ಕೆಲವರು ಕಾಲೆಳೆಯುವ ಕೆಲಸ ಮಾಡಿದ್ದಾರೆ. ಇದಕ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಡಾ. ಬ್ರೋ ತಮ್ಮ ಕೆಲಸ ಮುಂದುವರೆಸುತ್ತಿದ್ದಾರೆ.