ಬಿಗ್ ಬಾಸ್ ಶೋ ಮುಗಿದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಶುರುವಾಗಿದೆ. ಈ ಶೋ ವಿಭಿನ್ನವಾಗಿ ಮೂಡಿ ಬರುತ್ತಿದ್ದು, ಹುಡುಗರು ಹುಡುಗಿಯರ ನಡುವಿನ ಜಿದ್ದಾಜಿದ್ದಿ ಈ ಶೋನಲ್ಲಿ ಇರಲಿದೆ. ಅನುಪಮಾ ಗೌಡ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಮೂಲಕ ನಿರೂಪಣೆಗೆ ವಾಪಸ್ ಬಂದಿದ್ದಾರೆ. ಇನ್ನು ನಟಿಯರಾದ ಶ್ರುತಿ ಅವರು ಮತ್ತು ತಾರಾ ಅವರು ಈ ಶೋಗೆ ಬಂದಿದ್ದು, ಶುಭಾ ಪೂಂಜಾ ಅವರು ಹುಡುಗಿಯರ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾರೆ, ಹುಡುಗರ ತಂಡಕ್ಕೆ ವಿನಯ್ ಗೌಡ ಕ್ಯಾಪ್ಟನ್ ಆಗಿದ್ದಾರೆ. ಮೊದಲ ವಾರವೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಎಲ್ಲರ ಗಮನ ಸೆಳೆದಿದೆ. ಈ ಶೋ ನಿವೇದಿತಾ ಗೌಡ ಸಹ ಬಂದಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷಯ ಆಗಿದೆ.
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಶೋ ಮೂಲಕವೇ ಕಾಮನ್ ಮ್ಯಾನ್ ಆಗಿದ್ದ ನಿವೇದಿತಾ ಗೌಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲೇ ಬೇರೆ ಬೇರೆ ಶೋಗಳಲ್ಲಿ ಭಾಗವಹಿಸಿದ್ದಾರೆ. ಚಂದನ್ ಶೆಟ್ಟಿ ಅವರ ಜೊತೆಗೆ ಮದುವೆಯಾದ ನಂತರ ಇದೇ ವಾಹಿನಿಯ ರಾಜಾ ರಾಣಿ ಶೋನಲ್ಲಿ ಜೋಡಿಯಾಗಿ ಭಾಗವಹಿಸಿದ್ದರು ನಿವೇದಿತಾ ಗೌಡ. ಆದರೆ ಕಳೆದ ವರ್ಷ ಚಂದನ್ ಅವರಿಂದ ವಿಚ್ಛೇದನ ಪಡೆದ ಬಳಿಕ ನಿವೇದಿತಾ ಅವರು ಯಾವುದೇ ಶೋಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹೊರದೇಶಕ್ಕೆ ಟ್ರಿಪ್ ಗೆ ಹೋಗುತ್ತಾ ಬ್ಯುಸಿ ಆಗಿದ್ದರು. ಹಾಗೆಯೇ ಒಂದು ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಫ್ರೆಂಡ್ಸ್ ಜೊತೆಗೆ ಟ್ರಿಪ್ ಎಂದು ಬಹಳ ಓಡಾಡುತ್ತಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಹಲವು ಪೋಸ್ಟ್ ಗಳನ್ನು ಮಾಡಿದ್ದರು. ಆದರೆ ಈ ವರ್ಷ 2025ರಲ್ಲಿ ನಿವೇದಿತಾ ಗೌಡ ಅವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಶೋ ನ ಲಾಂಚ್ ಕಾರ್ಯಕ್ರಮಕ್ಕೆ ವಿಶೇಷವಾಗಿ ಫ್ರಾಕ್ ಹಾಕಿಕೊಂಡು ಬಂದಿದ್ದರು ನಿವೇದಿತಾ. ಇನ್ನು ಎಲ್ಲರ ಗಮನ ಸೆಳೆದಿದ್ದು ನಿವೇದಿತಾ ಅವರ ಉಗುರುಗಳು. ಸುಮಾರು 2 ರಿಂದ 3 ಇಂಚುಗಳಷ್ಟು ಉದ್ದದ ಉಗುರು ಬೆಳೆಸಿದ್ದಾರೆ ನಿವಿ. ಇದನ್ನು ನೋಡಿ ಖುದ್ದು ಅನುಪಮಾ ಗೌಡ ಶಾಕ್ ಆಗಿದ್ದರು. ಇನ್ನು ಶ್ರುತಿ ಅವರು ಸಹ ನಿವೇದಿತಾ ಅವರಿಗೆ ಈ ಉಗುರಿನ ಬಗ್ಗೆ ಪ್ರಶ್ನೆ ಕೇಳಿದರು. ಇಷ್ಟು ಉದ್ದದ ಉಗುರು ಬೆಳೆಸಿದ್ದೀಯಲ್ಲ ನಿವೇದಿತಾ ಅಕಸ್ಮಾತ್ ಯಾರಾದರೂ ಮುದ್ದೆ ತಿನ್ನೋದಕ್ಕೆ ಕೊಟ್ಟುಬಿಟ್ರೆ ಹೇಗೆ ತಿಂತೀಯಾ ಎಂದು ಕೇಳಿದರು. ಇದಕ್ಕೆ ನಿವೇದಿತಾ ಕೊಟ್ಟ ಉತ್ತರ ಕೇಳಿ ಎಲ್ಲರೂ ನಕ್ಕರು.

ಶ್ರುತಿ ಅವರು ಕೇಳಿದ ಪ್ರಶ್ನೆಗೆ ನಿವೇದಿತಾ ಅವರು ಕೊಟ್ಟ ಉತ್ತರ ಏನು ಎಂದರೆ, ನಾನು ಮುದ್ದೆಯನ್ನು ಸಾಮಾನ್ಯವಾಗಿ ಫೋರ್ಕ್ ನಲ್ಲಿ ಅಥವಾ ಸ್ಪೂನ್ ನಲ್ಲಿ ತಿಂತೀನಿ. ಈಗ ನನ್ನ ಉಗುರನ್ನೇ ಫೋರ್ಕ್ ಥರ ಉಪಯೋಗಿಸಿ, ಮುದ್ದೆ ಮುರಿಯುತ್ತೀನಿ. ಫೋರ್ಕ್ ನಲ್ಲಿ ಇರುವ ಹಾಗೆ ಮಧ್ಯದಲ್ಲಿ ಕಟ್ ಮಾಡಿಸಿಕೊಂಡು ಅದರಲ್ಲೇ ಮುದ್ದೆ ಮುರಿದು, ಮುದ್ದೆ ತಿನ್ನುವ ಹಾಗೆ ತಿನ್ನುತ್ತೀನಿ ಎಂದು ನಿವೇದಿತಾ ಗೌಡ ಉತ್ತರ ಕೊಟ್ಟಿದ್ದು, ಈ ಉತ್ತರ ಕೇಳಿ ಖುದ್ದು ಶ್ರುತಿ ಅವರೇ ಶಾಕ್ ಆಗಿದ್ದಾರೆ. ಇನ್ನು ಅನುಪಮ ಗೌಡ ಅವರು ಹನುಮಂತನಿಗೆ ಈ ಉಗುರುಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದೆಲ್ಲಾ ನಿಜವಾದ ಉಗುರುಗಳು ಹನುಮಂತ, ಇದನ್ನ ನೋಡಿದ್ರೆ ನಿನಗೆ ಏನು ಅನ್ನಿಸುತ್ತದೆ ಎಂದು ಪ್ರಶ್ನೆ ಕೇಳಿದ್ದು, ಇದಕ್ಕೆ ಹನುಮಂತ ಉತ್ತರ ಕೊಟ್ಟಿದ್ದು ಒಂದೇ ಲೈನ್ ನಲ್ಲಿ ಆದರೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾನೆ.

ನಿವೇದಿತಾ ಗೌಡ ಅವರ ಉಗುರಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಹನುಮಂತ, ನಾನು ಒಂದು ಉಗುರು ಬೆಳೆಸಿದ್ದೀನಿ ಕೆರೆದುಕೊಳ್ಳೋದಕ್ಕೆ ಎಂದು ಹೇಳಿದ್ದಾನೆ. ಹನುಮಂತನ ಈ ಮಾತು ಕೇಳಿ ಅಲ್ಲಿದ್ದ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಹೆಚ್ಚಾಗಿ ಏನನ್ನು ಹೇಳದೆ ಹೋದರು ಒಂದೇ ಮಾತಲ್ಲಿ ಠಕ್ಕರ್ ಕೊಟ್ಟಿದ್ದಾನೆ ಹನುಮಂತ. ಇನ್ನು ನಿವೇದಿತಾ ಅವರು ವಿಚ್ಛೇದನ ಪಡೆದ ನಂತರ ಮೊದಲ ಬಾರಿಗೆ ಒಂದು ಶೋ ಮೂಲಕ ಕಿರುತೆರೆಗೆ ಬಂದಿದ್ದು, ಈ ಶೋ ಇಂದ ಇವರಿಗೆ ಸಕ್ಸಸ್ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಎಂದಿದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ ನಿವಿ. ಏನೇ ಪೋಸ್ಟ್ ಮಾಡಿದರು ನೆಗಟಿವ್ ಕಾಮೆಂಟ್ ಗಳೇ ಹೆಚ್ಚಾಗಿ ಬರುತ್ತದೆ.