ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸರಿಗಮಪ ಖ್ಯಾತಿಯ ಹನುಮಂತ, ಮೊದಲನೆಯ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಹನುಮಂತ ಹಾಡಿನಲ್ಲಿ ನಿಸ್ಸೀಮ, ಹಾಡುತ್ತಲೇ ಕನ್ನಡಿಗರ ಮನಗೆದ್ದು, ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಟ್ರೋಫಿ ಗೆದ್ದ ಹನುಮಂತ. ಈತನ ಮುಗ್ಧತೆ ಜನರಿಗೆ ಅಚ್ಚುಮೆಚ್ಚು ಎಂದರೂ ತಪ್ಪಲ್ಲ. ತನ್ನ ಉತ್ತರ ಕರ್ನಾಟಕದ ಶೈಲಿಯ ಭಾಷೆಯ ಮೂಲಕ ಎಲ್ಲರ ಮನಸ್ಸು ಗೆಲ್ಲುವ ಹುಡುಗ ಹನುಮಂತ. ಇದೀಗ ಬಿಗ್ ಬಾಸ್ ಮನೆಯೊಳಗೆ ತನ್ನ ಲವ್ ಸ್ಟೋರಿ ರಿವೀಲ್ ಮಾಡಿದ್ದಾನೆ, ತನ್ನ ಹುಡುಗಿ ಬಗ್ಗೆ ಮಾತನಾಡಿದ್ದಾನೆ.

ಹನುಮಂತ ಬಿಗ್ ಬಾಸ್ ಮನೆಯಲ್ಲಿ ಬಂದಾಗ ಎಲ್ಲರೂ ಆತನನ್ನು ತುಂಬಾ ಸೈಲೆಂಟ್, ಮುಗ್ಧ ಅಂದುಕೊಂಡಿದ್ದರು, ಹನುಮಂತ ಮುಗ್ಧ ಎನ್ನುವುದು ನಿಜ, ಆದರೆ ಬುದ್ಧಿವಂತ ಕೂಡ ಹೌದು. ಚಾಣಾಕ್ಷ ತನದಿಂದ ಟಾಸ್ಕ್ ಗಳನ್ನು ಚೆನ್ನಾಗಿ ಆಡಿ, ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಹನುಮಂತ. ಬಿಗ್ ಮನೆಯೊಳಗೆ ಕ್ಯಾಪ್ಟನ್ ಆಗಿ ತನ್ನದೇ ಆದ ಹವಾ ಸೃಷ್ಟಿಸಿದ್ದಾನೆ. ಎಲ್ಲಾ ಸ್ಪರ್ಧಿಗಳು ಇವನ ಚಾಣಾಕ್ಷತನ ನೋಡಿ ಆಶ್ಚರ್ಯಪಟ್ಟಿದ್ದಾರೆ ಎಂದರು ತಪ್ಪಲ್ಲ. ಒಬ್ಬ ಸ್ಪರ್ಧಿಯಾಗಿ ಟಾಸ್ಕ್ ಗಳನ್ನು ಉತ್ತಮವಾಗಿ ನಿಭಾಯಿಸುತ್ತಿರುವ ಹನುಮಂತ ಇದೀಗ ಹುಡುಗಿ ವಿಷಯದಿಂದಲೂ ಭಾರಿ ಸುದ್ದಿಯಾಗಿದ್ದಾನೆ.
ಹೌದು, ಹನುಮಂತ ತನ್ನ ಹುಡುಗಿಯ ವಿಚಾರಕ್ಕೆ ಸುದ್ದಿ ಆಗಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಸರಿಗಮಪ ಕಾರ್ಯಕ್ರಮ ನಡೆದ ನಂತರ ಕೂಡ ಹನುಮಂತನ ಮದುವೆ ಬಗ್ಗೆ, ಆತನ ಹುಡುಗಿಯ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಇದೆಲ್ಲಾ ಗಾಸಿಪ್ ಗಳೇ ಹೊರತು ಹನುಮಂತ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಬಿಗ್ ಬಾಸ್ ಮನೆಯೊಳಗೆ ಮೊದಲ ಬಾರಿಗೆ ತನ್ನ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ. ಹನುಮಂತನಿಗೆ ಗರ್ಲ್ ಫ್ರೆಂಡ್ ಇದ್ದಾರಾ ಎಂದು ಗೌತಮಿ ಅವರು ಕೇಳಿದ್ದಕ್ಕೆ ಉತ್ತರ ಕೊಟ್ಟ ಹನುಮಂತ, ಹುಡುಗಿ ಇದ್ದಾಳೆ, ಊರಿಗೆ ಹೋಗ್ತಿದ್ದ ಹಾಗೆ ಮದುವೆ ಆಗ್ತೀನಿ ಎಂದು ಹೇಳಿದ್ದಾನೆ.

ಆಕೆ ತುಂಬಾ ಮುದ್ದಾಗಿದ್ದಾಳೆ ಎಂದು ತನ್ನ ಹುಡುಗಿಯ ಬಗ್ಗೆ ವಿವರಿಸಿದ್ದಾನೆ ಕೂಡ. ಇನ್ನು ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಕೂಡ ಹನುಮಂತನ ಹುಡುಗಿಯ ಬಗ್ಗೆ ತಮಾಷೆ ಮಾಡುತ್ತಿದ್ದರು, ಹನುಮಂತ ಹುಡುಗಿ ಹೇಗಿದ್ದಾಳೆ ಎಂದು ಊಹೆ ಮಾಡಿ, ಚಿತ್ರ ಬಿಡಿಸಬೇಕೆಂದು ಗೋಲ್ಡ್ ಸುರೇಶ್ ಅವರಿಗೆ ಟಾಸ್ಕ್ ಕೊಟ್ಟರು, ಗೋಲ್ಡ್ ಸುರೇಶ್ ಬಿಡಿಸಿದ ಚಿತ್ರ ಹನುಮಂತನಿಗೆ ಇಷ್ಟವಾಗಲಿಲ್ಲ. ಬಳಿಕ ಗೌತಮಿ ಅವರಿಗೆ ಚಿತ್ರ ಬಿಡಿಸಲು ಹೇಳಲಾಯಿತು. ಗೌತಮಿ ಅವರು ಬಿಡಿಸಿದ ಚಿತ್ರ ಹನುಮಂತನಿಗೆ ಬಹಳ ಇಷ್ಟವಾಗಿದೆ, ತನ್ನ ಹುಡುಗಿಯ ಹಾಗೆಯೇ ಈ ಚಿತ್ರವಿದೆ ಎಂದಿದ್ದಾನೆ ಹನುಮಂತ.
ಇನ್ನು ಸುದೀಪ್ ಅವರ ಎದುರು ತನ್ನ ಹುಡುಗಿ ಹೇಗಿದ್ದಾಳೆ ಅನ್ನೋದನ್ನ ಒಂದು ಸುಂದರವಾದ ಹಾಡಿನ ಮೂಲಕ ಬಣ್ಣಿಸಿದ್ದನೇ ಹನುಮಂತ. ಈ ಹಾಡನ್ನ ಕೇಳಿ ಮನೆಮಂದಿ ಹಾಗೂ ಸುದೀಪ್ ಅವರು ಮೆಚ್ಚಿಕೊಂಡರು. ಹನುಮಂತನ ಲವ್ ಸ್ಟೋರಿ ಈಗ ಸಿಕ್ಕಾಪಟ್ಟೆ ಪಾಪ್ಯುಲರ್ ಆಗುತ್ತಿದೆ. ಇಷ್ಟು ದಿವಸ ಮುಗ್ಧತೆ ಇಂದ ಎಲ್ಲರ ಗಮನ ಸೆಳೆದಿದ್ದ ಹನುಮಂತ ಈಗ ತನ್ನ ಹುಡುಗಿಯ ವಿಚಾರದಿಂದ ವೈರಲ್ ಆಗಿದ್ದಾನೆ. ಹನುಮಂತನ ಹುಡುಗಿ ಹೇಗಿದ್ದಾಳೆ ಎಂದು ನೇರವಾಗಿ ನೋಡೋದಕ್ಕೆ ಜನರು ಕೂಡ ಕಾಯುತ್ತಿದ್ದಾರೆ.