ಕನ್ನಡ ಕಿರುತೆರೆತ ಅತಿದೊಡ್ಡ ರಿಯಾಲಿಟಿ ಬಿಗ್ ಬಾಸ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಈ ಶೋ ನೋಡುವವರು ರಾಜ್ಯದ ಎಲ್ಲೆಡೆ ಇದ್ದಾರೆ, ಕಿಚ್ಚ ಸುದೀಪ ಅವರ ನಿರೂಪಣೆ ನೋಡುವ ಸಲುವಾಗಿಯೇ ಅದೆಷ್ಟೋ ಜನರು ಬಿಗ್ ಬಾಸ್ ಶೋ ನೋಡುತ್ತಾರೆ ಎಂದರೆ ತಪ್ಪಲ್ಲ. ಇದೀಗ ಬಿಗ್ ಬಾಸ್ ಶೋ ನ ಸ್ಪರ್ಧಿಯ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಆ ಸ್ಪರ್ಧಿ ಮತ್ಯಾರು ಅಲ್ಲ, ಸರಿಗಮಪ ಖ್ಯಾತಿಯ ಹನುಮಂತ.
ಹೌದು, ಬಿಗ್ ಬಾಸ್ ಮನೆಗೆ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಹನುಮಂತ. ಈ ಹುಡುಗ ಬಹಳ ಸಾಧು ಹಾಗು ಸಾಫ್ಟ್ ಸ್ವಭಾವದ ಹುಡುಗ. ಹನುಮಂತ ಅವರನ್ನು ನೋಡಿದರೆ ಬಹಳ ಮುಗ್ಧರು ಎಂದು ಗೊತ್ತಾಗುತ್ತದೆ, ಅವರು ಇರುವುದು ಹಾಗೆಯೇ. ಹೆಚ್ಚಾಗಿ ಯಾರ ವಿಷಯಕ್ಕೂ ಹೋಗದೆ, ತಾವಾಯ್ತು ತಮ್ಮ ಪಾಡಾಯ್ತು ಎಂದು ಇರುವ ಹುಡುಗ ಹನುಮಂತ. ಬಿಗ್ ಬಾಸ್ ಮನೆಗೆ ಅಡ್ಜಸ್ಟ್ ಆಗುವುದಕ್ಕೆ ಇವರಿಗೆ ಸ್ವಲ್ಪ ಕಷ್ಟವೂ ಆಗುತ್ತಿದೆ.


ಯಾರೊಂದಿಗೂ ಜಗಳ ಆಡುವುದಕ್ಕೆ ಇಷ್ಟಪಡದ ಹುಡುಗ, ತನ್ನ ಶ್ರಮದಿಂದ ತನ್ನಿಂದ ಆಗುವ ರೀತಿಯಲ್ಲಿ ಆಟ ಆಡುತ್ತಿದ್ದಾನೆ. ಬಿಗ್ ಬಾಸ್ ಮನೆಯೊಳಗೆ ಹನುಮಂತ ಇರುವ ರೀತಿ, ಆತನ ನಡವಳಿಕೆ ಎಲ್ಲವನ್ನು ನೋಡಿ ಅಭಿಮಾನಿಗಳು ಇಂಥ ವ್ಯಕ್ತಿ ಶೋ ಗೆಲ್ಲಬೇಕು ಎನ್ನುತ್ತಿದ್ದಾರೆ. ಹೌದು, ಹೊರಗಡೆ ಹನುಮಂತನಿಗೆ ಭರ್ಜರಿ ಸಪೋರ್ಟ್ ವ್ಯಕ್ತವಾಗುತ್ತಿದೆ. ಕಳೆದ ಸೀಸನ್ ನಲ್ಲಿ ಡ್ರೋನ್ ಪ್ರತಾಪ್ ಅವರಿದ್ದ ಹಾಗೆ ಈ ವರ್ಷ ಹನುಮಂತ ಬಿಗ್ ಬಾಸ್ ಮನೆಯೊಳಗೆ ಇದ್ದಾನೆ.
ಈ ವರ್ಷ ಹನುಮಂತ ಫಿನಾಲೆವರೆಗು ತಲುಪಬೇಕು. ಡ್ರೋನ್ ಪ್ರತಾಪ್ ಹಾಗೆಯೇ ಟಾಪ್ 2 ನಲ್ಲಿ ಬರಬೇಕು ಎಂದು ಫ್ಯಾನ್ಸ್ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಬಡವರ ಮಕ್ಕಳು ಬೆಳೀಬೇಕು ಎನ್ನುವುದು ಹೊರಗಿನ ಜನರ ಅಭಿಪ್ರಾಯ ಆಗಿದೆ. ಕಳೆದ ಸೀಸನ್ ಡ್ರೋನ್ ಪ್ರತಾಪ್ ಅವರಿಗೆ ಹೊರಗಡೆ ಎಷ್ಟರ ಮಟ್ಟಿಗೆ ಜನರ ಪ್ರೀತಿ ಸಿಕ್ಕಿತ್ತು ಎಂದರೆ, ಹಿಂದೆ ಅವರು ಮಾಡಿದ್ದ ಎಲ್ಲಾ ಸಮಸ್ಯೆಗಳು ಇದೊಂದು ಶೋ ಇಂದ ಮರೆಯುವ ಹಾಗೆ ಆಯಿತು.
ಅದೇ ರೀತಿ ಈಗ ಕುರುಬರ ಹುಡುಗ ಹನುಮಂತನಿಗೆ ಜನರ ಸಪೋರ್ಟ್ ಹಾಗು ಮೆಚ್ಚುಗೆ ಸಿಗುತ್ತಿದೆ. ಸರಿಗಮಪ ಕಾರ್ಯಕ್ರಮದ ವಿನ್ನರ್ ಆಗಿದ್ದ ಹನುಮಂತ, ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎನ್ನುವುದು ಜನರ ಆಸೆ, ಜನರು ಅಂದುಕೊಂಡ ಹಾಗೆ ಎಲ್ಲವೂ ನಡೆಯುತ್ತಾ ಎಂದು ಕಾದು ನೋಡಬೇಕಿದೆ..