ಕಾಂತರಾ ಸಿನಿಮಾದ ಸಕ್ಸಸ್ ಗೆ ಅದರಲ್ಲಿ ಇದ್ದ ಪಾತ್ರ ವರ್ಗಗಳು ಕೂಡ ಅಷ್ಟೇ ಮುಖ್ಯ ಕಾರಣ. ರಿಷಬ್ ಶೆಟ್ಟಿ ಪ್ರಮೋದ್ ಶೆಟ್ಟಿ ಅಚ್ಯುತ್ ಕುಮಾರ್, ಕಿಶೋರ್ ಇವರೆಲ್ಲರೂ ಸಿನಿಮಾರಂಗದಲ್ಲಿ ಈಗಾಗಲೇ ಚಿರಪರಿಚಿತರು. ಹಾಗಾಗಿ ಅವರಿಗೆ ಅವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ ಇವರುಗಳ ಜೊತೆಗೆ ಈ ಸಿನಿಮಾದಲ್ಲಿರುವ ಇನ್ನೊಂದಿಷ್ಟು ಉದಯೋನ್ಮುಖ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ ಆ ಪಾತ್ರಗಳ ಬಗ್ಗೆ ನಾವು ನಿಮಗೆ ಇಲ್ಲಿ ಮಾಹಿತಿಯನ್ನು ಕೊಡುತ್ತೇವೆ. ಗುರುವ ಬುಳ್ಳ ರಾಂಪ ಸುಂದರ ಕಾಂತಾರದಲ್ಲಿ ಬರುವ ಇವರೆಲ್ಲ ಯಾರು? ಎಂಥ ನಟರು ಗೊತ್ತಾ. ರಿಷಬ್ ಶೆಟ್ಟಿ ಮುಖ್ಯ ಪಾತ್ರ ಶಿವು. ಶಿವು ಅವರ ತಮ್ಮ ಗುರುವ. ಗುರುವನ ಅಭಿನಯ ನೋಡಿ ಜನ ಮೆಚ್ಚಿಕೊಂಡಿದ್ದಾರೆ ಅವರ ಸೌಮ್ಯ ಸ್ವಭಾವಕ್ಕೆ ಜನ ತಲೆಬಾಗಿದ್ದಾರೆ.

ಇನ್ನು ಗುರುವ ಪಾತ್ರವನ್ನು ನಿಭಾಯಿಸಿದ್ದು ಸ್ವರಾಜ್ ಶೆಟ್ಟಿ. ಇವರು ಮೊದಲನೇ ಬಾರಿಗೆ ಬೆಳ್ಳಿತರೆಗೆ ಕಾಂತಾರ ಸಿನಿಮಾದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಕೃಷ್ಣ ತುಳಸಿ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರಾಧಾಕಲ್ಯಾಣ ಧಾರವಾಹಿಯಲ್ಲಿ ವಿಲನ್ ಪಾತ್ರಧಾರಿಯಕ್ಕೆ ಕೂಡ ಅಭಿನಯಿಸಿದ್ದಾರೆ ಸ್ವರಾಜ್ ಶೆಟ್ಟಿ. ತುಳುನಾಡಿನಲ್ಲಿ ಶಿವದೂತ ಗುಳಿಗ ಎನ್ನುವ ನಾಟಕದಲ್ಲಿ ಗುಳಿಗನ ಪಾತ್ರದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿ ಎಲ್ಲರ ಗಮನಸೆಳೆದರು ಇದೆ ಇವರಿಗೆ ಕಾಂತಾರ ಸಿನಿಮಾದಲ್ಲಿ ಅವಕಾಶ ಸಿಗುವುದಕ್ಕೂ ಕಾರಣವಾಯಿತು.
ಕಾಂತಾರ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆದ ನಾಯಕ ಶಿವನ ಸ್ನೇಹಿತ ‘ರಾಂಪ’ನಾಗಿ ಪಾತ್ರ ಅಂದರೆ ರಾಂಪ. ಈ ಪಾತ್ರಕ್ಕೆ ಜೀವ ತುಂಬಿದವರು ಪ್ರಕಾಶ್ ತುಮಿನಾಡ್. ಇವರು ಹೆಚ್ಚು ತುಳುನಾಡಿನ ನಾಟಕಗಳಲ್ಲಿ ಮಿಂಚಿದವರು. ಈಗ ಕನ್ನಡ ಜನಪ್ರಿಯ ಹಾಸ್ಯ ಕಲಾವಿದರಾಗುತ್ತಿದ್ದಾರೆ. ಕಾಸರಗೋಡು ಸಿನಿಮಾದಲ್ಲಿ ಭುಜಂಗನ ಪಾತ್ರ ಮಾಡಿ ಪಾಪ್ಯುಲರ್ ಆಗಿದ್ದ ಪ್ರಕಾಶ್ ತುಮಿನಾಡ್ ಮೂಲತಃ ಗಡಿನಾಡು ಮಂಜೇಶ್ವರದವರು. ರಂಗಭೂಮಿ ಕಲಾವಿದರಾಗಿದ್ದ ಪ್ರಕಾಶ್ ತುಮಿನಾಡ್ ರಂಗಭೂಮಿಯಲ್ಲಿದ್ದಾಗ ನಟನೆ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದರು.
ಒಂದು ಮೊಟ್ಟೆಯ ಕತೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಪ್ರಕಾಶ್ ತುಮಿನಾಡ್ ಇದುವರೆಗೆ ಒಂಭತ್ತು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅವರ ಡೈಲಾಗ್ ಡೆಲಿವರಿ ಮಾಡುವ ಶೈಲಿಯಿಂದ ಗಮನ ಸೆಳೆದಿದ್ದಾರೆ. ಕಾಂತಾರ ಸಿನಿಮಾ ಬಳಿಕ ಅವರ ಪಾಪ್ಯುಲಾರಿಟಿ ಮತ್ತಷ್ಟು ಹೆಚ್ಚಾಗಿದ್ದು, ಮುಂದೆ ಕನ್ನಡ ಸಿನಿಮಾಗಳಲ್ಲಿ ಮತ್ತಷ್ಟು ಪಾತ್ರಗಳನ್ನು ಪಡೆಯುವ ಭರವಸೆ ಮೂಡಿಸಿದ್ದಾರೆ.
ಇನ್ನು ಸುಂದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ದೀಪಕ್ ರೈ ಪಾಣಾಜೆ. ಇವರು ಕೂಡ ರಂಗಭೂಮಿ ಕಲಾವಿದರು ತುಳುನಾಡಿನಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿ ಸೈನಿಸಿಕೊಂಡವರು.