ಕನ್ನಡ ಸಿನಿ ರಂಗದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ತರುಣ್ ಸುದೀರ್ ನಿರ್ದೇಶನದ ‘ಕಾಟೇರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ರೆಟ್ರೋ ಸ್ಟೈಲ್ ಸಿನಿಮಾವಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಆದರೆ ಕಾಟೇರ ನಂತರ ದರ್ಶನ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ.

ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟ ದರ್ಶನ್ ಕಾಂಬಿನೇಷನ್ ನಲ್ಲಿ 20 ವರ್ಷಗಳ ಹಿಂದೆ ‘ಕರಿಯ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ದೂಳಿಪಟ ಮಾಡಿದ್ದಲ್ಲದೇ, ದರ್ಶನ್ ಅವರಿಗೆ ಸ್ಟಾರ್ ಡಂ ತಂದು ಕೊಟ್ಟಿತ್ತು. ಆದರೆ ಆ ಬಳಿಕ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದಿಲ್ಲ. ಇದೀಗ ದರ್ಶನ್ ಹಾಗೂ ಪ್ರೇಮ್ ನಡುವೆ ಇದ್ದ ಮನಸ್ತಾಪ ದೂರವಾಗಿ ಹೊಸ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಜೋಗಿ ಪ್ರೇಮ್ ಜೊತೆಗೆ ದರ್ಶನ್ ಸಿನಿಮಾ ಮಾಡಲಿದ್ದಾರೆ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆಗಸ್ಟ್ 25ಕ್ಕೆ ನಮ್ಮ ಬ್ಯಾನರ್ ನಿಂದ ದೊಡ್ಡದೊಂದು ಘೋಷಣೆ ಮಾಡಲಿದ್ದೇವೆ ಎಂದು ಈಗಾಗಲೇ ಕೆವಿಎನ್ ಪ್ರೊಡಕ್ಷನ್ಸ್ ಹೇಳಿಕೊಂಡಿದೆ. ‘ಕರಿಯ’ ಸಿನಿಮಾದ ಮೂಲಕ ಚಂದನವನದಲ್ಲಿ ದಾಖಲೆ ಬರೆದಿದ್ದ ಪ್ರೇಮ್ ದರ್ಶನ್ ಜೋಡಿ ಮತ್ತೆ ಒಂದಾದರೆ ಸ್ಯಾಂಡಲ್ ವುಡ್ ಶೇಕ್ ಆಗುವುದಂತು ಗ್ಯಾರಂಟಿ.