ಬಿಗ್ ಬಾಸ್ ಶೋ ಗೆ ಈ ವರ್ಷ ಬಂದ ಸ್ಪರ್ಧಿಗಳಲ್ಲಿ ಗೋಲ್ಡ್ ಸುರೇಶ್ ಸಹ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಪಾಪ್ಯುಲರ್ ಆಗಿದ್ದ ಗೋಲ್ಡ್ ಸುರೇಶ್ ಅವರು ತಮ್ಮ ಮೈಮೇಲೆ ಅತಿಯಾಗಿ ಚಿನ್ನ ಹಾಕಿಕೊಳ್ಳುವ ಕಾರಣಕ್ಕೆ, ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ವಿಚಾರಗಳನ್ನ ಹಂಚಿಕೊಳ್ಳುವ ಮೂಲಕ ವೈರಲ್ ಆಗಿದ್ದರು. ಈ ವ್ಯಕ್ತಿ ಬಿಗ್ ಬಾಸ್ ಮನೆಗೆ ಬಂದಾಗ, ಮೊದಲಿಗೆ ಇದ್ದಿದ್ದು ನರಕದಲ್ಲಿ, ಬಳಿಕ ಸ್ವರ್ಗ ಲೋಕಕ್ಕೆ ಬಂದರು. ಬಿಗ್ ಬಾಸ್ ಮನೆಗೆ ಬಂದಾಗಲು ಶುರುವಿನಲ್ಲಿ, ಬೇರೆ ಥರ ಇದ್ದ ಸುರೇಶ್ ಅವರು, ಬಳಿಕ ಬದಲಾದರು. ಗೋಲ್ಡ್ ಸುರೇಶ್ ಅವರು ನಂತರ ಬದಲಾದರು, ಈ ಬದಲಾವಣೆ ತಂದಿದ್ದು ಸುದೀಪ್ ಅವರೇ. ಆದರೆ ಈಗ ಗೋಲ್ಡ್ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಾಳೆಯೇ ಅವರಿಗೆ ಆಪರೇಷನ್ ನಡೆಯಲಿದೆ.
ಹೌದು, ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಗೆ ಬಂದಾಗ ಕೈಗೆ, ಕತ್ತಿಗೆ ಹೆಚ್ಚು ಗೋಲ್ಡ್ ಹಾಕಿಕೊಂಡೇ ಹೆಚ್ಚು ಫೇಮಸ್ ಆಗಿದ್ದರು. ಮನೆಯಲ್ಲಿ ಇರುವವರು ಇವರ ಬಂಗಾರದ ಒಡವೆಗಳನ್ನು ನೋಡಿ ಆಶ್ಚರ್ಯ ಪಟ್ಟಿದ್ದರು. ಆದರೆ ಕಿಚ್ಚ ಸುದೀಪ್ ಅವರು ವೀಕೆಂಡ್ ಎಪಿಸೋಡ್ ನಲ್ಲಿ ಬಂದಾಗ, ಬಂಗಾರ ದೇಹದ ಮೇಲೆ ಹೆಚ್ಚಾಗಿ ಇರಬಾರದು, ಮನಸ್ಸು ಬಂಗಾರದ ಹಾಗಿರಬೇಕು ಎಂದು ಗೋಲ್ಡ್ ಸುರೇಶ್ ಅವರಿಗೆ ಅರ್ಥ ಆಗುವ ಹಾಗೆ ಹೇಳಿದ್ದರು. ಆಗಿನಿಂದ ಸುರೇಶ್ ಅವರು ಸುದೀಪ್ ಅವರ ಮಾತುಗಳನ್ನು ಅರ್ಥ ಮಾಡಿಕೊಂಡು, ಗೋಲ್ಡ್ ಹಾಕೋದನ್ನ ಸಹ ಕಡಿಮೆ ಮಾಡಿದ್ದರು. ಹಾಗೆಯೇ ಬಿಗ್ ಬಾಸ್ ಮನೆಯ ಒಳಗೆ ಒಳ್ಳೆಯ ರೀತಿಯಲ್ಲಿ ಟಾಸ್ಕ್ ಗಳಲ್ಲಿ ಸಹ ಚೆನ್ನಾಗಿ ಭಾಗವಹಿಸಿದ್ದರು ಗೋಲ್ಡ್ ಸುರೇಶ್. ಬಿಗ್ ಬಾಸ್ ಮನೆಯ ಒಳಗೆ ಕ್ಯಾಪ್ಟನ್ ಸಹ ಆಗಿದ್ದರು.

ಕ್ಯಾಪ್ಟನ್ ಆಗಿದ್ದು ಸಹ ಬೇರೆ ರೀತಿಯಲ್ಲಿ ಎಂದು ಹೇಳಲಾಗುತ್ತಿತ್ತು. ಇನ್ನು ಗೋಲ್ಡ್ ಸುರೇಶ್ ಅವರು ಹನುಮಂತನ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಗೋಲ್ಡ್ ಸುರೇಶ್ ಅವರನ್ನು ಮಾವ ಎಂದು ಕರೆಯುತ್ತಿದ್ದರು ಹನುಮಂತ. ಹನುಮಂತನಿಗೆ ₹3000 ಬೆಲೆ ಬಾಳುವ ಚಡ್ಡಿಯನ್ನು ಕೊಟ್ಟಿದ್ದರು, ಆ ವಿಷಯಕ್ಕೆ ಸಹ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಇವರು ಸರಿಯಾಗಿ ಎಲಿಮಿನೇಟ್ ಆಗಿದ್ದಿಲ್ಲ, ಹೊರಗಡೆ ಸುರೇಶ್ ಅವರ ಬ್ಯುಸಿನೆಸ್ ಗೆ ತೊಂದರೆ ಆಗಿ, ಅವರ ಪತ್ನಿ ನಿರ್ಧಾರ ಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟ ಆಗುತ್ತಿದ್ದು, ಅದರಿಂದ ಅವರ ಬ್ಯುಸಿನೆಸ್ ಗೆ ಸಂಪೂರ್ಣವಾಗಿ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕಿಂತ ಅವರ ಮನೆಗೆ ಅವರ ಅವಶ್ಯಕತೆ ಇದೆ ಎಂದು ಗೋಲ್ಡ್ ಸುರೇಶ್ ಅವರನ್ನು ಮಧ್ಯದಲ್ಲಿ ಕಳಿಸಿಕೊಡಲಾಯಿತು.
ಸುದೀಪ್ ಅವರಿಗೆ ಸಹ ಇವರು ಇಷ್ಟ ಆಗಿದ್ದರು. ಸೂರಿ ಅವರೇ ಎಂದು ಬಹಳ ಚೆನ್ನಾಗಿ ಮಾತನಾಡಿಸುತ್ತಿದ್ದರು ಕಿಚ್ಚ ಸುದೀಪ್ ಅವರು. ಇನ್ನು ಮನೆಯಿಂದ ಹೊರಗಡೆ ಬಂದ ಬಳಿಕ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಸುರೇಶ್ ಅವರು. ಐಶ್ವರ್ಯ ಸಿಂಧೋಗಿ ಅವರ ಜೊತೆಗೆ ವೃದ್ಧಾಶ್ರಮಕ್ಕೆ ಹೋಗಿ, ಆಹಾರ ನೀಡಿ, ಅವರ ಜೊತೆಗೆ ಸಮಯ ಕಳೆದಿದ್ದರು. ಹೀಗೆ ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ಇದೀಗ ಗೋಲ್ಡ್ ಸುರೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಕೆಲವು ಫೋಟೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸುರೇಶ್ ಅವರಿಗೆ ಏನಾಗಿದೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಉತ್ತರ ಏನು ಎಂದು ಹುಡುಕಿದಾಗ ಸುರೇಶ್ ಅವರಿಗೆ ಆಗಿರುವ ಸಮಸ್ಯೆ ಏನು ಎಂದು ತಿಳಿದುಬಂದಿದೆ.

ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಗೋಲ್ಡ್ ಸುರೇಶ್ ಅವರು ಒಂದು ಟಾಸ್ಕ್ ನಲ್ಲಿ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸಹ ಆಸ್ಪತ್ರೆಗೆ ಹೋಗಿ, ವೈದ್ಯರನ್ನು ಭೇಟಿ ಮಾಡಿಕೊಂಡು ಬಂದಿದ್ದರು. ಆಗ ಆಗಿದ್ದ ಸಮಸ್ಯೆ ಇನ್ನು ಕೂಡ ಸರಿ ಹೋಗಿಲ್ಲ. ಈ ಕಾರಣಕ್ಕೆ ಅವರ ಕಾಲು ಸರಿ ಹೋಗುವುದಕ್ಕಾಗಿ ಗೋಲ್ಡ್ ಸುರೇಶ್ ಅವರು ಆಪರೇಷನ್ ಮಾಡಿಸಬೇಕಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಳೆಯೇ ಅವರಿಗೆ ಆಪರೇಶನ್ ನಡೆಯಲಿದೆ. ಈ ವಿಷಯ ತಿಳಿದು ಗೋಲ್ಡ್ ಸುರೇಶ್ ಅವರ ಫ್ಯಾನ್ಸ್ ಆತಂಕದಲ್ಲಿದ್ದಾರೆ. ಆದರೆ ಗೋಲ್ಡ್ ಸುರೇಶ್ ಅವರು ಹುಷಾರಾಗಿ ಬೇಗ ವಾಪಸ್ ಬರಲಿದ್ದು, ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿದುಬಂದಿದೆ.