ಬಿಗ್ ಬಾಸ್ ಶೋ ನಲ್ಲಿ ಈಗ ಜಗಳಗಳು ಸಿಕ್ಕಾಪಟ್ಟೆ ನಡೆಯುತ್ತಿದೆ. ಅದರಲ್ಲೂ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಬಂದ ನಂತರ ಮನೆಯಲ್ಲಿ ಮಾತಿನ ವಾಗ್ವಾದ ಹಾಗೂ ಜಗಳ ಜಾಸ್ತಿ ಆಗುತ್ತಿದೆ. ಇದೀಗ ಗೋಲ್ಡ್ ಸುರೇಶ್ ಹಾಗೂ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬುಜ್ಜಿ ಇವರಿಬ್ಬರ ನಡುವೆ ಜಗಳ ಶುರುವಾಗಿದ್ದು, ಈ ಜಗಳಕ್ಕೆ ಮನೆಯೇ ರಣರಂಗವೇ ಆಗಿದ್ದು, ಗೋಲ್ಡ್ ಸುರೇಶ್ ಮನೆಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ತಾನು ಖಂಡಿತವಾಗಿ ಮನೆಬಿಟ್ಟು ಹೋಗುತ್ತೇನೆ ಎಂದು ಹೇಳಿ, ಬಾಗಿಲ ಬಳಿ ಹೋಗಿ ನಿಂತಿದ್ದಾರೆ. ನಿಜವಾಗಿಯೂ ಮನೆಬಿಟ್ಟು ಹೋಗುತ್ತಾರಾ ಎಂದು ಕಾದು ನೋಡಬೇಕಿದೆ.

ಬಿಗ್ ಬಾಸ್ ಶೋ ನಲ್ಲಿ ಈಗ ಬಂದಿರುವ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಭಾರಿ ಸದ್ದು ಮಾಡುತ್ತಿದ್ದಾರೆ. ನಟಿ ಶೋಭಾ ಶೆಟ್ಟಿ ಹಾಗೂ ರಿಯಾಲಿಟಿ ಶೋ ಎರಡರಲ್ಲಿ ಭಾಗವಹಿಸಿದ್ದ ಅಕ್ಷತಾ ಅವರ ಗಂಡ ರಜತ್ ಬುಜ್ಜಿ ಸಹ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಮನೆಯೊಳಗೆ ಹೋಗಿದ್ದಾರೆ. ಇವರಿಬ್ಬರು ಬಂದಾಗಿನಿಂದ ಈಗಾಗಲೇ ಮನೆಯೊಳಗೆ ಇರುವ ಬೇರೆ ಸ್ಪರ್ಧಿಗಳ ನಿಜವಾದ ಬಂಡವಾಳ ಬಯಲು ಮಾಡುವುದಾಗಿ ಸವಾಲು ಹಾಕಿದರು. ಇವರಿಬ್ಬರು ಈಗ ಬಿಗ್ ಬಾಸ್ ಮನೆಯಲ್ಲಿ ಡಾಮಿನೇಟ್ ಮಾಡುತ್ತಿದ್ದಾರೆ ಎಂದರೆ ತಪ್ಪಲ್ಲ. ಇಬ್ಬರು ಜೋರಾಗಿರುವ ಕಾರಣ ಜಗಳಗಳು ಸಹ ನಡೆಯುತ್ತಲೇ ಇದೆ.
ನಾಮಿನೇಟ್ ಮಾಡುವ ವಿಷಯದಲ್ಲಿ ಈಗ ಬೇರೆ ಸ್ಪರ್ಧಿಗಳು ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿರುವ ಸ್ಪರ್ಧಿಗಳ ನಡುವೆ ಭಾರಿ ಜಗಳ ನಡೆದಿತ್ತು, ಇದೀಗ ಟಾಸ್ಕ್ ನಡೆಯುವ ವೇಳೆ ಸಹ ಅವರು ಹಾಗೂ ಇವರ ನಡುವೆ ಜಗಳ ನಡೆದಿದೆ. ಪ್ರತಿ ವಿಷಯಕ್ಕೂ ಇವರುಗಳ ನಡುವೆ ಜಗಳ ನಡೆಯುತ್ತಲೇ ಇದೆ. ಇದೀಗ ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ನಡೆದಿರುವ ಜಗಳದ ವಿಷಯ ಸಿಕ್ಕಾಪಟ್ಟೆ ಜೋರಾಗಿ ನಡೆದಿದ್ದು, ಕಲರ್ಸ್ ಕನ್ನಡ ಶೇರ್ ಮಾಡಿರುವ ಪ್ರೊಮೋದಲ್ಲಿ ಇದನ್ನು ನೋಡಬಹುದು. ಜಗಳ ವಿಪರೀತಕ್ಕೆ ಏರಿ, ಮನೆ ಬಿಟ್ಟು ಹೋಗುವ ಹಂತಕ್ಕೆ ಬಂದು ನಿಂತಿದೆ..
ಈ ವಾರ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಕೊಡುತ್ತಿದ್ದು, ಮನೆಯನ್ನು ಎರಡು ತಂಡಗಳಾಗಿ ವಿಭಾಗಿಸಲಾಗಿದೆ. ಒಂದು ತಂಡದಲ್ಲಿ ರಜತ್ ಇದ್ದರೆ, ಇನ್ನೊಂದು ತಂಡದಲ್ಲಿ ಗೋಲ್ಡ್ ಸುರೇಶ್ ಇದ್ದಾರೆ. ಇವರಿಬ್ಬರ ನಡುವೆ ಟಾಸ್ಕ್ ನಡೆಯುವ ವಿಚಾರದಲ್ಲಿ ಇದ್ದಕ್ಕಿದ್ದಂತೆ ಜಗಳ ಶುರುವಾಗಿದ್ದು, ಗೋಲ್ಡ್ ಸುರೇಶ್ ಗೆ ಮಾತಿನ ಮೂಲಕ ಟಾಂಟ್ ಮಾಡಿದ್ದಾರೆ ರಜತ್. ಇದರಿಂದ ಗೋಲ್ಡ್ ಸುರೇಶ್ ಅವರಿಗೂ ಸಹ ಕೋಪ ಬಂದಿದ್ದು, ರಜತ್ ಜೊತೆಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೆ ಏರಿದ್ದು, ಮನೆಯವರು ಇಬ್ಬರನ್ನು ತಡೆಯಲು ಪ್ರಯತ್ನ ಪಟ್ಟರು ಸಹ, ಇಬ್ಬರು ಸಹ ಮನೆಯವರ ಮಾತನ್ನು ಕೇಳಿಲ್ಲ.

ಇವರಿಬ್ಬರ ನಡುವೆ ಇದೇ ರೀತಿ ಮಾತು, ಜಗಳ ನಡೆದು ಕೊನೆಗೆ ಗೋಲ್ಡ್ ಸುರೇಶ್ ಅವರು ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಕೋಪದಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮನೆಯ ಮುಖ್ಯ ದ್ವಾರದ ವರೆಗು ಹೋಗಿ ನಾನು ಹೊರಗಡೆ ಹೋಗಿಯೇ ಹೋಗುತ್ತೇನೆ ಎಂದು ನಿಂತಿದ್ದು, ಈ ಜಗಳದಿಂದ ನಿಜವಾಗಲು ಗೋಲ್ಡ್ ಸರೇಶ್ ಮನೆಯಿಂದ ಹೊರಗೆ ಹೋಗುತ್ತಾರಾ? ಅಥವಾ ಮನೆಯವರು ಇವರಿಬ್ಬರನ್ನು ಸಮಾಧಾನ ಮಾಡಿ ಎಲ್ಲವೂ ಸರಿ ಹೋಗುತ್ತಾ? ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯೊಳಗೆ ಜಗಳವೇ ಹೆಚ್ಚಾಗುತ್ತಿದೆ ಹೊರತು, ಮನರಂಜನೆ ಇಲ್ಲ.