ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ದಿಡೀರ್ ಸಾವು ಇಡೀ ಕರ್ನಾಟಕವನ್ನೇ ದುಃಖಕ್ಕೆ ದೂಡಿದೆ. ಒಳ್ಳೆಯ ಪತ್ನಿಯಾಗಿ, ಅತ್ತಿಗೆಯಾಗಿ, ಸೊಸೆಯಾಗಿ ಹಾಗೂ ಉತ್ತಮ ಗೆಳತಿಯಾಗಿ ಜೀವನ ಕಳೆದ ಸ್ಪಂದನಾ ಸಾವವನ್ನು ಅರಗಿಸಿಕೊಳ್ಳಲಾಗದ ಆಪ್ತ ವಲಯ ಶೋಕ ಸಾಗರದಲ್ಲಿ ಮುಳುಗಿದೆ. ಇದೇ ಸಂಧರ್ಭ ಸ್ಪಂದನಾ ಅವರ ಗೆಳತಿ ಮಾತನಾಡಿದ್ದು, ಇದು ಸ್ಪಂದನಾ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಸ್ಪಂದನಾ ಅವರ ಬಗ್ಗೆ ಮಾತನಾಡಿರುವ ಗೆಳತಿ ಶಾಂತಿ ಅವರು, ‘ಸ್ಪಂದನಾ ಹಾಗೂ ನನ್ನದು 8 ವರ್ಷಗಳ ಗೆಳೆತನ. ನನ್ನೊಂದಿಗೆ ಅವರು ಅತ್ಯಂತ ಆತ್ಮೀಯವಾಗಿದ್ದರು. ನಾನು ಮತ್ತು ಅವರು ಒಟ್ಟಿಗೆ ವಾಕಿಂಗ್ ಹೋಗುತ್ತಿದ್ದೆವು. ನಮ್ಮ ಹಾಗೂ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನಾವು ಒಂದಾಗುತ್ತಿದ್ದೆವು. ಅವರ ಮಗ ಹಾಗೂ ನನ್ನ ಮಗಳು ಸ್ನೇಹಿರು ಆ ಕಾರಣದಿಂದಲೇ ನಮ್ಮ ಆತ್ಮೀಯತೆ ಇನ್ನಷ್ಟು ಹೆಚ್ಚಾಗಿತ್ತು. ಸ್ನೇಹಕ್ಕೆ ಸ್ಪಂದನಾ ತುಂಬಾ ಬೆಲೆ ನೀಡುತ್ತಿದ್ದರು’ ಎಂದಿದ್ದಾರೆ.
ಜೊತೆಗೆ ಸ್ಪಂದನಾ ಮತ್ತು ವಿಜಯ್ ಅವರದು ಮಾದರಿ ದಾಂಪತ್ಯವಾಗಿತ್ತು. ಅವರಿಬ್ಬರೂ ಕೂಡ ಅನ್ಯೋನ್ಯವಾಗಿದ್ದರು. ಇದೀಗ ಸ್ಪಂದನಾ ಅವರನ್ನು ಕಳೆದುಕೊಂಡಿರುವುದು ನೋವು ತಂದಿದೆ. ದೇವರು ದೊಡ್ಡ ಕ್ರೂರಿ, ಸ್ಪಂದನಾ ಅವರಂತ ಗೆಳತಿ ಸಿಗಲು ಪುಣ್ಯ ಮಾಡಿರಬೇಕು. ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಪಂದನಾ ಆರೋಗ್ಯವಾಗಿದ್ದರು. ಆದರೆ ಈ ರೀತಿ ಅವರು ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ’ ಎಂದು ಗೆಳತಿಯನ್ನು ನೆನೆದು ಶಾಂತಿ ಕಣ್ಣೀರಿಟ್ಟಿದ್ದಾರೆ.