ಕನ್ನಡದ ನಟಿಯರಿಗೆ ಪರಭಾಷೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಈಗಾಗಲೇ ಇಲ್ಲಿನ ನಟಿಯರಾದ ಪ್ರೇಮಾ, ಪ್ರಿಯಾಮಣಿ ಮುಂತಾದವರು ತುಳು ಮತ್ತು ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಪರಂಪರೆಯನ್ನು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಪರಭಾಷೆಯಲ್ಲಿ ಅವರು ನಟಿಯರಾಗಿ ಮಿಂಡುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿಯಾಗಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ 2019ರಲ್ಲಿ ಬಿಡುಗಡೆಯಾಗಿದ್ದ. ‘ಒಂದ್ ಕಥೆ ಹೇಳ್ತಾ’ ಸಿನಿಮಾ ಮೂಲಕ ಬೆಳ್ಳಿತರೆ ಪ್ರವೇಶ ಮಾಡಿರುವ ಪ್ರಿಯಾಂಕಾ ಮೋಹನ ಸದ್ಯಕ್ಕೆ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ, ಧನುಷ್ ಜತೆಗೆ ಅವರು “ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಜಯಂ ರವಿ ಜತೆಗೂ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದರ ನಡುವ ಅವರೀಗ ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ನಟನೆಯ 68ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವೆಂಕಟ್ ಪ್ರಭು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ನಟಿ ಪ್ರಿಯಾಂಕಾ ಮೋಹನ್ ತಾಯಿ ಕನ್ನಡದವರು ಮತ್ತು ತಂದ ತಮಿಳು, ತಮ್ಮ ಮೊದಲ ಸಿನಿಮಾದ ನಂತರ ಅವರು ತೆಲುಗಿನಲ್ಲಿ ನಾನಿ ಜತೆಗೆ ‘ಗ್ಯಾಂಗ್ ಲೀಡರ್’ ಸಿನಿಮಾ ಮಾಡಿದರು. ಅಲ್ಲಿಂದ ಅವರ ಅದೃಷ್ಟ ಮಿಲಾಯಿಸಿದ್ದು, ಶಿವಕಾರ್ತಿಕೇಯನ್ ನಟನೆಯ ‘ಡಾಕ್ಟರ್’ ಸಿನಿಮಾದಲ್ಲಿ ನಟಿಸುವ ಅವಕಾಶ ಅವರಿಗೆ ಲಭಿಸಿತು. ಆ ಸಿನಿಮಾ ನೂರು ಕೋಟಿ ಕಲೆಕ್ಷನ್ ಮಾಡಿ ಪ್ರಿಯಾಂಕಾರನ್ನು ಸ್ಟಾರ್ ನಟಿಯನ್ನಾಗಿಸಿತು. ಈಗ ಪ್ರಿಯಾಂಕಾರಿಗೆ ಒಂದರ ಹಿಂದೆ ಒಂದರಂತೆ ಸ್ಟಾರ್ ಸಿನಿಮಾಗಳ ಆಫರ್ ಬರುತ್ತಿದೆ.