ಬಿಗ್ ಬಾಸ್ ಮನೆಯಲ್ಲಿರುವ ಹಂಸ ಬಗ್ಗೆ ನಿರ್ದೇಶಕ ಆರೂರ ಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಅಸಮಾಧಾನ ಹೊರಹಾಕಿದ್ದಾರೆ. ಹಾಗೂ ದೂರು ಕೊಟ್ಟಿರುವುದಾಗಿ ಹೇಳಿದ್ದಾರೆ. ಏಕೆ ಗೊತ್ತೆ ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸುತ್ತಿದ್ದ ಹಂಸ ನಮಗೆ ಹೇಳದೆ ಬಿಗ್ ಬಾಸ್ಗೆ ಹೋಗಿದ್ದಾರೆ. ಅವರು ನಮಗೆ ಹೇಳಲೇ ಇಲ್ಲ. ಅವರ ವಿರುದ್ಧ ಪ್ರೊಡ್ಯೂಸರ್ ಅಸೋಸಿಯೇಶನ್ಗೆ, ಕನ್ನಡ ಟೆಲಿವಿಷನ್ ಅಸೋಸಿಯೇಶನ್ಗೆ ದೂರು ಕೊಟ್ಟಿದ್ದೇವೆ ಎಂದು ನಿರ್ದೇಶಕ ಆರೂರು ಜಗದೀಶ್ ತಿಳಿಸಿದ್ದಾರೆ.

ನನಗೆ ಹಂಸ ಅವರಿಂದ ಫೋನ್ ಬಂದಿತ್ತು. ನಾನು ನೆಲವತ್ತು ದಿನ ಸಿನಿಮಾ ಶೂಟಿಂಗ್ಗಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ ಅಂದರು. ಆಗ ನಮಗೆ ಪೋಷಕ ನಟ- ನಟಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಶೂಟಿಂಗ್ ಮಾಡುತ್ತಾರಾ..? ಅದು ನೆಲವತೈದು ದಿನ ಅಂತಾ ಅನಿಸಿತು. ಆದರೂ ಸರಿ ಮೇಡಂ ಹೋಗಿ ಬನ್ನಿ ನಾನು ತಂಡಕ್ಕೆ ಹೇಳುತ್ತೇನೆ ಅಂತಾ ಹೇಳಿದ್ದೆ, ಆಮೇಲೆ ನೋಡಿದರೆ ಬಿಗ್ ಬಾಸ್ ಪ್ರೋಮೋದಲ್ಲಿ ಇವರು ಇದ್ದಾರೆ. ನನಗೆ ಏನಿದು ಅನಿಸಿಬಿಡ್ತು.
ಬಿಗ್ ಬಾಸ್ನಂತೆ ಪುಟ್ಟಕ್ಕನ ಮಕ್ಕಳು ಕೂಡ ಒಂದು ಪ್ರಾಜೆಕ್ಟ್. ಹೋಗುವವನ್ನು ನಾವು ತಡೆಯಲ್ಲ..ಹೋಗುವವರು ಹೋಗಿ ಆದರೆ ತಂಡಕ್ಕೆ ಹೇಳಿ ಹೋಗಿ ಎಂದರು. ಈ ರೀತಿಯ ವರ್ತನೆ ಕಲಾವಿದರಿಗೆ ಒಳ್ಳೆಯದಲ್ಲ. ಇಲ್ಲಿ ಹೋಗುವವರನ್ನು ಯಾರೂ ತಡೆಯುವುದಿಲ್ಲ. ತಡೆಯುವ ಹಕ್ಕು ಕೂಡ ಇಲ್ಲ. ಆದರೆ ತಂಡಕ್ಕೆ ಹೇಳಿ ಬಿಡಿಸಿಕೊಂಡು ಹೋಗಿ ಎಂದು ನಿರ್ದೇಶಕ ಆರೂರು ಜಗದೀಶ್ ಹೇಳಿದ್ದಾರೆ.