ಬಾಲಿವುಡ್ನ ಕಿಂಗ್ ಶಾರುಖ್ ಖಾನ್ ಅವರಿಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಎಲ್ಲೇ ಹೋದರು ಅಭಿಮಾನಿಗಳು ಅವರನ್ನು ನೋಡಲು, ಮಾತನಾಡಿಸಲು ಮುತ್ತಿಗೆ ಹಾಕುತ್ತಾರೆ. ಇದೀಗ ‘ಪಠಾಣ್ ಹಾಗೂ ಜವಾನ್’ ಸಿನಿಮಾದ ಗೆಲುವು ಶಾರುಖ್ ನೇಮ್&ಫೇಮ್ ಇನ್ನಷ್ಟು ಹೆಚ್ಚಿಸಿದೆ. ಇದೀಗ ವಿಡಿಯೋ ಒಂದು ಸಕ್ಕತ್ ವೈರಲ್ ಆಗುತ್ತಿದ್ದು, ಮಹಿಳಾ ಅಭಿಮಾನಿಗಳು ಶಾರುಖ್ ಖಾನ್ ಅವರಿಗೆ ಮುತ್ತಿಗೆ ಹಾಕಿ ಕಿಸ್ ಮಾಡಿದ್ದಾರೆ.
ಶಾರುಖ್ ಖಾನ್ ಅನೇಕ ಸಂದರ್ಭಗಳಲ್ಲಿ ಕೂಲ್ ಆಗಿಯೇ ನಡೆದುಕೊಳ್ಳುತ್ತಾರೆ. ಅಭಿಮಾನಿಗಳಿಂದ ಕಿರಿಕಿರಿ ಆದರೂ ಕೂಡ ಅವರು ಮಿತಿ ಮೀರಿ ವರ್ತಿಸುವುದಿಲ್ಲ. ಸದ್ಯ, ವೈರಲ್ ಆಗಿರುವ ವಿಡಿಯೋ ಈ ಮಾತಿಗೆ ಸಾಕ್ಷಿಯಂತಿದೆ. ವಿಡಿಯೋದಲ್ಲಿ ಶಾರುಖ್ ಖಾನ್ ಅವರನ್ನು ಮಹಿಳಾ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಅನುಮತಿಯೂ ಕೇಳದೇ ಅವರನ್ನು ತಬ್ಬಿಕೊಂಡಿದ್ದಾರೆ. ಅದೂ ಸಾಲದೆಂಬಂತೆ, ಕಿಸ್ ಮಾಡಿ ಖುಷಿಪಟ್ಟಿದ್ದಾರೆ.
ಈ ವಿಡಿಯೋ ಕಂಡಿರುವ ನೆಟ್ಟಿಗರಲ್ಲಿ ಒಬ್ಬರು, ‘ಇದೇ ರೀತಿ ಯಾವುದಾದರೂ ನಟಿಯ ಜೊತೆ ಪುರುಷ ಅಭಿಮಾನಿಗಳು ನಡೆದುಕೊಂಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು’ ಎಂದಿದ್ದಾರೆ, ಮತ್ತೋರ್ವ ‘ಇದು ಮಹಿಳೆ ಅಥವಾ ಪುರುಷ ಎಂಬ ಪ್ರಶ್ನೆ ಅಲ್ಲ. ಎಲ್ಲರಿಗೂ ಅನ್ವಯ ಆಗುವಂಥದ್ದು. ಅನುಮತಿ ಎಲ್ಲದೇ ಯಾರನ್ನೂ ಮುಟ್ಟಬಾರದು, ಕಿಸ್ ಮಾಡಬಾರದು’ ಎಂದು ಕಮೆಂಟ್ ಮಾಡಿದ್ದಾರೆ. ಇದು ಹಳೆ ವಿಡಿಯೋವಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.