ಕ್ರಿಕೆಟ್ ಲೋಕದ ರನ್ ಮಷಿನ್, ಡೆಲ್ಲಿ ಡ್ಯಾಷರ್ ಎಂದೆಲ್ಲ ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅವರೆಲ್ಲ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಸದ್ಯ, ವಿರಾಟ್ ಅಭಿಮಾನಿಯೊಬ್ಬ ತನ್ನ ನಾಲಗೆಯನ್ನೇ ಬ್ರಷ್ ನಂತೆ ಬಳಸಿ ಕೊಹ್ಲಿಯ ಚಿತ್ರ ಬರೆದಿದ್ದು, ಈ ವಿಡಿಯೋ ಟ್ವಿಟ್ಟರ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ. ವಿಡಿಯೋ ಕಂಡಿರುವ ನೆಟ್ಟಿಗರು ಕೊಹ್ಲಿ ಅಭಿಮಾನಿಯ ಸಾಹಸವನ್ನು ಕೊಂಡಾಡಿದ್ದಾರೆ. ಈ ಬಗೆಗಿನ ಡೀಟಿಯಲ್ಸ್ ಇಲ್ಲಿದೆ ನೋಡಿ.
ಇತ್ತೀಚೆಗಷ್ಟೇ Xನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈತನಕ ಸುಮಾರು 2.7 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 10,700 ಜನರು ಲೈಕ್ ಮಾಡಿದ್ದಾರೆ. ಸುಮಾರು 2 ಸಾವಿರ ಜನರು ರೀಪೋಸ್ಟ್ ಮಾಡಿದ್ದಾರೆ. 1,200 ಜನರು ಪ್ರತಿಕ್ರಿಯಿಸಿದ್ದಾರೆ. ಕಪ್ ಒಂದರಲ್ಲಿ ಪೈಂಟ್ ತುಂಬಿ ಬಳಿಕ ಅದನ್ನು ತನ್ನ ನಾಲಗೆಯಿಂದ ತೆಗೆದು ಖಾಲಿ ಹಾಳೆಯ ಮೇಲೆ ಈ ಯುವಕ ವಿರಾಟ್ ಕೊಹ್ಲಿ ಚಿತ್ರ ಬರೆದಿದ್ದಾನೆ. ಕೈಯಲ್ಲಿ ಕೂಡ ಇಷ್ಟು ಅಂದವಾಗಿ ಚಿತ್ರ ಬರೆಯುವುದು ಕಷ್ಟ, ಅಂತಹದ್ದರಲ್ಲಿ ನಾಲಗೆಯಿಂದ ಇಷ್ಟು ಅದ್ಭುತವಾಗಿ ಹೇಗೆ ಚಿತ್ರ ಬರೆದ ಎಂಬುದೇ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಇದಕ್ಕೂ ಮುನ್ನ ಇನ್ನೊಬ್ಬ ಕಲಾವಿದರು ಭೂತಗನ್ನಡಿಯಿಂದ ಮರದ ಮೇಲ್ಮೈಯನ್ನು ಸುಡುತ್ತ ವಿರಾಟನ ಆಕೃತಿಯನ್ನು ಮೂಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿದೆ. ಆದರೆ ಈ ಆಲೋಚನೆ ನಿಮಗೆ ಹೇಗೆ ಹೊಳೆಯಿತು? ಆ ಬಣ್ಣಗಳು ನಿಮ್ಮ ದೇಹ ಸೇರಿ ಹಾನಿಯುಂಟು ಮಾಡುವುದಿಲ್ಲವೆ? ಎಂದು ಕೇಳಿದ್ದಾರೆ ಒಬ್ಬರು. ಇದು ಸೂಪರ್ ಡ್ಯೂಪರ್ ಆರ್ಟ್ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿ ತನ್ನ ನೆಚ್ಚಿನ ಕ್ರಿಕೆಟಿಗನಿಗೆ ವಿಭಿನ್ನ ರೀತಿಯಲ್ಲಿ ತನ್ನ ಗೌರವ ಸೂಚಿಸಿದ್ದು, ವಿಡಿಯೋ ಕಂಡಿರುವ ನೆಟ್ಟಿಗರು ಯುವಕನ ಪ್ರತಿಭೆಗೆ ಸಲಾಂ ಎಂದಿದ್ದಾರೆ.