“ಬಬ್ಲು ಪೃತ್ವಿರಾಜ್” ಈ ಹೆಸರು ಇತ್ತೀಚೆಗೆ ಯಾವ ಭಾಷೆಯ ಸಿನಿಮಾರಂಗದಲ್ಲೂ ಕೊಡ ಚಾಲ್ತಿಯಲ್ಲಿ ಇಲ್ಲ. ಆದರೆ ತೊಂಬತ್ತು ದಶಕಗಳಲ್ಲಿ ಈ ಹೆಸರು ಬಹಳ ಹೈಪ್ ಪಡೆದುಕೊಂಡಿತ್ತು. ಈ ನಟ ಕನ್ನಡ ಅಲ್ಲದೆ ತೆಲಗು ತಮಿಳಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ನಟ ತಮ್ಮ ಬಣ್ಣವನ್ನು ಹಚ್ಚಿದ್ದು ಚಿಕ್ಕ ಮಗುವಿದ್ದಾಗ.ಬಾಲ್ಯ ನಟನಾಗಿಯೂ ಕೊಡ ಗುರುತಿಸಿಕೊಂಡಿದ್ದಾರೆ.ಇಷ್ಟೆಲ್ಲ ಹೆಸರು ಗಳಿಸಿದ ಆ ಚಿಕ್ಕ ಹುಡುಗನನ್ನು ದಿನ ಕಳೆಯುತ್ತಿದ್ದಂತೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆಗ ಆ ಬಾಲ ಕಲಾವಿದ ತನ್ನ ಕೆರಿಯರ್ ಉತ್ತಮವಾಗಿಸಿಕೊಳ್ಳಲು ಓದಿನ ಬಗ್ಗೆ ಗಮನ ಹರಿಸಲು ತೆರಳುತ್ತಾರೆ.

ಈತ ನಟನೆಯಲ್ಲಿ ಹೇಗೆ ಉತ್ತಮ ಎಂದು ಗುರುತಿಸಿಕೊಂಡಿದ್ದರೋ ಹಾಗೆಯೇ ಇವರ ಸ್ಟಡ್ಜೆಸ್ ನಲ್ಲೂ ಕೊಡ ಅತ್ಯುತ್ತಮ ಎಂದು ಗುರುತಿಸಿಕೊಂಡವರು.ಆದರೆ ಮತ್ತೆ ಸಿನಿಮಾ ರಂಗ ಇವರನ್ನು ಕೈಬೀಸಿ ಕರೆಯುತ್ತದೆ.ಆ ಸಂಧರ್ಭದಲ್ಲಿ ಇವರ ನಟನೆಗೆ ಸಾಲು ಸಾಲು ಉತ್ತಮ ಕಥೆಯೊಂದಿಗೆ ನಟನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ತೊಂಬತ್ತರ ದಶಕದಲ್ಲಿ ಈ ನಟನಿಗೆ ಇದ್ದ ಬೆಲೆ ಬೇರಾವ ನಟರಿಗೂ ಇರಲಿಲ್ಲ.
ಈತ ಬೆಳ್ಳಿ ಪರದೆಮೇಲೇ ಬಂದ ನಂತರ ಬೇರಾವ ನಟರಿಗೆ ಕಾಣಿಸಿಕೊಳ್ಳುವ ಅವಕಾಶವೂ ಸಿಗದಂತೆ ಎಲ್ಲಾ ನಿರ್ದೇಶಕರು ಹಾಗೂ ನಿರ್ಮಾಪಕರು ಇವರ ಮುಂದೆ ಕ್ಯೂ ನಿಲ್ಲುವಂತೆ ಮಾಡಿದ್ದರು.ಆ ನಂತರ ಇವರ ಛಾಪು ಹೊಸ ಪೀಳಿಗೆಯ ನಟರ ಮುಂದೆ ಸ್ವಲ್ಪ ಕಡಿಮೆಯಾಗತೊಡಗಿತ್ತು.ಈಗ ಈ ನಟ ತನ್ನ ಮುಖ್ಯ ಪಾತ್ರದಗಳ ಸ್ಥಾನ ಕಳೆದುಕೊಂಡ ನಂತರ ಈ ನಟ ವಿಲನ್ ಹಾಗೂ ಹಿರಿಯ ಕಲಾವಿದನಾಗಿ ಕಾಣಿಸಿಕೊಂಡರು.ಈಗಲು ತಮಿಳು ಹಾಗೂ ತೆಲಗು ಚಿತ್ರಗಳ ಕೆಲ ಚಿತ್ರಗಳಲ್ಲಿ ವಿಲನ್ ಹಾಗೂ ಹಿರಿಯ ಕಲಾವಿದನಾಗಿ ಕಾಣಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಪ್ರಸಿದ್ಧಿಯನ್ನು ಪಡೆದಿರುವ ಈ ನಟನ ವಯಕ್ತಿಕ ಬಾಳು ಅಷ್ಟಾಗಿ ಚೆನ್ನಾಗಿಲ್ಲ ಎಂದು ಹೇಳಬಹುದು.ಈ ನಟ 1994 ರಲ್ಲಿ “ಬಿನಾ” ಎಂಬುವವರನ್ನು ಪ್ರೀತಿಸಿ ಮದುವೆಯಾಗಿತ್ತಾರೆ.ಮದುವೆಯಾದ ದಿನದಿಂದಲೂ ಈ ಇಬ್ಬರ ನಡುವೆ ಪ್ರೀತಿಸುತ್ತಿದ್ದ ಸಮಯದಲ್ಲಿ ಇದ್ದ ಅನ್ಯೂನ್ಯತೆ ಬರಲಿಲ್ಲ.ಸರಸಕ್ಕಿಂತ ವಿರಸಗಳೇ ಹೆಚ್ಚಾದ ಕಾರಣದಿಂದ ಈ ಜೋಡಿ ಆರು ವರ್ಷಗಳ ಹಿಂದೆ ವಿಚ್ಛೇದನ ತೆಗೆದುಕೊಂಡು ಒಪ್ಪಂದದಿಂದ ದೂರದರು.ಆ ನಂತರ ಒಬ್ಬಂಟಿಯ ಜೀವನ ನಡೆಸುತ್ತಿದ್ದ ಬಬ್ಲು ಪೃತ್ವಿ ರಾಜ್ ಅವರ ಬಾಳಿನಲ್ಲಿ ಬಂದವರೇ “ಶೀತಲ್”.
ಈ ಶೀತಲ್ ಪೃತ್ವಿ ಅವರ ಜಿಮ್ ಟ್ರೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದವರು.ಆ ಸಂಧರ್ಭದಲ್ಲಿ ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು.ಪೃತ್ವಿ ಅವರ ಒಬ್ಬಂಟಿ ಜೀವನದಲ್ಲಿ ಒಬ್ಬ ಒಳ್ಳೆಯ ಕಂಪಿನಿಯರ್ ಆಗಿ ಶೀತಲ್ ಇರುತ್ತಾರೆ. ಆದರೆ ಇವರಿಬ್ಬರ ನಡುವೆ ವಯಸ್ಸಿನ ಅಂತರ ಸಾಕಷ್ಟಿದೆ. ಶೀತಲ್ ಅವರಿಗೆ ಇನ್ನು 24ರ ಹರೆಯ ಆದರೆ ಪೃತ್ವಿ ಅವರಿಗೆ ವಯಸ್ಸು 50ರ ಆಸು ಪಾಸು. ಹೀಗಿದ್ದರೂ ಇವರ ಪ್ರೀತಿಗೆ ಯಾವ ಅಡ್ಡಿಯೂ ಇಲ್ಲ ಎಂದು ಮದುವೆಯಾಗುತ್ತಿರುವ ಸುದ್ದಿ ಸ್ಪಷ್ಟ ಪಡಿಸಿದ್ದಾರೆ. ಕೆಲ ನೇರ ಟೀಕೆಗಳಿಗೂ ಉತ್ತರ ನೀಡಿ ಎಲ್ಲರ ಬಾಯಿ ಕೊಡ ಮುಚ್ಚಿಸಿದ್ದಾರೆ.