ಡಿಕೆ ಶಿವಕುಮಾರ್ ನಡೆ ಈಗ ಸಾಕಷ್ಟು ಸದ್ದು ಮಾಡ್ತಾ ಇದೆ. ನನ್ನ ಉಸಿರೇ ಕಾಂಗ್ರೆಸ್ ಅಂತಿದ್ದ ಕನಕಪುರ ಬಂಡೆ ಈಗ ನಿಧಾನಕ್ಕೆ ಸಾಫ್ಟ್ ಹಿಂದುತ್ವದ ಕಡೆ ವಾಲುತ್ತಿರೋದು ಎಲ್ಲರಿಗೂ ಆಶ್ಚರ್ಯ ಆಗ್ತಾ ಇದೆ. ಅಧಿಕಾರಕ್ಕೋಸ್ಕರ ಇದ್ದ ಪಕ್ಷ ಬಿಡೋದಕ್ಕೂ ರೆಡಿಯಾಗಿದ್ದಾರಾ ಡಿಕೆಶಿ ಅನ್ನೋದೇ ಹೊಸ ವಿಚಾರ ಅಂತದರಲ್ಲಿ ಈಗ ಎಲ್ಲದಕ್ಕೂ ಪೂರಕವಾಗುವಂತೆ ನಡೆದುಕೊಳ್ತಾ ಇರೋದು ಕಾಂಗ್ರೆಸ್ ನಾಯಕರಿಗೇ ಇರಿಸು ಮುರಿಸು ಆಗ್ತಾ ಇದೆ.
ಇದರ ಮಧ್ಯೆ ಡಿಕೆ ಶಿವಕುಮಾರ್ ನಡೆಗೆ ಬಿಜೆಪಿ ನಾಯಕರಂತೂ ಫುಲ್ ಖುಷಿಯಾಗಿದ್ದಾರೆ ಎಂದೆನುಸುತ್ತಿದೆ. ಯಾಕಂದ್ರೆ ಡಿಕೆ ಶಿವಕುಮಾರ್ ವಿಚಾರವಾಗಿ ದಿನಕ್ಕೊಬ್ಬ ಬಿಜೆಪಿ ನಾಯಕರು ಮಾತನಾಡ್ತಾ ಇದ್ದಾರೆ. ಈಗ ಮಾಜಿ ಸಚಿವ ಈಶ್ವರಪ್ಪ ಕೂಡ ಡಿಕೆ ಶಿವಕುಮಾರ್ ರನ್ನ ಹಾಡಿ ಹೊಗಳಿದ್ದಾರೆ. ಬದ್ದ ವೈರಿಗಳಂತೆ ಡಿಕೆ ಶಿವಕುಮಾರ್ ಕಾಣ್ತಾ ಇದ್ದ ಈಶ್ವರಪ್ಪ ಈಗ ಡಿಕೆ ಶಿವಕುಮಾರ್ ನಡೆಗೆ ಭೇಷ್ ಅಂತಿದ್ದಾರೆ.
ಹೌದು, ಇಂದು ಶಿವಮೊಗ್ಗ ದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಅವರು, ಡಿಕೆಶಿ ಒಬ್ಬ ಸ್ವಾತಂತ್ರ್ಯಪೂರ್ವದ ಕಾಂಗ್ರೆಸ್ ನಾಯಕನಂತೆ ಕಾಣುತ್ತಿದ್ದಾರೆ. ಹಿಂದೂ ಆಗಿ ಹುಟ್ಟಿದ್ದು. ಹಿಂದೂ ಆಗಿಯೇ ಸಾಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ನಾನು ತುಂಬಾ ಸಂತೋಷ ವ್ಯಕ್ತಪಡಿಸುತ್ತೇನೆ. ಈ ಹಿಂದೆ ಮುಸಲ್ಮಾನ ಜನಾಂಗದಲ್ಲಿ ಹುಟ್ಟಬೇಕು ಅನ್ನೋದನ್ನೂ ನಾನು ಕೇಳಿದ್ದೇನೆ. ಈಗ ಬದಲಾಗಿರೋದು ಸಂತೋಷವೇ. ಎಲ್ಲ ಕಾಂಗ್ರೆಸ್ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನು ಅನುಸರಿಸಬೇಕು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ನಾಯಕರು ಹಿಂದೂ ಹಿಂದೂ ಅಂತಲೇ ಹೋರಾಟ ಮಾಡಿದ್ದು. ಮಹಾತ್ಮ ಗಾಂಧೀಜಿ ಅವರು ಸಾಯುವಾಗ ಹೇ ರಾಮ್ ಅಂತನೇ ಹೇಳಿ ಸತ್ತಿದ್ದು. ಅವರ ದೆಹಲಿಯಲ್ಲಿರುವ ಸಮಾಧಿ ಮೇಲೆ ಹೇ ರಾಮ್ ಅಂತಾನೇ ಇರೋದು. ಇದು ಅವರಿಗೆ ಸ್ಪೂರ್ತಿ ಸಿಕ್ಕಿರಬಹುದು. ತ್ರಿವೇಣಿ ಸಂಗಮಕ್ಕೆ ಹೋಗಿ ದಂಪತಿ ಸಮೇತ ಪುಣ್ಯ ಸ್ನಾನ ಮಾಡಿ ಬಂದ್ರು. ಬೇರೆ ಬೇರೆಯವರು ಏನೇ ಮಾತನಾಡಿದರು ನಾನು ಅದನ್ನ ಇಲ್ಲಿ ದುರ್ಬಳಕೆ ಮಾಡಿಕೊಳ್ಳಲ್ಲ. ಈ ರೀತಿ ಅವರು ಹೋಗಿ ಬಂದಿದ್ದು ಇಡೀ ರಾಜ್ಯದ, ದೇಶದ ಯುವಕರಿಗೆ ಸ್ಪೂರ್ತಿ ಕೊಡುತ್ತೆ. ಆದರೆ ಅನೇಕರು ಅದನ್ನ ಟೀಕೆ ಮಾಡಿದರು. ಅದಕ್ಕೂ ಉತ್ತರಿಸಿರೋ ಅವರು, ನಾನು ಹಿಂದು ಆಗಿರೋದ್ರಿಂದ ಅದೆಲ್ಲವನ್ನು ಹೆದರಿಸುತ್ತೇನೆ ಅಂತಾನೂ ಹೇಳಿದ್ರು. ನನಗೆ ಧರ್ಮದ ಮೇಲೆ ಪ್ರೀತಿಯನ್ನ ಯಾರು ಕಡಿಮೆ ಮಾಡಲು ಸಾಧ್ಯವಿಲ್ಲ ಬೇರೆ ಧರ್ಮಗಳ ಬಗ್ಗೆ ಟೀಕೆ ಮಾಡಲ್ಲ ಅಂತಲೂ ಹೇಳಿದ್ದಾರೆ. ಇದು ಕೆಲವು ಕಾಂಗ್ರೆಸ್ಗಳಿಗೆ ತಡೆದುಕೊಳ್ಳಲಾಗದೆ ಟೀಕೆ ಮಾಡಿದ್ದಾರೆ ಅಷ್ಟೆ
ಎಲ್ಲ ಕಾಂಗ್ರೆಸ್ ನಾಯಕರಿಗೆ ಹಿಂದೂತ್ವದ ಬಗ್ಗೆ ಪವಿತ್ರ ಸ್ಥಳಗಳ ಬಗ್ಗೆ ಗೌರವವಿದೆ. ಆದರೆ ಹೇಳಿಕೊಳ್ಳುವ ಧೈರ್ಯ ಇಲ್ಲ. ಹಿಂದೂತ್ವ ಮತ್ತು ರಾಷ್ಟ್ರೀಯತೆ, ರಾಷ್ಟ್ರ ಭಕ್ತಿ ನಮ್ಮ ಸ್ವಂತ ಆಸ್ತಿ ಅಲ್ಲ. ಮುಸ್ಲಿಂ, ಹಿಂದೂ ಎಂದು ಬೇಧ ಭಾವ ಮಾಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಿರ್ಣಾಮ ಆಗಿದೆ. ಅದ್ಯಾಕೆ ತ್ರಿವೇಣಿ ಸಂಗಮದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ರೋ ಗೊತ್ತಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಅವರನ್ನು ಹೊಗಳುತ್ತಿದ್ದೇನೆ ಅಂದರೆ ಅದು ಹಿಂದುತ್ವ ವಿಚಾರಕ್ಕೆ. ಅವರು ಹಿಂದುತ್ವವಾದಿ, ರಾಷ್ಟ್ರೀಯವಾದಿಯಾಗಿದ್ದಾರೆ. ಯಾರು ಸ್ವಾತಂತ್ರ್ಯ ಹೋರಾಟಗಾರರಿದ್ದರೋ, ಯಾರು ಇವತ್ತು ಸ್ವಾತಂತ್ರ್ಯಕ್ಕಾಗಿ ಜೀವತೆದ್ದರೂ ಅವರೆಲ್ಲರೂ ಕೂಡ ಸ್ವರ್ಗದಲ್ಲಿದ್ದಾರೆ ಇವತ್ತು ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ ಎಂದರು. ಇಲ್ಲಿ ರಾಜಕೀಯ ಬೆರೆಸುತ್ತಿಲ್ಲ.

ರಾಷ್ಟ್ರೀಯವಾದ ಅನ್ನೋದು ಬಿಜೆಪಿಗೆ ಸೀಮಿತವಾಗಿಲ್ಲ. ರಾಷ್ಟ್ರಭಕ್ತಿ ನಮ್ಮ ಸ್ವಂತ ಆಸ್ತಿಯಲ್ಲ. ಪುಣ್ಯಕ್ಷೇತ್ರಗಳು ನಮ್ಮ ಸ್ವಂತ ಆಸ್ತಿಯಲ್ಲ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದು ಈ ದೇಶ ತನ್ನ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕು ಅಂತ. ಹಿಂದುತ್ವ ಉಳಿಸಿಕೊಳ್ಳಬೇಕು ಅಂತ ಸ್ವತಂತ್ರ ಹೋರಾಟ ಮಾಡಿದ್ದು. ಊಟ ಇಲ್ಲ ಅಂತ ಹೋರಾಟ ಮಾಡಲಿಲ್ಲ. ಇದು ಕೆಲ ಕಾಂಗ್ರೆಸ್ ನಾಯಕರಿಗೆ ಅರ್ಥ ಆಗಬೇಕು.
ಹಿಂದೆ ಡಿಕೆ ಶಿವಕುಮಾರ್ ನನಗೂ ನಮಸ್ತೆ ಸದಾ ವಸ್ತಾರೆ ಬರುತ್ತೆ ಎಂದು ಹೇಳಿದ್ದಾರೆ ಎಂಬುದನ್ನ ಹೇಳಿದರು.
ಡಿಕೆ ಶಿವಕುಮಾರ್ ನಡೆಯನ್ನ ಈಶ್ವರಪ್ಪ ಹಾಡಿ ಹೊಗಳಿದ್ದಾರೆ. ಇದು ಮುಂದುವರೆಯಲಿ ಅನ್ನೋದಕ್ಕೆ ಯಾವುದೇ ಅನುಮಾನ ಇಲ್ಲ. ದೇವಸ್ಥಾನ ಸುತ್ತೋದು, ಸಾಫ್ಟ್ ಹಿಂದುತ್ವ ಎಲ್ಲವನ್ನೂ ಡಿಕೆ ಶಿವಕುಮಾರ್ ಮುಂದುವರೆಸುತ್ತಾರೆ ಅನ್ನೋದ್ರಲ್ಲಿ ನೋ ಡೌಟ್. ಆದರೆ ಕಾಂಗ್ರೆಸ್ ಇದನ್ನ ಯಾವ ರೀತಿ ನೋಡುತ್ತೆ ಅನ್ನೋದು ಮುಖ್ಯ.