ಎಲ್ಲರ ಬದುಕು ಯಾವಾಗಲು ಒಂದೇ ಥರ ಇರೋದಿಲ್ಲ. ಬದುಕು ಯಾವಾಗ ಬೇಕಾದರು ಬದಲಾಗಬಹುದು, ಒಳ್ಳೆ ದಿನಗಳು ಶುರುವಾಗಬಹುದು. ಅದರಿಂದ ಎಲ್ಲವೂ ಒಳ್ಳೆಯದೇ ಆಗಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಡ್ರೋನ್ ಪ್ರತಾಪ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಕೆಲ ವರ್ಷಗಳ ಇಡೀ ಕರ್ನಾಟಕದ ಜನತೆ ಡ್ರೋನ್ ಪ್ರತಾಪ್ ನನ್ನು ತೆಗೆಳಿದ್ದರು, ಆಡಿಕೊಂಡಿದ್ದರು, ಟೀಕೆ ಮಾಡಿದ್ದರು. ಆದರೆ ಇಂದು ಈ ಹುಡುಗನಿಗೆ ಎಲ್ಲರ ಪ್ರೋತ್ಸಾಹ, ಪ್ರೀತಿ ವಿಶ್ವಾಸ ಎಲ್ಲವೂ ಸಿಕ್ಕಿದೆ. ಇದರಿಂದ ಡ್ರೋನ್ ಪ್ರತಾಪ್ ಇಂದು ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ.

ಹೌದು, ಈ ಸಿಹಿ ಸುದ್ದಿಯನ್ನು ಡ್ರೋನ್ ಪ್ರತಾಪ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ತಿಳಿಸಿದ್ದಾರೆ. ಇತ್ತೀಚೆಗೆ ಇವರನ್ನು ಒಬ್ಬ ಸ್ಟ್ರೀಟ್ ಫೋಟೋಗ್ರಾಫರ್ ಭೇಟಿ ಮಾಡಿ, ಫೋಟೋಶೂಟ್ ಮಾಡಿದ್ದರು. ಆ ಫೋಟೋಗಳಲ್ಲಿ ಚೆನ್ನಾಗಿ ಕಾಣಿಸಿಕೊಂಡಿದ್ದರು ಡ್ರೋನ್. ಆ ವೇಳೆ ನೀವು ಫೇಮಸ್ ವ್ಯಕ್ತಿನ ಎಂದು ಕೇಳಿದಾಗ, ತಮ್ಮ ಬಗ್ಗೆ ಹೇಳಿದ ಡ್ರೋನ್ ಪ್ರತಾಪ್, ಸಿನಿಮಾದಲ್ಲಿ ನಾಯಕನಾಗೋದಕ್ಕೆ ಆಫರ್ ಬಂದಿದೆ ಎಂದು ಕೂಡ ತಿಳಿಸಿದ್ದರು. ಆ ವಿಚಾರ ಈಗ ನಿಜವಾಗಿದೆ. ಹೀರೋ ಆಗೋದಕ್ಕೆ ಡ್ರೋನ್ ಪ್ರತಾಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಡ್ರೋನ್ ಪ್ರತಾಪ್. ಒಂದು ಸಿನಿಮಾಗೆ ನಾಯಕನಾಗಿ ಪ್ರಾಜೆಕ್ಟ್ ಸೈನ್ ಮಾಡಿದ್ದೇನೆ ಮತ್ತು ಮಂಡ್ಯ ಜಿಲ್ಲೆಯ ಕೆ. ಆರ್ ನಗರದಲ್ಲಿ ಆಂಜನೇಯ ಸ್ವಾಮಿಯ ದೇವಸ್ಥಾನದ ಉದ್ಘಾಟನೆ ಮಾಡಿದ್ದೇನೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಡ್ರೋನ್ ಪ್ರತಾಪ್ ಹೀರೋ ಆಗ್ತಿದ್ದಾರೆ ಅನ್ನೋ ವಿಷಯ ಗೊತ್ತಾಗಿ ಅವರ ಅಭಿಮಾನಿಗಳು ಬಹಳ ಸಂತೋಷಪಡುತ್ತಿದ್ದು, ಶುಭವಾಗಲಿ ಎಂದು ವಿಶ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಸಿನಿಮಾ ಸೈನ್ ಮಾಡಿರೋ ಬಗ್ಗೆ ಮಾತ್ರ ತಿಳಿಸಿದ್ದಾರೆ ಡ್ರೋನ್ ಪ್ರತಾಪ್, ಆದರೆ ಹೆಚ್ಚಿನ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ.
ಸಿನಿಮಾದಲ್ಲಿ ನಾಯಕಿ ಯಾರು, ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ, ನಿರ್ದೇಶಕ ಯಾರು, ನಿರ್ಮಾಪಕ ಯಾರು, ಕಥೆ ಹೇಗಿದೆ? ಈ ಯಾವ ಪ್ರಶ್ನೆಗೂ ಸಹ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಡ್ರೋನ್ ಪ್ರತಾಪ್ ನಾಯಕ ಆಗಿರುವುದು ಮಾತ್ರ ಕನ್ಫರ್ಮ್ ಆಗಿದೆ. ಇವರ ಅಭಿಮಾನಿಗಳು ಆದಷ್ಟು ಬೇಗ ಸಂತೋಷದ ಸುದ್ದಿ ಕೊಡಿ, ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಕೊಡಿ ಎಂದು ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಜನರಿಂದ ಟೀಕೆಗೆ ಗುರಿಯಾಗಿದ್ದ ಪ್ರತಾಪ್ ಇಂದು ಒಳ್ಳೆಯ ಹಂತಕ್ಕೆ ಬಂದು ನಿಂತಿರುವುದು ಸಂತೋಷದ ವಿಷಯ. ಸಿಕ್ಕ ಒಂದು ಅವಕಾಶವನ್ನು ಇವರು ಸರಿಯಾದ ರೀತಿಯಲ್ಲಿ ಬಳಸಿಕೊಂಡರು.
ಬಿಗ್ ಬಾಸ್ ಅವಕಾಶ ಬಂದು, ಡ್ರೋನ್ ಪ್ರತಾಪ್ ಬಿಗ್ ಮನೆಗೆ ಹೋದಾಗ ಒಳಗಿದ್ದ ಕೆಲವರು ಸಹ ಇವರನ್ನು ಟೀಕೆ ಮಾಡಿದ್ದರು, ಜನರಿಗೆ ಸುಳ್ಳು ಹೇಳಿದ್ದೆ ನಿನ್ನ ಸಾಧನೆ ಎನ್ನುವಂತೆ ಮಾತನಾಡಿದ್ದರು. ಆದರೆ ಡ್ರೋನ್ ಪ್ರತಾಪ್ ತಾಳ್ಮೆಯಿಂದ ಇದ್ದು, ತಮ್ಮತನವನ್ನು ಬಿಟ್ಟುಕೊಡದೇ, ಎಲ್ಲವನ್ನು ಸಹಿಸಿಕೊಂಡು, ತಮ್ಮ ನೈಜ ವ್ಯಕ್ತಿತ್ವದ ಮೂಲಕ ಹೊರಗಿನ ಜನರ ಮನಸ್ಸು ಗೆದ್ದರು. ಈ ಕಾರಣಕ್ಕೆ ಇವರಿಗೆ ಜನರ ಸಪೋರ್ಟ್ ಕೂಡ ಸಿಕ್ಕಿತು. ಹೊರಬಂದ ಮೇಲೆ ತಮ್ಮ ಕಂಪನಿಯ ಮೂಲಕ ಡ್ರೋನ್ ಹಾರಿಸಿ, ಗೊಬ್ಬರ ಸಿಂಪಡಿಸಿ, ರೈತರಿಗೂ ಸಹಾಯ ಮಾಡುತ್ತಿದ್ದಾರೆ. ಈಗ ಸಿನಿಮಾದಲ್ಲಿ ಹೀರೋ ಸಹ ಆಗಿದ್ದಾರೆ.