ನಟ ಖೇಸರಿ ಲಾಲ್ ಯಾದವ್ ಅವರ ಚಲನಚಿತ್ರಗಳು ಮತ್ತು ಹಾಡುಗಳು ಬಿಡುಗಡೆಯಾದ ತಕ್ಷಣ ಭೋಜ್ಪುರಿ ಥಿಯೇಟರ್ಗಳಲ್ಲಿ ಜನಪ್ರಿಯವಾಗುತ್ತವೆ. ಇವರನ್ನು ಭೋಜ್ಪುರಿ ಚಿತ್ರರಂಗದ ಸೂಪರ್ಸ್ಟಾರ್ ಎಂದು ಕರೆಯುತ್ತಾರೆ. ಅವರ ಸ್ಟೈಲ್ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚಿತವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಖೇಸರಿ ಲಾಲ್ ಯಾದವ್ ಸಿನಿಮಾದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಹೆಚ್ಚು ಸುದ್ದಿಯಲ್ಲಿದ್ದಾರೆ. ಏಕೆಂದರೆ ನಟಿ ಆಕಾಂಕ್ಷಾ ಪುರಿ ಅವರೊಂದಿಗೆ ಕಾಣಿಸಿಕೊಳ್ಳುವುದಷ್ಟೇ ಅಲ್ಲ, ಇಬ್ಬರೂ ಆಗಾಗ್ಗೆ ಒಟ್ಟಿಗೆ ವರ್ಕ್ ಔಟ್ ಮಾಡುವ ಅನೇಕ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ಆಕಾಂಕ್ಷಾ ಪುರಿ ಇತ್ತೀಚೆಗೆ ಭೋಜ್ಪುರಿ ಉದ್ಯಮಕ್ಕೆ ಪ್ರವೇಶಿಸಿದ್ದಾರೆ. ಅವರು ಖೇಸರಿ ಲಾಲ್ ಯಾದವ್ ಅವರೊಂದಿಗೆ ‘ಲಟಕ್ ಜೈಬಾ’ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಇತ್ತೀಚಿನ ದಿನಗಳಲ್ಲಿ ಸಖತ್ ವೈರಲ್ ಆಗಿದೆ. ಹಾಡಿನ ಹೆಚ್ಚುತ್ತಿರುವ ಜನಪ್ರಿಯತೆಯ ಮಧ್ಯೆ, ಖೇಸರಿ ಲಾಲ್ ಯಾದವ್ ಮತ್ತು ಆಕಾಂಕ್ಷಾ ಪುರಿ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆದರೆ ಇದನ್ನು ನೋಡಿದ Instagram ಬಳಕೆದಾರರು ಸಂತೋಷವಾಗಿಲ್ಲ. ಬದಲಿಗೆ ಅಶ್ಲೀಲತೆಯನ್ನು ಹರಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ
ಖೇಸರಿ ಲಾಲ್ ಯಾದವ್ ಮತ್ತು ಆಕಾಂಕ್ಷಾ ಪುರಿ ಅವರ ಇತ್ತೀಚಿನ ವಿಡಿಯೋ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದ್ದು, ಇದರಲ್ಲಿ ಅವರು ಜಿಮ್ನಲ್ಲಿ ಒಟ್ಟಿಗೆ ವರ್ಕ್ ಔಟ್ ಮಾಡುತ್ತಿರುವುದನ್ನು ಕಾಣಬಹುದು. ಆಕಾಂಕ್ಷಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಅದಕ್ಕೆ ‘ಹಮಾರಾ ಸ್ಟೈಲ್ ಕಾ ಲಟಕ್ ಜೈಬಾ’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರೂ ಪುಲ್ಅಪ್ ಮಾಡುತ್ತಿದ್ದಾರೆ. ಆಕಾಂಕ್ಷಾ ಪುರಿ ಖೇಸರಿ ಲಾಲ್ ಯಾದ್ ಅವರ ಮಡಿಲಲ್ಲಿ ನೇತಾಡುತ್ತಿರುವಾಗ ಪುಲ್ಅಪ್ ಮಾಡುತ್ತಿರುವುದು ಕಂಡುಬರುತ್ತದೆ. ಇಬ್ಬರ ಈ ವೀಡಿಯೋ ನೋಡಿ ಜನ ಇದು ಅಶ್ಲೀಲವಾಗಿದೆ ಎನ್ನುತ್ತಿದ್ದಾರೆ. ಅಂದಹಾಗೆ, ಇದಕ್ಕೂ ಮೊದಲು ಇಬ್ಬರೂ ಒಟ್ಟಿಗೆ ಜಿಮ್ ವಿಡಿಯೋವನ್ನು ಹಂಚಿಕೊಂಡಿದ್ದರು, ಅದನ್ನು ನೋಡಿದಾಗ ನೆಟ್ಟಿಗರು ಪ್ರಶಂಸಿಸಿದ್ದರು. ಆದರೆ ಈ ವಿಡಿಯೋದಲ್ಲಿ, ಇಬ್ಬರೂ ಸ್ಟ್ರೆಚ್ ಮಾಡುತ್ತಿರುವುದು ಕಂಡುಬಂದಿದೆ ಮತ್ತು ನಟಿಯ ಸೂಪರ್ಫಿಟ್ ದೇಹವು ಕಂಡುಬರುತ್ತದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ಜಿಮ್ ವಿಡಿಯೋ ನೋಡಿದ ನಂತರ, ಜನರು ವಿಚಿತ್ರ ಮಾತ್ರವಲ್ಲ ಇದು ಅಸಂಬದ್ಧ ಎಂದು ಕರೆದಿದ್ದಾರೆ. ಒರ್ವ ಬಳಕೆದಾರರಂತೂ “ಅಶ್ಲೀಲತೆಯನ್ನು ಹರಡಬೇಡಿ… ನಿಮಗೇ ಅವಮಾನ” ಎಂದು ಬರೆದಿದ್ದಾರೆ. ಹಾಗೆಯೇ “ಇದು ತುಂಬಾ ಡ್ರಾಮಾ”, “ಮೊದಲು ಹಾಡುಗಳಲ್ಲಿ ಅಶ್ಲೀಲತೆ ಇತ್ತು ಮತ್ತು ಈಗ ಅದು ಇನ್ಸ್ಟಾಗ್ರಾಮ್ನಲ್ಲಿಯೂ ಸಂಭವಿಸಲು ಪ್ರಾರಂಭಿಸಿದೆ” ಎಂದು ಕಾಮೆಂಟ್ ವಿಭಾಗವು ವಿಚಿತ್ರ ಕಾಮೆಂಟ್ಗಳಿಂದ ತುಂಬಿದೆ. ಆದರೆ ಇವರಿಬ್ಬರನ್ನೂ ಸೂಪರ್ಫಿಟ್ ಎಂದು ಕರೆಯುವವರು ಬಹಳ ಮಂದಿ ಇದ್ದಾರೆ.
ಸದ್ದು ಮಾಡುತ್ತಿರುವ ಖೇಸರಿ ಲಾಲ್ ಯಾದವ್
ಇತ್ತೀಚಿನ ದಿನಗಳಲ್ಲಿ ಖೇಸರಿ ಲಾಲ್ ಯಾದವ್ ಅವರು ಕಾಜಲ್ ರಾಘವಾನಿ ಅವರೊಂದಿಗೆ ಬ್ರೇಕಪ್ ಮಾಡಿಕೊಂಡ ನಂತರ ಸುದ್ದಿಯಲ್ಲಿದ್ದಾರೆ. ಕಾಜಲ್ ಖೇಸರಿ ಲಾಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಖೇಸರಿ ಲಾಲ್ ಯಾದವ್, ವಿವಾಹವಾಗಿದ್ದರೂ, ಕಾಜಲ್ ರಾಘವಾನಿ ಮತ್ತು ಅಕ್ಷರಾ ಸಿಂಗ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು. ಸ್ವತಃ ನಾಯಕಿಯರಿಬ್ಬರೂ ಕೇಸರಿ ಲಾಲ್ ವಿರುದ್ಧ ಈ ಆರೋಪವನ್ನು ಮಾಡಿದ್ದಾರೆ. ಆಕಾಂಕ್ಷಾ ಪುರಿ ಅವರು ಪರಾಸ್ ಛಾಬ್ರಾ ಅವರೊಂದಿಗೆ ಬ್ರೇಕಪ್ ನಂತರ ಬೆಳಕಿಗೆ ಬಂದರು. ನಂತರ ಅವರು ಮಿಕಾ ಜೊತೆ ಸ್ವಯಂವರ ಶೋದಲ್ಲಿ ಭಾಗವಹಿಸಿದರು ಮತ್ತು ವಿನ್ ಆದರು.