ನಟ ರಾಕ್ಷಸ ಎಂದೇ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವವರು ನಟ ಡಾಲಿ ಧನಂಜಯ್. ಇವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಧನಂಜಯ್ ಅವರು ಇಷ್ಟು ವರ್ಷ ಸಿಂಗಲ್ ಆಗಿದ್ದರು, ಆದರೆ ಕನ್ನಡ ರಾಜ್ಯೋತ್ಸವದ ದಿವಸ ಗುಡ್ ನ್ಯೂಸ್ ಕೊಟ್ಟು, ದೀಪಾವಳಿ ಹಾಗೂ ರಾಜ್ಯೋತ್ಸವದ ವೇಳೆ ಕನ್ನಡ ಕವಿತೆ ಹೇಳುವ ಮೂಲಕ ತಮ್ಮ ಮದುವೆಯ ಸಂತೋಷದ ಸುದ್ದಿಯನ್ನು ಹಂಚಿಕೊಂಡರು. ತಾವು ಮದುವೆ ಆಗುತ್ತಿರುವ ಹುಡುಗಿ ಧನ್ಯತಾ ಅವರನ್ನು ಪರಿಚಯ ಮಾಡಿಕೊಟ್ಟರು. ಇದೀಗ ಈ ಜೋಡಿಯ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ವರ್ಷ ಇಬ್ಬರೂ ಕೂಡ ಅದ್ಧೂರಿಯಾಗಿ ಮದುವೆ ಆಗಲಿದ್ದಾರೆ.

ಇದೀಗ ಈ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಕೂಡ ಬಹಳ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಬಹಳ ಸರಳವಾಗಿ, ಶಾಸ್ತ್ರೋಕ್ತವಾಗಿ ಇಬ್ಬರ ಎಂಗೇಜ್ಮೆಂಟ್ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಈ ಜೋಡಿಯನ್ನು ನೋಡಿದ ಎಲ್ಲರಿಗೂ ಬಹಳ ಸಂತೋಷ ಆಗಿದ್ದು, ಇಬ್ಬರು ಹೀಗೆ ಖುಷಿಯಾಗಿ, ಸಂತೋಷವಾಗಿ ಇರಲಿ, ಇಬ್ಬರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತಿದ್ದಾರೆ
ಇಂದು ಇವರಿಬ್ಬರ ನಿಶ್ಚಿತಾರ್ಥ ನೆರವೇರಿದ್ದು, ಮದುವೆ ಯಾವಾಗ ಎಂದು ಹೇಳುವುದಾದರೆ, ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ಫೆಬ್ರವರಿ 16ರಂದು ಇವರಿಬ್ಬರ ಮದುವೆ ನಡೆಯಲಿದೆ. ಈ ಜೋಡಿಗೆ ಮೈಸೂರು ತುಂಬಾ ಹತ್ತಿರವಾದ ಊರು. ಧನ್ಯತಾ ಅವರು ಓದಿದ್ದೆಲ್ಲವು ಮೈಸೂರಿನಲ್ಲಿ, ಇನ್ನು ಧನಂಜಯ್ ಅವರು ಸಹ ಓದಿದ್ದು ನಾಟಕಗಳನ್ನು ಮಾಡುವುದಕ್ಕೆ ಶುರು ಮಾಡಿದ್ದು ಇದೆಲ್ಲವೂ ಮೈಸೂರಿನಲ್ಲೇ ಹಾಗಾಗಿ ಇವರಿಬ್ಬರು ಮೈಸೂರಿನಲ್ಲೇ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಧನಂಜಯ್ ಹಾಗೂ ಧನ್ಯತಾ ಅವರ ಮದುವೆ ಅದ್ಧೂರಿಯಾಗಿ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ.
ಧನಂಜಯ್ ಅವರು ತಮ್ಮ ಹುಡುಗಿಯನ್ನು ಜನರಿಗೆ ಪರಿಚಯ ಮಾಡಿಕೊಟ್ಟ ವಿಧಾನವೇ ಬಹಳ ಸುಂದರವಾಗಿತ್ತು, ಕನ್ನಡ ಕವಿತೆಯನ್ನು ಹೇಳುವ ಮೂಲಕ ಕನ್ನಡಕ್ಕೆ ಗೌರವ ಕೊಟ್ಟು, ಕನ್ನಡ ಜನತೆಗೆ ಹತ್ತಿರ ಆಗುವಂತೆ ಹುಡುಗಿಯನ್ನು ಪರಿಚಯ ಮಾಡಿಕೊಟ್ಟರು. ಧನಂಜಯ್ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ, ಇವರು ಬಹಳ ಕಷ್ಟಪಟ್ಟು, ಕನ್ನಡ ಚಿತ್ರರಂಗದಲ್ಲಿ ಒಂದು ಸ್ಥಾನ ಕಂಡುಕೊಂಡವರು. ಟಗರು ಸಿನಿಮಾದ ಡಾಲಿ ಪಾತ್ರ ಇವರಿಗೆ ಒಳ್ಳೆಯ ಹೆಸರು, ಜನಪ್ರಿಯತೆ ಇದೆಲ್ಲವನ್ನೂ ತಂದುಕೊಟ್ಟಿತು, ಇಂದು ನಿರ್ಮಾಪಕರಾಗಿ ಕೂಡ ಧನಂಜಯ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಇನ್ನು ಧನ್ಯತಾ ಅವರು ವೃತ್ತಿಯಲ್ಲಿ ಡಾಕ್ಟರ್. ಇವರು ಸಹ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದ ಹುಡುಗಿ. ಬಹಳ ಕಷ್ಟಪಟ್ಟು ಓದಿ, ಇಂದು ಡಾಕ್ಟರ್ ಆಗಿದ್ದಾರೆ. ಧನ್ಯತಾ ಅವರು ಗೈನಕಾಲಜಿಸ್ಟ್. ಇವರಿಬ್ಬರು ಕಾಮನ್ ಫ್ರೆಂಡ್ಸ್ ಮೂಲಕ ಭೇಟಿಯಾಗಿ, ಸ್ನೇಹ ಶುರುವಾಗಿ, ಬಳಿಕ ಪ್ರೀತಿ ಮಾಡುವುದಕ್ಕೆ ಶುರು ಮಾಡಿದರು. ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿತು. ಈಗ ಈ ಜೋಡಿ ಮದುವೆ ಆಗುವುದಕ್ಕೆ ತಯಾರಿ ನಡೆಸುತ್ತಿದೆ. ಇವರಿಬ್ಬರು ಒಳ್ಳೆಯದಾಗಲಿ ನೂರು ಕಾಲ ಚೆನ್ನಾಗಿರಲಿ ಎಂದು ಸಂತೋಷದಿಂದ ವಿಶ್ ಮಾಡುತ್ತಿದ್ದಾರೆ ಅಭಿಮಾನಿಗಳು.
.