ಕೆಲ ಹೆಣ್ಣುಮಕ್ಕಳಿಗೆ ಸ್ವಾವಲಂಬಿಗಳಾಗಿರಬೇಕು. ತಾವು ದುಡಿಯಬೇಕು ಎಂಬ ಆಸೆಯಿರುತ್ತದೆ. ಕೆಲ ಹೆಣ್ಣುಮಕ್ಕಳಿಗೆ ಗಂಡನ ಮನೆಯಲ್ಲಿ ಅವಕಾಶ ನೀಡಿದರೆ, ಕೆಲ ಹೆಣ್ಣುಮಕ್ಕಳಿಗೆ ಅವಕಾಶ ನೀಡುವುದಿಲ್ಲ. ಇದರಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಕೊನೆಗೆ ದಂಪತಿಗಳು ವಿಚ್ಛೇದನ ಪಡೆಯುತ್ತಾರೆ. ಹೀಗೆ ದಾಂಪತ್ಯ ಜೀವನದಲ್ಲಿ ಬರುವ ಹಲವಾರು ಸಮಸ್ಯೆಗಳು ವಿಕೋಪಕ್ಕೆ ತಿರುಗಿ ದಾಂಪತ್ಯ ಜೀವನದ ತಳಪಾಯವನ್ನೇ ಕೆಡಿಸುತ್ತದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಮದುವೆಯಾದ ಬಳಿಕ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸುತ್ತಾರೆ. ಕಾರಣ ಗಂಡನಿಗೆ ಹೆಂಡತಿ ಮೇಲೆ ನಂಬಿಕೆ ಇಲ್ಲದೆ ಇರುವುದು, ನೀನು ಮನೆಯಲ್ಲಿ ಟ್ಯೂಷನ್ ಮಾಡುವುದರಿಂದ ನನ್ನ ತಂದೆ ತಾಯಿಗೆ ತೊಂದರೆ ಆಗುತ್ತದೆ.
ನೀನು ಕೆಲಸಕ್ಕೆ ಹೋಗಬೇಡ ಗಂಡಸಾಗಿ ನಿನ್ನ ಸಾಕುವ ಜವಾಬ್ದಾರಿ ನನ್ನದು. ಮಕ್ಕಳ ಬಗ್ಗೆ ಗಮನ ನೀಡು. ಹೀಗೆ ಒಂದೊಂದು ಗಂಡಂದಿರು ಒಂದೊಂದು ರೀತಿ ಹೇಳುತ್ತಾರೆ. ಹೆಂಡತಿ ಕೆಲಸಕ್ಕೆ ಹೋಗಬೇಕೋ ಬೇಡವೋ ಎನ್ನುವುದು ಬರೀ ಆರ್ಥಿಕ ಸಮಸ್ಯೆಯ ಮೇಲೆ ಅವಲಂಬಿತವಾಗಿರುವುದಿಲ್ಲ ಎನ್ನುವುದನ್ನು ಗಂಡಸರು ಯೋಚನೆ ಮಾಡಬೇಕು. ಹೊರಗಡೆ ಹೋಗಿ ಕೆಲಸ ಮಾಡುವುದರಿಂದ ಹಲವಾರು ಒಳ್ಳೆಯ ವಿಷಯಗಳು ತಿಳಿಯುತ್ತದೆ. ನೂರಾರು ಜನರ ಜೊತೆ ಬೆರೆಯಬಹುದು. ಬೇರೆ ಯಾರದ್ದೋ ಹೆಂಡತಿ ಗಂಡನನ್ನು ಬಿಟ್ಟು ಓಡಿ ಹೋದರೆ, ನಿಮ್ಮ ಹೆಂಡತಿಯೂ ಹಾಗೆ ಮಾಡಬೇಕೆಂದೇನಿಲ್ಲ. ಒಂದು ವೇಳೆ ನೀವು ಹೆಂಡತಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ, ಎಲ್ಲಿಯೂ ಹೋಗದಂತೆ ಎಷ್ಟೇ ಬಂದೋಬಸ್ತ್ ಮಾಡಿದರೂ ಅವರು ಓಡಿ ಹೋಗಲೂ ಬಹುದು ಹೋಗದೆಯೂ ಇರಬಹುದು.
ಹೆಂಡತಿ ಕೆಲಸಕ್ಕೆ ಹೋಗಬೇಕೋ ಬೇಡವೋ ಎನ್ನುವುದು ಬರೀ ಆರ್ಥಿಕ ಸಮಸ್ಯೆಯ ಮೇಲೆ ಅವಲಂಬಿತವಾಗಿರುವುದಿಲ್ಲ ಎನ್ನುವುದನ್ನು ಗಂಡಸರು ಯೋಚನೆ ಮಾಡಬೇಕು. ಹೊರಗಡೆ ಹೋಗಿ ಕೆಲಸ ಮಾಡುವುದರಿಂದ ಹಲವಾರು ಒಳ್ಳೆಯ ವಿಷಯಗಳು ತಿಳಿಯುತ್ತದೆ. ನೂರಾರು ಜನರ ಜೊತೆ ಬೆರೆಯಬಹುದು. ಬೇರೆ ಯಾರದ್ದೋ ಹೆಂಡತಿ ಗಂಡನನ್ನು ಬಿಟ್ಟು ಓಡಿ ಹೋದರೆ, ನಿಮ್ಮ ಹೆಂಡತಿಯೂ ಹಾಗೆ ಮಾಡಬೇಕೆಂದೇನಿಲ್ಲ. ಒಂದು ವೇಳೆ ನೀವು ಹೆಂಡತಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ, ಎಲ್ಲಿಯೂ ಹೋಗದಂತೆ ಎಷ್ಟೇ ಬಂದೋಬಸ್ತ್ ಮಾಡಿದರೂ ಅವರು ಓಡಿ ಹೋಗಲೂ ಬಹುದು ಹೋಗಿದೆಯೂ ಇರಬಹುದು. ಆದರೆ ನಮ್ಮ ಸಂಗಾತಿ ಬಗ್ಗೆ ನಮಗೆ ನಂಬಿಕೆ ಇರಬೇಕು. ಕೆಲ ಹೆಣ್ಣುಮಕ್ಕಳನ್ನು ನಮ್ಮದು ದೊಡ್ಡ ಮನೆತನ, ನಮ್ಮ ಮನೆಯಲ್ಲಿ ಯಾರೂ ಕೆಲಸಕ್ಕೆ ಹೋಗಿಲ್ಲ ಎಂದು ಗಂಡನ ಮನೆಯವರು ಆಕೆಯನ್ನು ಕೆಲಸಕ್ಕೆ ಕಳುಹಿಸುವುದಿಲ್ಲ.
ಹೀಗೆ ಇದ್ದಾಗ ಮನೆಯಿಂದ ಹೊರಗೆ ಹೋಗಬೇಕು ಎನ್ನುವ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ಹೋಗಿ ಕಸ ಗುಡಿಸುವುದು, ಪ್ರಸಾದಕ್ಕೆ ಪೇಪರ್, ದೊನ್ನೆಗಳನ್ನು ಹಂಚುವುದು, ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುವುದು, ಹೀಗೆ ಏನಾದರೂ ಕೆಲಸ ಮನೆಯಿಂದ ಹೊರಗೆ ಹೋಗಿ ಮಾಡುವುದರಿಂದ ಜೀವನೋತ್ಸಾಹ ಇರುತ್ತದೆ. ಹೀಗಂತ ಮನೆ ಕೆಲಸಗಳನ್ನ ನಿರ್ಲಕ್ಷ್ಯ ಮಾಡಬಾರದು. ಕೇವಲ ಒಂದು-ಎರಡು ಗಂಟೆ ಮನೆಯಿಂದ ಹೊರಗೆ ಇದ್ದರೆ ಮನಸ್ಸಿಗೆ ಉಲ್ಲಾಸ ಸಿಗುತ್ತದೆ.ಕೆಲ ಹೆಣ್ಣುಮಕ್ಕಳು ನನ್ನ ಗಂಡ ಹೊಡಿಯುತ್ತಾನೆ. ನನಗೆ ಏನು ತಂದುಕೊಡುವುದಿಲ್ಲ. ನನ್ನ ಸಂಬಳ ಪೂರ್ತಿ ಅವನೇ ಕಿತ್ತುಕೊಳ್ಳುತ್ತಾನೆ ಎಂದು ಕೊರಗುತ್ತಾರೆ. ಹೀಗಿರುವಾಗ ನಮ್ಮ ಓದಿಗೆ ತಕ್ಕಂತೆ ಸಿಗುವ ಕೆಲಸವನ್ನ ಮಾಡಬೇಕು. ಈ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಬೇರೆಯವರು ನಮಗೆ ಗೌರವವನ್ನು ಕೊಡುತ್ತಾರೆ.
ಆಗ ನಮ್ಮನ್ನು ಯಾರೂ ತುಚ್ಛವಾಗಿ ಕಾಣುವುದಿಲ್ಲ. ಇನ್ನು ಹೆಂಡತಿಗೆ ಎಷ್ಟು ದುಡ್ಡು ಕೊಡುವುದು, ದಿನ ಪೂರ್ತಿ ದುಡಿಯಬೇಕು ಎಂದೆಲ್ಲಾ ಕೆಲ ಗಂಡಸರು ಸಿಟ್ಟು ಮಾಡುತ್ತಾರೆ. ಇನ್ನು ಕೆಲ ಹೆಣ್ಣುಮಕ್ಕಳು ನನ್ನ ಗಂಡ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ. ನಾನು ಅವನ ಮೇಲೆ ಜೀವನಾಂಶದ ಕೇಸ್ ಹಾಕಿದ್ದೇನೆ. ತಾನೇನಾದರೂ ಕೆಲಸಕ್ಕೆ ಹೋದರೆ ನ್ಯಾಯಾಲಯದಿಂದ ಬರುವ ಜೀವನಾಂಶ ಸಿಗುವುದಿಲ್ಲ ಎಂದು ಕೆಲಸಕ್ಕೆ ಹೋಗುವುದನ್ನು ಬಿಟ್ಟಿರುತ್ತಾರೆ. ಜೀವನಾಂಶಕ್ಕಾಗಿ ಇಷ್ಟು ದಿನ ಓದಿನಿಂದ ಬರುವಂತ ಲಾಭವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ, ಸಿಕ್ಕಿರುವ ಒಳ್ಳೆ ಕೆಲಸವನ್ನು ಬಿಡುವುದು ಎಷ್ಟು ಸರಿ.
ನ್ಯಾಯಾಲಯದಲ್ಲಿ ವಿಚ್ಛೇದನದ ಕೇಸ್ ಮುಗಿಯಲು ಐದು-ಹತ್ತು ವರ್ಷಗಳು ಬೇಕಾದರೆ ಆನಂತರ ಕೆಲಸ ಸಿಗುವುದು ಕಷ್ಟವಾಗುತ್ತದೆ. ಜೊತೆಗೆ ನಾವು ಓದಿರುವುದು ಎಲ್ಲಾ ನೆನಪು ಹೋಗಿರುತ್ತದೆ. ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಹೆಣ್ಣುಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು.ಗಂಡ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಹೆಂಡತಿ ಮನೆಯಲ್ಲೇ ಇದ್ದರೆ ಗಂಡನಿಗೆ ಹೆಂಡತಿ ಮೇಲೆ ಗೌರವ ಬರುವುದಿಲ್ಲ. ಆಗ ಹೆಂಡತಿ ತಾನು ಕೆಲಸಕ್ಕೆ ಹೋಗುವುದರಿಂದ ಆಗುವ ಲಾಭಗಳನ್ನು ಗಂಡನಿಗೆ ತಿಳಿಸಿ ಹೇಳಿ, ಕೆಲಸಕ್ಕೆ ಹೋಗಿ, ಆರ್ಥಿಕವಾಗಿ ಸಹಾಯ ಮಾಡುವುದರಿಂದ ಗಂಡನಿಗೆ ಹೆಂಡತಿ ಮೇಲೆ ಗೌರವ ಹೆಚ್ಚಾಗುತ್ತದೆ.
ಹುಡುಗಿ ಮದುವೆ ನಂತರ ಕೆಲಸಕ್ಕೆ ಹೋಗಲು, ತಂದೆ-ತಾಯಿಗೆ ಸಹಾಯ ಮಾಡಲು ಅವಕಾಶ ನೀಡಬೇಕೆಂಬ ಷರತ್ತಿನೊಂದಿಗೆ ಮದುವೆ ಆಗಿರುತ್ತಾಳೆ. ಆದರೆ ಮದುವೆ ಬಳಿಕ ಗಂಡ ಹೆಂಡತಿ ದುಡಿದಿರುವುದೆಲ್ಲಾ ತವರು ಮನೆಗೆ ಕೊಡುತ್ತಾಳೆ ಎಂದು ಕೆಲಸಕ್ಕೆ ಹೋಗುವುದು ಬೇಡ ಎನ್ನುತ್ತಾನೆ. ಕೆಲಸಕ್ಕೆ ಹೋಗಬೇಕೋ ಬೇಡವೇ ಎಂಬುದು ಹುಡುಗಿಯ ನಿರ್ಧಾರ. ಕೆಲಸಕ್ಕೆ ಹೋಗಬೇಡ ಎಂದು ಹೇಳುವ ಅಧಿಕಾರ ಗಂಡನಿಗೆ ಇಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಯಾರಾದರೂ ಒಬ್ಬರು ತ್ಯಾಗ ಮಾಡಲೇ ಬೇಕಾಗುತ್ತದೆ. ಅಥವಾ ಆಕೆಗೆ ಗಂಡನೇ ಸಹಾಯ ಮಾಡುವ ಮೂಲಕ ಹೊಂದಿಕೊಂಡು ಹೋಗಬೇಕು.
ಹೆಂಡತಿಯನ್ನು ಯಾವತ್ತೂ ಹೊರಗಡೆ ಕಳುಹಿಸಿದೆ ಮನೆಯಲ್ಲೇ ಕೂಡಿ ಹಾಕಿದರೆ, ಆಕೆ ಯಾವತ್ತೂ ಗಂಡನನ್ನು ಸಂಗಾತಿ ಎಂದು ಒಪ್ಪಿಕೊಳ್ಳುವುದಿಲ್ಲ. ಸಂಬಂಧಗಳನ್ನು ಯಾವತ್ತೂ ಲಘುವಾಗಿ ತೆಗೆದುಕೊಳ್ಳಬಾರದು. ಹೆಂಡತಿಗೂ ಅವರದ್ದೇ ಆದ ನಿರೀಕ್ಷೆಗಳಿರುತ್ತವೆ. ಹೆಂಡತಿ ತನಗಿಂತ ಕಡಿಮೆ ದುಡಿದರೆ ತಮ್ಮ ಘನತೆ ಕಡಿಮೆ ಆಗುತ್ತದೆ ಎನ್ನುವುದನ್ನು ಗಂಡ ತನ್ನ ತಲೆಯಿಂದ ತೆಗೆದು ಹಾಕಬೇಕು. ಕೆಲಸಕ್ಕೆ ಹೋಗುವುದು ಬಿಡುವುದು ಆಕೆಯ ವೈಯಕ್ತಿಕ ನಿರ್ಧಾರ. ಆದ್ದರಿಂದ ಗಂಡ ಅದವನು ಹೆಂಡತಿಗೆ ಬೆನ್ನೆಲುಬಾಗಿ ನಿಲ್ಲಬೇಕು.