ನಟ ರಾಘವೇಂದ್ರ ರಾಜ್ ಕುಮಾರ್ ಅವರು ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ದಂಪತಿಯ ಎರಡನೇ ಮಗ. ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರ ಮಕ್ಕಳು ಕೂಡ ಇಂದು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳಾಗಿ ಹೆಸರು ಮಾಡಿದ್ದಾರೆ. ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರ ಪತ್ನಿ ಯಾರು? ಅವರ ಹೆಸರಲ್ಲಿ ಎಷ್ಟು ಆಸ್ತಿ ಇದೆ? ಇವರ ಕುಟುಂಬ ಹೇಗಿದೆ ಗೊತ್ತಾ? ಇಂದು ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ..

ದೊಡ್ಮನೆಯ ಎಲ್ಲಾ ಮಕ್ಕಳು ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ಅವರಿಗೆ ಮದುವೆ ಮಾಡಲಾಗಿತ್ತು. ಶಿವಣ್ಣ, ರಾಘಣ್ಣ ಮತ್ತು ಅಪ್ಪು ಮೂವರಿಗೂ ಕೂಡ ಪಾರ್ವತಮ್ಮ ರಾಜ್ ಕುಮಾರ್ ಅವರು ಮತ್ತು ರಾಜ್ ಕುಮಾರ್ ಅವರು ಮದುವೆ ಮಾಡಿದ್ದರು. ಅದೇ ರೀತಿ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಕೂಡ ಸಿನಿಮಾಗೆ ಬರುವುದಕ್ಕಿಂತ ಮೊದಲೇ ಮದುವೆ ಮಾಡಲಾಯಿತು. ಇವರ ಪತ್ನಿಯ ಹೆಸರು ಮಂಗಳಾ. ಮೊದಲೆಲ್ಲಾ ಮಂಗಳ ಅವರು ಹೊರಗಡೆ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಈಗ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತಾರೆ. ಮಂಗಳಾ ಅವರನ್ನು ರಾಘವೇಂದ್ರ ರಾಜ್ ಕುಮಾರ್ ಅವರು ಪ್ರೀತಿಸಿ ಮದುವೆಯಾದರು. ಹೌದು, ಇದು ಹಲವರಿಗೆ ಗೊತ್ತಿಲ್ಲದ ವಿಷಯ ಆಗಿದೆ. ಆದರೆ ಮಂಗಳಾ ಅವರು ರಿಲೇಶನ್ ಆಗಿದ್ದರು, ಶಿವಣ್ಣ ಅವರ ಮದುವೆಯ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ಮೊದಲ ಸಾರಿ ಮಂಗಳಾ ಅವರನ್ನು ನೋಡಿದರು. ನೋಡಿದ ದಿನವೇ ಮದುವೆ ಎಂದು ಆದರೆ ಇದೆ ಹುಡುಗಿಯನ್ನ ಮದುವೆಯಾಗೋದು ಎಂದು ನಿರ್ಧಾರ ಮಾಡಿದ್ದರಂತೆ ರಾಘವೇಂದ್ರ ರಾಜ್ ಕುಮಾರ್.
ಮನೆಯಲ್ಲಿ ಮದುವೆ ವಿಚಾರ ಬಂದಾಗ, ಮಂಗಳಾ ಅವರ ಬಗ್ಗೆ ಹೇಳಿದರಂತೆ. ಆಗ ಡಾ. ರಾಜ್ ಕುಮಾರ್ ಅವರು ಮತ್ತು ಪಾರ್ವತಮ್ಮ ಅವರು ಮಂಗಳಾ ಅವರ ಮನೆಯವರ ಜೊತೆಗೆ ಮಾತನಾಡಿ, ಮದುವೆಗೆ ಒಪ್ಪಿಸಿ, ಇಬ್ಬರ ಮದುವೆ ಸುಸೂತ್ರವಾಗಿ ನಡೆಯಿತು. ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಂಗಳಾ ದಂಪತಿಗೆ ಇಬ್ಬರು ಮಕ್ಕಳು, ವಿನಯ್ ರಾಜ್ ಕುಮಾರ್ ಮತ್ತು ಯುವ ರಾಜ್ ಕುಮಾರ್. ಇವರಿಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರಿಗೂ ಒಳ್ಳೆಯ ಸಿನಿಮಾಗಳ ಅವಕಾಶ ಸಿಗುತ್ತಿದೆ.
ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರು ತಾಯಿ ಶುರು ಮಾಡಿದ ಪೂರ್ಣಿಮಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಧಾರಾವಾಹಿ ಮತ್ತು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಂಗಳಾ ಅವರು ಗಂಡನಿಗೆ ಸಪೋರ್ಟ್ ಆಗಿ ನಿಂತಿದ್ದಾರೆ. ಇಬ್ಬರು ಯುವ ಅವರಿಗೆ ಮದುವೆ ಮಾಡಿದರು, ಆದರೆ ಯುವ ಅವರಿಗೆ ವಿಚ್ಛೇದನ ಸಿಕ್ಕಿದೆ. ಇನ್ನು ವಿನಯ್ ರಾಜ್ ಕುಮಾರ್ ಅವರಿಗೆ ಮದುವೆ ಮಾಡಬೇಕಿದೆ. ಒಟ್ಟಿನಲ್ಲಿ ಶಿವಣ್ಣ ಅವರು ರಾಘಣ್ಣ ಅವರು ಮತ್ತು ಅಪ್ಪು ಅವರು ಈ ಮೂವರು ಕೂಡ ದೊಡ್ಮನೆಯ ದೀಪಗಳು ಎಂದರೆ ತಪ್ಪಲ್ಲ. ಮಂಗಳಾ ಅವರು ಎಲ್ಲಾ ಕೆಲಸಗಳಲ್ಲಿ ರಾಘಣ್ಣ ಅವರಿಗೆ ಸಹಾಯವಾಗಿದ್ದು, ರಾಘಣ್ಣ ಅವರ ಆರೋಗ್ಯಕ್ಕೆ ಸಮಸ್ಯೆ ಬಂದಾಗ, ಮಂಗಳಾ ಅವರು ಮಗುವಿನ ಹಾಗೆ ರಾಘಣ್ಣ ಅವರನ್ನು ನೋಡಿಕೊಂಡಿದ್ದಾರೆ. ಮುಂದೆ ಕೂಡ ಇವರಿಬ್ಬರು ಇದೇ ರೀತಿ ಇರಲಿ..