ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಮೋಹಕ ತಾರೆ ರಮ್ಯಾ ನವೆಂಬರ್ 29ರಂದು 40ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಶುಭಾಶುಗಳು ಹರಿದು ಬರುತ್ತಿದೆ. ಕಳೆದ ಒಂದೆರಡು ವರ್ಷಗಳಿಂದ ರಮ್ಯಾ ಸೋಷಿಯಲ್ ಮೀಡಿಯಾ ಮತ್ತು ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಪ್ರತಿ ವರ್ಷ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವ ರಮ್ಯಾ ಈ ವರ್ಷವೂ ವಿದೇಶ ಪ್ರಯಾಣ ಮಾಡಿದ್ದಾರೆ. ಜಪಾನ್ನಲ್ಲಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಸ್ಟಾರ್ ಸೆಲೆಬ್ರಿಟಿಗಳು ಬ್ರೇಕ್ಗಾಗಿ ವಿದೇಶಿ ಪ್ರಯಾಣವನ್ನು ಮಾಡುತ್ತಾರೆ.

ನಟಿ ರಮ್ಯಾ ಕೂಡ ವಿದೇಶಿ ಪ್ರಯಾಣವನ್ನು ಬೆಳೆಸಿದ್ದು, ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಜಪಾನಿಗೆ ತೆರಳಿದ್ದಾರೆ. ರಮ್ಯಾ ಜಪಾನ್ ಹೇಗಿದೆ ಎನ್ನುವ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ರಮ್ಯಾ ‘ನಿಮ್ಮಲ್ಲರ ಪ್ರೀತಿ ಶುಭಾಶುಗಳಿಗೆ ತುಂಬು ಹೃದಯದ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಹುಟ್ಟುಹಬ್ಬದ ಸಲುವಾಗಿ ನಟಿ ರಮ್ಯಾ ಅವರು ಫ್ಲೋಟಿಂಗ್ ಫ್ಲವರ್ ಗಾರ್ಡನ್ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೂವುಗಳ ನಡುವೆ ಕುಳಿತು ಅವರು ಪೋಸ್ ನೀಡಿದ್ದಾರೆ.
ನವೆಂಬರ್ 29, 1982ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರ ತಂದೆ- ತಾಯಿ ಮೂಲತಃ ಮಂಡ್ಯದವರು. ಇವರ ಹುಟ್ಟು ಹೆಸರು ದಿವ್ಯ ಸ್ಪಂದನಾ. ರಮ್ಯಾ 2003ರಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ “ಅಭಿ” ಸಿನಿಮಾದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳ ಮನಗೆದಿದ್ದಾರೆ. ನಂತರ ಎಕ್ಸ್ಕ್ಯೂಸ್ ಮಿ ಸಿನಿಮಾದಲ್ಲಿ ನಟಿಸಿದರು. ನಂತರದ ದಿನಗಳಲ್ಲಿ ತೆಲುಗು ತಮಿಳು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುದೀಪ್, ದರ್ಶನ, ಯಶ್, ಉಪೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.
ಅವರು ನಟಿಸಿದ “ತನನಂ ತನನಂ” ಮತ್ತು “ಸಂಜು ವೆಡ್ಸ್ ಗೀತಾ” ಸಿನಿಮಾಗಳಿಗೆ ಬೆಸ್ಟ್ ನಾಯಕಿಯಾಗಿ ಫಿಲಂಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಂತರ ದಿನಗಳಲ್ಲಿ ರಮ್ಯಾ ರಾಜಕೀಯದಲ್ಲಿ ಬ್ಯುಸಿ ಆಗಿದ್ದರು. ಆಮೇಲೆ ರಾಜಕೀಯ ಜೀವನವನ್ನು ತೊರೆದಿದ್ದಾರೆ. ಹಲವು ವರ್ಷಗಳ ನಂತರ ಮತ್ತೆ ಅವರಿಗೆ ಸಿನಿಮಾರಂಗದಲ್ಲಿ ಆಸಕ್ತಿ ಬೆಳೆಯಿತು. ಇತ್ತೀಚೆಗಷ್ಟೇ “ಆಪಲ್ ಬಾಕ್ಸ್ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಸಿನಿರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಮ್ಯಾ “ಉತ್ತರಕಾಂಡ” ಸಿನಿಮಾದ ಮೂಲಕ ನಟನೆಗೆ ಮರಳಿದ್ದಾರೆ.