ಇಂದು ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯೇ 8ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಇಂದು ಬೆಳಗ್ಗೆ ಇಂದಲೇ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ಜೋಡಿಯ ಬಗ್ಗೆ ಪೋಸ್ಟ್ ಮಾಡಿ ಸಂತೋಷ ಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಮುದ್ದಾದ ಜೋಡಿಗೆ ಸಾಕಷ್ಟು ವಿಶಸ್ ಗಳು ಸಹ ಕೇಳಿಬರುತ್ತಿದೆ. ಇದ್ದರೆ ಈ ಜೋಡಿಯ ಹಾಗಿರಬೇಕು, ಇವರ ಹಾಗೆ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಹಲವರ ಆಸೆ. ಇವರಿಬ್ಬರು ಅಷ್ಟು ಸಮಯ ಜೊತೆಗಿದ್ದು, ಕಷ್ಟ ಸುಖ ಎಲ್ಲವನ್ನು ಜೊತೆಯಾಗಿ ಕಳೆದಿದ್ದಾರೆ. ಹೀಗಿರುವಾಗ ಯಶ್ ಅವರು ರಾಧಿಕಾ ಪಂಡಿತ್ ಅವರಿಗೆ ಕೊಟ್ಟಿದ್ದ ಮೊದಲ ಗಿಫ್ಟ್ ಏನು ಗೊತ್ತಾ? ಈ ಬಗ್ಗೆ ಅನೇಕರಿಗೆ ಕುತೂಹಲ ಇದೆ.

ಹೌದು, ಸ್ನೇಹಿತರು, ಲವರ್, ಕಪಲ್ಸ್ ಇವರೆಲ್ಲರು ಸಹ ತಾವು ಪ್ರೀತಿ ಮಾಡುವ ವ್ಯಕ್ತಿಗೆ ಒಂದು ಸುಂದರವಾದ ಗಿಫ್ಟ್ ಕೊಡಬೇಕು ಎಂದು ಬಯಸುತ್ತಾರೆ. ಹಲವು ಸಾರಿ ಇದನ್ನು ಮಾಡಿ, ಅವರನ್ನು ಇಂಪ್ರೆಸ್ ಮಾಡುತ್ತಾರೆ. ಅದರಲ್ಲೂ ನಾವು ಕೊಡುವ ಗಿಫ್ಟ್ ಮೆಮೊರೆಬಲ್ ಆಗಿ ಉಳಿಯುತ್ತದೆ. ಇಂಥ ಗಿಫ್ಟ್ ಒಂದು ಯಶ್ ಅವರು ರಾಧಿಕಾ ಅವರಿಗೆ ನೀಡಿದ್ದರು, ಆ ಗಿಫ್ಟ್ ಏನು ಎಂದು ತಿಳಿದರೆ, ನೀವು ಕೂಡ ಶಾಕ್ ಆಗುತ್ತೀರಿ. ಆ ಗಿಫ್ಟ್ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಯಶ್ ಅವರು ರಿವೀಲ್ ಮಾಡಿದ್ದರು. ಅಷ್ಟಕ್ಕೂ ಆ ವಿಶೇಷವಾದ ಗಿಫ್ಟ್ ಏನಿರಬಹುದು ಎಂದು ನೋಡುವುದಾದರೆ, ನಟ ಯಶ್ ಅವರು ಕೊತ್ತಂಬರಿ ಸೊಪ್ಪಿನ ಬೊಕ್ಕೆಯನ್ನು ರಾಧಿಕಾ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ಇದೊಂದು ರೀತಿ ತಮಾಷೆ ಅನ್ನಿಸಿದರೂ, ಕ್ಯೂಟ್ ಆದ ಸಂಗತಿ ಆಗಿದೆ. ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ದಿನ ಯಶ್ ಅವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದರಂತೆ,ವಿಶ್ ಮಾಡಲು ರಾಧಿಕಾ ಅವರ ಮನೆಗೆ ಹೋಗೋವಾಗ ತುಂಬಾ ಲೇಟ್ ಆಗಿದ್ದ ಕಾರಣ ಬೇರೆ ಯಾವುದೇ ಗಿಫ್ಟ್ ತೆಗೆದುಕೊಂಡು ಹೋಗಲು ಸಾಧ್ಯ ಆಗಲಿಲ್ಲವಂತೆ. ಆಗ ಯಶ್ ಅವರು ಹತ್ತಿರದಲ್ಲಿದ್ದ ಒಂದು ಅಂಗಡಿ ಇಂದ ಕೊತ್ತಂಬರಿ ಸೊಪ್ಪನ್ನು ಖರೀದಿ ಮಾಡಿ, ಅದನ್ನು ಬೊಕ್ಕೆಯ ರೀತಿಯಲ್ಲಿ ತೆಗೆದುಕೊಂಡು ಹೋಗಿ, ಗಿಫ್ಟ್ ಮಾಡಿ, ವಿಶ್ ಮಾಡಿದ್ದರಂತೆ. ಈ ಘಟನೆಯನ್ನ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದರು.

ಅದು ನಿಜವು ಹೌದು, ಒಬ್ಬ ವ್ಯಕ್ತಿಯನ್ನ ನಾವು ಇಷ್ಟಪಡುವಾಗ, ಅವರು ನಮಗೆ ಎಷ್ಟು ದುಬಾರಿ ಗಿಫ್ಟ್ ಕೊಡುತ್ತಾರೆ ಅನ್ನೋದಕ್ಕಿಂತ ಎಷ್ಟು ಪ್ರೀತಿಯಿಂದ ಕೊಡುತ್ತಾರೆ ಅನ್ನೋದು ಮುಖ್ಯ. ಒಂದು ಸಣ್ಣ ವಸ್ತುವನ್ನೇ ತಂದುಕೊಟ್ಟರೂ ಅದರಲ್ಲಿ ಪ್ರೀತಿ ತುಂಬಿದ್ದರೆ, ಅದರಿಂದ ಆಗುವ ಸಂತೋಷವೇ ಬೇರೆ. ಅದೇ ರೀತಿ ಈ ಜೋಡಿ, ಆಗಿನಿಂದ ಈಗಿನವರೆಗು ಅಷ್ಟೇ ಪ್ರೀತಿ ಇಂದ, ಸಂತೋಷದಿಂದ ಇದ್ದಾರೆ. ಇಬ್ಬರು ಜೊತೆಯಾಗಿ ನಟನೆ ಶುರು ಮಾಡಿ, ಜೊತೆಯಾಗಿ ಬೆಳೆದು, ಜೊತೆಯಾಗಿ ಜೀವನವನ್ನು ಕಟ್ಟಿಕೊಂಡಿದ್ದಾರೆ. ಇಬ್ಬರು ಸ್ಯಾಂಡಲ್ ವುಡ್ ನ ಸ್ಟಾರ್ ಗಳಾಗಿ ಹೆಸರು ಮಾಡಿದ ಕಲಾವಿದರು, ಈಗಲೂ ಅಷ್ಟೇ ಬೇಡಿಕೆ ಹೊಂದಿದ್ದಾರೆ.
ರಾಧಿಕಾ ಅವರು ಮದುವೆಯಾದ ನಂತರ ನಟನೆ ಇಂದ ದೂರ ಹೋಗಿದ್ದರು ಸಹ, ಇವತ್ತಿಗೂ ಅವರ ಮೇಲೆ ಜನರಿಗೆ ಇರುವ ಪ್ರೀತಿ ಕಡಿಮೆ ಆಗಿಲ್ಲ. ಮಕ್ಕಳು ಚಿಕ್ಕವರು ಎನ್ನುವ ಕಾರಣಕ್ಕೆ ರಾಧಿಕಾ ಅವರು ಈಗ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಇನ್ನು ಯಶ್ ಅವರಿಗೆ ತುಂಬಾ ಸಪೋರ್ಟಿವ್ ಆಗಿದ್ದಾರೆ. ಕೆಜಿಎಫ್, ಕೆಜಿಎಫ್2 ಗಾಗಿ ಯಶ್ ಅವರು 5 ವರ್ಷ ಮೀಸಲಾಗಿ ಇಟ್ಟರು, ಇದೆಲ್ಲದಕ್ಕೂ ರಾಧಿಕಾ ಅವರು ಸಪೋರ್ಟ್ ಮಾಡಿಕೊಂಡೆ ಬಂದಿದ್ದಾರೆ. ಯಶ್ ಅವರಲ್ಲಿ ಅವರ ಕೆಲಸದ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ. ಇಂಥ ಪಾರ್ಟ್ನರ್ ಲೈಫ್ ಅಲ್ಲಿ ಸಿಗಬೇಕು ಅಂದ್ರೆ ಪುಣ್ಯ ಮಾಡಿರಬೇಕು. ಈ ಜೋಡಿಗೆ ನೀವು ಮದುವೆ ವಾರ್ಷಿಕೋತ್ಸವಕ್ಕೆ ವಿಶ್ ಮಾಡಿ.