ಮಫ್ತಿ ಸಿನಿಮಾದಲ್ಲಿ ರಣಗಲ್ ಪಾತ್ರ ಯಾರಿಗೆ ತಾನೆ ಮರೆಯಲು ಸಾಧ್ಯ, ಈಗ ಅದೇ ಭೈರತಿ ರಣಗಲ್ ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾನೆ. ಶಿವರಾಜ್ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಇದೇ ಶುಕ್ರವಾರ (ನವೆಂಬರ್ 15) ತೆರೆಗೆ ಬರಲು ಸಜ್ಜಾಗಿದೆ. ಶಿವರಾಜ್ಕುಮಾರ್ 62ನೇ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಯಿದ್ದು ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೂಡ ತಿಳಿಸಿದ್ದಾರೆ. ಅಮೆರಿಕದಲ್ಲಿ ಆಪರೇಷನ್ ಆಗಬೇಕಿದ್ದು, ಜನವರಿಯಿಂದ ಫುಲ್ ಫಿಟ್ ಆಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ.

ಕೀರ್ತಿ ಇಎನ್ಟಿ ಕ್ಲಿನಿಕ್ ಎನ್ನುವ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಶಿವರಾಜ್ಕುಮಾರ್ ತಮ್ಮ ಎನರ್ಜಿ ಡ್ರಿಂಕ್ ಯಾವುದು ಎನ್ನುವ ಸೀಕ್ರೇಟ್ ಬಿಟ್ಟುಕೊಟ್ಟಿದ್ದಾರೆ. ನಟ ಶಿವರಾಜ್ಕುಮಾರ್ ಸಿಕ್ಕಾಪಟ್ಟೆ ಕುಡಿಯುತ್ತಾರೆ ಅದಕ್ಕೆ ಅವರಿಗೆ ಇಷ್ಟು ಎನರ್ಜಿ ಇರುತ್ತದೆ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆಂಕರ್ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರ ಕೊಟ್ಟ ಶಿವರಾಜ್ಕುಮಾರ್ ಹೌದು, ನಾನು ಸಿಕ್ಕಾಪಟ್ಟೆ ಕುಡಿಯುತ್ತೇನೆ ಎಂದಿದ್ದಾರೆ. ಸ್ವಲ್ಪ ಡಿಕಾಕ್ಷನ್ ಮತ್ತು ಹಾಲು ಸಿಕ್ಕರೆ ಸಾಕು ಎನ್ನುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ಕಾಫಿ ಎಂದರೆ ಸಿಕ್ಕಾಪಟ್ಟೆ ಇಷ್ಟ. ಯಾವಾಗಲೂ ಕಾಫಿ ಕುಡಿಯುತ್ತಿರುತ್ತೇನೆ ಅದಕ್ಕೆ ಎನರ್ಜಿಯಿಂದ ಇರುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ