ಇತ್ತೀಚಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಜನರಿಗೆ ಮನರಂಜನೆಯ ಜೊತೆ ದೈನಂದಿನ ಅಪ್ಡೇಟ್ ಗಳನ್ನು ತಿಳಿಯಲು ಕೂಡಾ ಸಹಾಯಕವಾಗಿದೆ. ಈಗ ಜನರು ಹೆಚ್ಚಾಗಿ ಮಾಹಿತಿಗಳನ್ನು ಬೆರಳ ತುದಿಯಲ್ಲೇ ತಿಳಿದುಕೊಳ್ಳಲು ಇಚ್ಛೆ ಪಡುತ್ತಾರೆ. ಇದೀಗ ಮೇಟಾ ಜನರಿಗೆ ಮಾಹಿತಿ ನೀಡುವ ಸಲುವಾಗಿ ಹೊಸ ಆಪ್ ಒಂದನ್ನು ಪ್ರಾರಂಭಿಸಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ತ್ರೆಡ್ಸ್ ಅನ್ನುವ ಆಪ್ ಪ್ರಾರಂಭವಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಡೌನ್ಲೋಡ್ ಮಾಡಲು ತ್ರೆಡ್ಸ್ ಲಭ್ಯವಿದೆ. ಈ ಆಪ್ ಟ್ವಿಟ್ಟರ್ ಗೆ ಭಾರೀ ಟಕ್ಕರ್ ನೀಡುತ್ತಿದೆ.

“ಟ್ವಿಟ್ಟರ್ ಕಿಲ್ಲರ್ ” ಎಂದು ಹೆಸರಿಸಲಾದ ಈ ಆಪ್ ಬಿಡುಗಡೆಯಾದ 7ಗಂಟೆಗಳಲ್ಲಿ 10ಮಿಲಿಯನ್ ಗೂ ಹೆಚ್ಚು ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್ ನ್ನು ಮೇಟಾ ಕಂಪನಿಯ ಸಿಇಒ ಮಾರ್ಕ್ ಝಕರ್ ಬರ್ಗ್ ಪ್ರಾರಂಭಿಸಿದ್ದಾರೆ. ಜನರಿಗೆ ಮಾಹಿತಿ ನೀಡಲು ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವ ಉದ್ದೇಶವನ್ನು ಇಟ್ಟುಕೊಂಡು ಇನ್ಸ್ಟಾಗ್ರಾಮ್ ತಂಡ ತ್ರೆಡ್ಸ್ ಅನ್ನುವ ಆಪ್ ನ್ನು ಪ್ರಾರಂಭಿಸಿದೆ ಎಂದು ಮೇಟಾ ತನ್ನ ಬ್ಲಾಗ್ ಅಕೌಂಟ್ ನಲ್ಲಿ ಪ್ರಕಟ ಮಾಡಿದೆ.
ತ್ರೆಡ್ಸ್ ನ ವಿಶೇಷತೆ ಏನೆಂದರೆ ಇನ್ಸ್ಟಾಗ್ರಾಮ್ ಅಕೌಂಟ್ ನ್ನು ಬಳಸಿಕೊಂಡು ಸಹ ಈ ಆಪ್ ಗೆ ಲಾಗಿನ್ ಆಗಬಹುದು ಹಾಗೂ ಇದರಲ್ಲಿ ವಿಷಯಗಳು 500 ಅಕ್ಷರಗಳಿಗಷ್ಟೇ ಸೀಮಿತವಾಗಿರುತ್ತದೆ. ಇದರ ಜೊತೆ 5 ನಿಮಿಷದ ವಿಡಿಯೋ ಹಾಗೂ ಫೋಟೋ ಗಳನ್ನು ಕೂಡಾ ಅಪ್ಲೋಡ್ ಮಾಡಬಹುದು. “ಹೆಚ್ಚಿನ ಸಾಮಾಜಿಕ ಅಪ್ಲಿಕೇಶನ್ ಗಳಲ್ಲಿ ಈಗ ಸಾಧ್ಯವಾಗದ ಕೆಲವು ಹೊಸ ಕೆಲಸಗಳಿಗೆ ತ್ರೆಡ್ಸ್ ಅವಕಾಶ ಕಲ್ಪಿಸುತ್ತದೆ ” ಎಂದು ಮೇಟಾ ತಿಳಿಸಿದೆ.
ಈ ಹೊಸ ಆಪ್ ಕೂಡಾ ಇನ್ಸ್ಟಾಗ್ರಾಮ್ ನಂತೆ ಜನಪ್ರಿಯಗೊಳ್ಳಬಹುದು. ಇನ್ಸ್ಟಾಗ್ರಾಮ್ ನಂತೆ ತ್ರೆಡ್ಸ್ ನಲ್ಲಿ ಸಹ ಜನರು ಇನ್ನೊಬ್ಬರನ್ನು ಫಾಲೋ ಮಾಡಬಹುದು. ತಮ್ನ ವಿಚಾರಧಾರೆಯನ್ನು ಮಂಡಿಸಲು ಹಾಗೂ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಇದು ಸಹಾಯಕವಾಗಿದೆ. ತ್ರೆಡ್ಸ್ ನಲ್ಲಿ ಮೆಂಷನ್ ಮಾಡಬಹುದು ಹಾಗೂ ರಿಪ್ಲೈ ಕೂಡಾ ಕೊಡಬಹುದು, ಇದು ಬೇಡ ಎಂದಿದ್ದಲ್ಲಿ ನಿಯಂತ್ರಿಸುವ ಅವಕಾಶವೂ ಇರುತ್ತದೆ. ಇನ್ಸ್ಟಾಗ್ರಾಮ್ ನಂತೆ ಪ್ರೈವಸಿ ಕಾಯ್ದುಕೊಳ್ಳಲು ಇದು ಸಹಾಯಕವಾಗಿದೆ.
ಒಟ್ಟಾರೆಯಾಗಿ ಇದೊಂದು ಮಾಹಿತಿದಾಯಯ ಆಪ್ ಆಗಲಿದೆ ಎಂದು ಬಳಕೆದಾರರು ಮಾತನಾಡಿಕೊಳ್ಳುತ್ತಿದ್ದಾರೆ.