Tiger Video: ಇದು ತುಂಬಾ ಹಳೆಯ ವಿಡಿಯೋ. ಆದರೂ ಇತ್ತೀಚಿನ ದಿನಗಳಲ್ಲಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಲಿಗೆ ಸಂಬಂಧಿಸಿದ ಈ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಹುಲಿ ಇರುವ ಆವರಣವನ್ನು ಪ್ರವೇಶಿಸಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇಬ್ಬರೂ ಹುಲಿಯ ಹತ್ತಿರ ಪೋಸ್ ಕೊಡುತ್ತಿದ್ದರು, ಹುಲಿಯ ಹತ್ತಿರ ಬಂದ ತಕ್ಷಣ ಅದರ ಜೊತೆ ಫೋಟೋ ತೆಗೆದುಕೊಳ್ಳಲು ಶುರು ಮಾಡಿದರು. ಈ ವೇಳೆ ಇಬ್ಬರಲ್ಲೂ ಆತ್ಮವಿಶ್ವಾಸ ಇತ್ತು. ಆದರೆ ಹುಲಿಯ ಹತ್ತಿರ ಕೂತು ತಪ್ಪು ಮಾಡಿದರು. ಆದರೆ ಶೀಘ್ರದಲ್ಲೇ ಹುಲಿಯ ಈ ಸಾಮೀಪ್ಯ ಯಾಕಾದರೂ ಕೂತೇವೋ ಎಂಬಂತೆ ಇಬ್ಬರ ಸ್ಥಿತಿಯೂ ಕಷ್ಟವಾಗಿತ್ತು. ಯಾಕಂತೀರಾ?, ಮುಂದೆ ಓದಿ…
His life flashed 😂pic.twitter.com/gxqlI4wqRg
— Amazing Video (@amazingvideo01) July 6, 2024
ವಾತಾವರಣವನ್ನೇ ಬದಲಾಯಿಸಿತು ಹುಲಿಯ ಘರ್ಜನೆ
ವಿಡಿಯೋದಲ್ಲಿ ನೋಡುವ ಹಾಗೆ ಇಬ್ಬರು ವ್ಯಕ್ತಿಗಳು ಹುಲಿಯ ಬಳಿ ಫೋಟೋ ತೆಗೆದುಕೊಳ್ಳುವಾಗ ಅದು ತಕ್ಷಣ ಕೋಪಗೊಂಡು ಜೋರಾಗಿ ಘರ್ಜಿಸುವುದನ್ನು ಕಾಣಬಹುದು. ಹುಲಿಯ ಘರ್ಜನೆ ಎಷ್ಟು ಜೋರಾಗಿತ್ತು ಎಂದರೆ ಈ ಜನರು ಸಂಪೂರ್ಣವಾಗಿ ಭಯಭೀತರಾಗಿದ್ದರು. ಹುಲಿಯ ಘರ್ಜನೆ ಅಲ್ಲಿನ ವಾತಾವರಣವನ್ನೇ ಸಂಪೂರ್ಣವಾಗಿ ಬದಲಾಯಿಸಿತು. ಥಟ್ಟನೆ ಇಬ್ಬರಿಗೂ ತಾವು ಮಾಡಿದ್ದು ದೊಡ್ಡ ತಪ್ಪು ಎಂದು ಅರ್ಥವಾಯಿತು. ಹುಲಿಯ ಸಾಮೀಪ್ಯದಲ್ಲಿದ್ದ ಕಾರಣ, ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅವರು ಭಾವಿಸಿದರು. ಹಾಗಾಗಿ ಇಬ್ಬರೂ ಹುಲಿಯಿದ್ದ ಜಾಗದಿಂದ ಎದ್ದೇವೋ, ಬಿದ್ದೇವೋ ಎಂಬಂತೆ ಓಡಿಹೋದರು.
ದೇವರಿಗೆ ಧನ್ಯವಾದ ತಿಳಿಸಿದ ವ್ಯಕ್ತಿ
ಆ ನಂತರ ಹುಲಿಯ ಘರ್ಜನೆ ಕಂಡು ಇಬ್ಬರೂ ಪ್ರಾಣಭೀತರಾಗಿ ಆವರಣದಿಂದ ಹೊರಗೆ ಓಡಲು ಪ್ರಯತ್ನಿಸಿದರು. ಹೇಗೋ ಇಬ್ಬರೂ ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾದರು. ಈ ಘಟನೆಯ ನಂತರ, ಅವರು ಯಾವುದೇ ಅಪಾಯವಾಗದಂತೆ ಬದುಕಿದ್ದಕ್ಕಾಗಿ ದೇವರಿಗೆ ಧನ್ಯವಾದ ಅರ್ಪಿಸಿದರು. ಕಾಡುಪ್ರಾಣಿಗಳ ಬಳಿ ಹೋಗಿ ಅದರೊಂದಿಗೆ ಛಾಯಾಚಿತ್ರ ತೆಗೆಯುವ ಅಪಾಯವನ್ನು ಎಂದಿಗೂ ತೆಗೆದುಕೊಳ್ಳಬಾರದು ಎಂಬ ಮಹತ್ವದ ಸಂದೇಶವನ್ನು ಈ ಘಟನೆ ನೀಡುತ್ತದೆ. ಏಕೆಂದರೆ ಹೀಗೆ ಮಾಡುವುದು ಅಪಾಯಕಾರಿ ಮಾತ್ರವಲ್ಲ, ಜೀವಕ್ಕೆ ಅಪಾಯವೂ ಆಗಬಹುದು. ಈ ವಿಡಿಯೋವನ್ನು @amazingvideo01 ಹೆಸರಿನಲ್ಲಿ X ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ.