ಅದಿತಿ ಪ್ರಭುದೇವ ಅವರ ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಗಣ್ಯಾತಿ ಗಣ್ಯರು ಆಗಮಿಸಿದ್ದರು ಎಂಬುದಾಗಿ ತಿಳಿದು ಬಂದಿದ್ದು ಅದಿತಿ ಪ್ರಭುದೇವ ಅವರ ಮದುವೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಆಗಮಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರ ಜೊತೆಗೆ ಆಗಮಿಸಿ ಅದಿತಿ ಪ್ರಭುದೇವ ಹಾಗೂ ಯಶಸ್ ಅವರಿಗೆ ಶುಭ ಹಾರೈಸಿದ್ದಾರೆ. ಈ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಿ ರಾಧಿಕಾ ನೀಲಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ಯಾಕಿಂಗ್ ಸ್ಟಾರ್ ಬ್ಲ್ಯಾಕ್ ಶರ್ಟ್ನಲ್ಲಿ ಕಂಗೊಳಿಸಿದ್ದರು. ಯಶ್ ಮತ್ತು ರಾಧಿಕಾ ಎಂಟ್ರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅದಿತಿ ಪ್ರಭುದೇವ ಅವರ ಮದುವೆಗೆ ಹೋದ ಯಶ್ ಮತ್ತು ರಾಧಿಕಾ ಅವರು ಕೂಡ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ.. ರಾಧಿಕಾ ಮತ್ತು ಯಶ್.. ಅದಿತಿ ಮತ್ತು ಅವರ ಗಂಡ ಇಬ್ಬರಿಗೂ ಒಂದೊಂದು ಚಿನ್ನದ ಹಾರವನ್ನು ಗಿಫ್ಟಾಗಿ ನೀಡಿದ್ದಾರೆ ಇದರ ಬೆಲೆ ಸುಮಾರು ಐದರಿಂದ ಆರು ಲಕ್ಷ ರೂಪಾಯಿಗಳು ಆಗಿವೆ.. ಒಂದೊಂದು ಚಿನ್ನದ ಸರಕ್ಕೆ 3 ಲಕ್ಷ 2 ರೂಪಾಯಿಗಳನ್ನು ಖರ್ಚು ಮಾಡಿ ಖರೀದಿ ಮಾಡಿ ಯಶ್ ಮತ್ತು ರಾಧಿಕಾ ಗಿಫ್ಟ್ ನೀಡಿದ್ದಾರೆ.
ಯಶ್ ಮತ್ತು ರಾಧಿಕಾ ಕೊಟ್ಟ ದುಬಾರಿ ಗಿಫ್ಟ್ ಅನ್ನು ನೋಡಿ ಅದಿತಿ ಪ್ರಭುದೇವ ಅವರು ಫುಲ್ ಖುಷಿಯಾಗಿ ರಾಧಿಕಾ ಪಂಡಿತ್ ಅವರ ಕೆನ್ನೆಗೆ ಮುತ್ತು ನೀಡಿದ್ದಾರೆ ಈ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿನಿಮಾ ಗಣ್ಯರ ಜೊತೆಗೆ ಅನೇಕ ರಾಜಕೀಯ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿ ಅದಿತಿ ಮತ್ತು ಯಶಸ್ವಿ ಜೋಡಿಗೆ ಶುಭಹಾರೈಸಿದರು.