“ಡಿ ಬಾಸ್” ಈ ಹೆಸರಿಗೆ ಯಾವ ಪರಿಚಯ ಬೇಡ ಎಂದು ನಿಮಗೆ ತಿಳಿದಿದೆ.ಇನ್ನು ಈ ಹೆಸರಿಗೆ ನಮ್ಮ ಸ್ಯಾಂಡಲ್ವುಡ್ ನಲ್ಲಿ ಭಾರಿ ತೂಕವಿದೆ.ಇನ್ನು ಈ ನಟ ಸಾಕಷ್ಟು ಹಿಟ್ ಚಿತ್ರಗಳನ್ನು ನಮ್ಮ ಸ್ಯಾಂಡಲ್ವುಡ್ ಗೆ ನೀಡಿದ್ದಾರೆ.ಈ ನಟ ಬಣ್ಣದ ಲೋಕದಲ್ಲಿ ಪ್ರವೇಶ ಪಡೆದಿದ್ದು ‘ಲೈಟ್ ಬಾಯ್’ ಆಗಿ.ಇನ್ನು ಈ ನಟ ಒಬ್ಬ ಹೆಸರಾಂತ ಹಿರಿಯ ಕಲವಿಧಾನ ಮಗನಾಗಿದ್ದರು ಕೂಡ ಈತನ ಹಾದಿ ಅಷ್ಟು ಸುಲಭವಾಗಿರಲಿಲ್ಲ.ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಇಂದು ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಈ ನಟನ ಸಿನಿಮಾ ನಮ್ಮ ಗಾಂಧಿ ನಗರದಲ್ಲಿ ತಲೆಯೆತ್ತುತಿದೆ ಎಂದರೆ ಎಲ್ಲರಲ್ಲೂ ಖಚಿತವಾಗಿತ್ತು ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತದೆ ಎಂದು. ಹಾಗಾಗಿ ಈ ನಟನನ್ನು ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಯಲ್ಪಡುತ್ತಾರೆ.

ನಮ್ಮ ‘ಚಾಲೆಂಜಿಂಗ್ ಸ್ಟಾರ್’ ಸಿನಿಮಾಗಳ ಮುಕಾಂತರ ಅಲ್ಲದೆ ಅವರ ನೇರ ನುಡಿ ಹಾಗೂ ಕಾರವಾದ ಮಾತಿನಿಂದ ಕೂಡ ಗಾಂಧಿ ನಗರದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದಾರೆ.ಇವರ ಮಾತು ಹೇಗಿರುತ್ತದೆ ಎಂದರೆ ಎದುರಾಳಿ ಯಾರೇ ಆಗಿದ್ದರು ಕೂಡ ಎಷ್ಟೇ ಬಲಶಾಲಿ ಯಾಗಿದ್ದರು ಕೂಡ ತಮಗೆ ಅನ್ನಿಸಿದ್ದನ್ನು ಯಾವ ಪಿಲ್ಟರ್ ಇಲ್ಲದೆ ಹಾಗೆ ಹೇಳುವಂತವರು. ಇನ್ನು ಇದೇ ಕಾರಣಕ್ಕೇ ದರ್ಶನ್ ಅವವರನ್ನು ನ್ಯೂಸ್ ಚಾನಲ್ ಗಳಿಂದ ಬ್ಯಾನ್ ಮಾಡಲಾಗಿತ್ತು.ಹಾಗಾಗಿ ಅವರ ಮುಂದಿನ ಚಿತ್ರವಾದ ಕ್ರಾಂತಿ ಸಿನಿಮಾ ಗೆ ಯಾವ ಪ್ರಚಾರ ಸಿಗುತ್ತಿರಲಿಲ್ಲ.
ಆದರೆ ಯಾವ ಬೆಂಬಲ ಇಲ್ಲದೆ ಅವರ ಸಿನಿಮಾ ಇಷ್ಟು ಸದ್ದು ಮಾಡುತ್ತಿತ್ತುವುದು ನೋಡಿ ಎಲ್ಲರು ಇವರ ಸಿನಿಮಾ ಗಳನ್ನು ಪ್ರೋತ್ಸಾಹ ನೀಡಲು ಆರಂಭಿಸಿದ್ದಾರೆ.ಇದೀಗ ಎಲ್ಲೆಲ್ಲೂ “ಕ್ರಾಂತಿ” ಸಿನಿಮಾ ಸುದ್ದಿ ಹೆಚ್ಚಾಗಿದೆ.ದರ್ಶನ್ ಅವರು ಕೂಡ ಸಾಕಷ್ಟು ಇಂಟರ್ವ್ಯೂ ನಲ್ಲಿ ತೊಡಗಿಸಿಕೊಂಡಿದ್ದಾರೆ.ಇದೀಗ ಮತೊಮ್ಮೆ ವಿವಾದಗಳಿಗೆ ಸಿಲುಕಿದ್ದರು. ಕ್ರಾಂತಿ ಸಿನಿಮಾ ಪ್ರಚಾರಕ್ಕಾಗಿ ದರ್ಶನ್ ಸಂದರ್ಶನಗಳಿಗೆ ತೆರಳುತ್ತಿದ್ದಾರೆ.ಆ ವೇಳೆ ಗೆಲುವಿನ ದೇವತೆ ಬಗ್ಗೆ ಮಾತನಾಡಿದ ಆ ಮಾತುಗಳು ಎಲ್ಲರ ಕೋಪಕ್ಕೆ ಕಾರಣವಾಗಿತ್ತು.
ಈಗ ಅದ್ರ ಬೆನ್ನಲ್ಲೇ ಮತ್ತೊಂದು ಅಚಾತುರ್ಯದ ಘಟನೆ ನಡೆದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ನಿನ್ನೆಯಷ್ಟೇ ದರ್ಶನ್ ಹಾಗೂ ರಚಿತಾ ರಾಮ್ ಅವರು ತಮ್ಮ ಸಿನಿಮಾ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೊಸಪೇಟೆ ಗೆ ತೆರಳಿದ್ದರು.ಆ ವೇಳೆ ದರ್ಶನ್ ಮಾತನಾಡಿದ ನಂತರ ಇನ್ನೇನು ರಚಿತಾ ಮಾತನಾಡಬೇಕು ಆ ವೇಳೆ ದರ್ಶನ್ ಮೇಲೇ ಯಾರೋ ಒಬ್ಬೊ ಕಿಡುಗೆಡಿ ಚಪ್ಪಲಿ ಹೊಡೆದಿದ್ದಾನೆ. ಇನ್ನು ಈ ವೇಳೆ ದರ್ಶನ್ ಅವರು ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಹೊಸಪೇಟೆಯ ದರ್ಶನ್ ಅಭಿಮಾನಿಗಳು ದರ್ಶನ್ ಅವರ ದೊಡ್ಡ ಮಟ್ಟದ ಕಟ್ ಔಟ್ ನಿಲ್ಲಿಸಲಾಗಿತ್ತು.
ಆ ವೇಳೆ ಪುನೀತ್ ಅವರ ಅಭಿಮಾನಿಗಳು ಅಪ್ಪು ಅವರ ಕಟ್ ಔಟ್ ನಿಲ್ಲಿಸಲಾಗಿತ್ತು.ಆದರೂ ಕೂಡ ಬಹಳ ಖುಷಿಯಿಂದಲೇ ದರ್ಶನ್ ವೇದಿಕೆ ಹತ್ತಿದ್ದರು.ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತ ತಮ್ಮ ಸಿನಿಮಾಗೆ ಮೊದಲಿನಂತೆ ಪ್ರೀತಿ ಕೊಡಲು ಮನವಿ ಮಾಡಿಕೊಂಡು ಇನ್ನೇನು ಮೈಕ್ ಆ ಚಿತ್ರದ ನಟಿಗೆ ಮೈಕ್ ಹಸ್ತಾಂತರ ಮಾಡುವ ಸಂಧರ್ಭದಲ್ಲಿ ಯಾರೋ ಕಿಡುಗೆಡಿ ಚಪ್ಪಲಿ ಎಸೆದಿದ್ದಾನೆ. ಆ ವೇಳೆ ಎಲ್ಲರೂ ಕೂಡ ಆಕ್ರೋಶಕ್ಕೆ ಒಳಗಾಗುತ್ತಾರೆ ಆದರೆ ದರ್ಶನ್ ಅವರು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ.
ಅಂದ್ಹಾಗೆ ದರ್ಶನ್ ಅಭಿಮಾನಿಗಳಿಗೆ ‘ತಪ್ಪೇನಿಲ್ಲ ಚಿನ್ನ ಪರ್ವಾಗಿಲ್ಲ’ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ದೊಡ್ಡವರಾದ್ರಿ ಎಂದು ಹೇಳುತ್ತಿದ್ದಾರೆ.ಈಗ ದರ್ಶನ್ ಅವರಿಗೆ ಸಾಕಷ್ಟು ಮೆಚ್ಚುಗೆಯ ಮಾತುಗಳೊಂದಿಗೆ ‘ಚಪ್ಪಾಳೆ ತಟ್ಟುವ ಕೈಗೆ ಚಪ್ಪಲಿ ಬಂದಾಗ, ಮಲೀನವಾಗಿದ್ದು ಆ ಕೈಗಳೇ ಹೊರತು ಕಲಾವಿದನಲ್ಲ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ‘ಹೀಗೆ ನಾನಾ ರೀತಿ ಕಾಮೆಂಟ್ ಮಾಡುತ್ತ ದರ್ಶನ್ ಅವರ ಪರವಾಗಿ ನಿಂತು ಮಾತನಾಡುತ್ತಿದ್ದಾರೆ.