ಕೆಂಪೇಗೌಡ ಸಿನಿಮಾದ ನಂತರ ಸಂಪೂರ್ಣವಾಗಿ ಸಿನಿಮಾರಂಗದಿಂದಲೇ ದೂರ ಉಳಿದಿದ್ದ ಪ್ರತಿಭಾನ್ವಿತ ಹಾಸ್ಯ ನಟ ಕೋಮಲ್ ಅವರು ಇದೀಗ ಸರಿ ಸುಮಾರು 4-5 ವರ್ಷಗಳ ನಂತರ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ಕೋಮಲ್ ಯಾಕೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು ಎಂದು ಅವರ ಸಹೋದರ ಜಗ್ಗೇಶ್ ಹೇಳಿದ್ದಾರೆ. ಕೋಮಲ್ ಗೆ ಸಾಕಷ್ಟು ಬೇಡಿಕೆ ಇರುವಾಗಲೇ ಯಾಕೆ ಮನೆಯಲ್ಲಿ ಕೂತಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಕೋಮಲ್ ಅವರಿಗೆ ಕೇತುದೆಸೆ ಇತ್ತಂತೆ. ಹಾಗಾಗಿ ಸಿನಿಮಾದಲ್ಲಿ ನಟಿಸಬೇಡ ಎಂದು ಸ್ವತಃ ಜಗ್ಗೇಶ್ ಅವರೇ ಹೇಳಿದ್ದರಂತೆ. ಸಹೋದರನ ಮಾತಿಗೆ ಒಪ್ಪಿಗೆ ಸೂಚಿಸಿ ಸಿನಿಮಾ ಮಾಡಲಿಲ್ಲವಂತೆ ಕೋಮಲ್. ಈ ಮಾಹಿತಿಯನ್ನು ಜಗ್ಗೇಶ್ ಅವರೇ ಹಂಚಿಕೊಂಡಿದ್ದಾರೆ.

‘ಕೋಮಲ್ ಗೆ ಕೇತುದೆಸೆ ಇತ್ತು. ಈ ವೇಳೆಯಲ್ಲಿ ಏನೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಕಾಣುವುದಿಲ್ಲೆ ಎನ್ನುವುದು ಗೊತ್ತಿತ್ತು. ಹಾಗಾಗಿ ನಾನೇ ಸಿನಿಮಾ ಮಾಡಬೇಡ ಅಂತ ಕೋಮಲ್ ಗೆ ಹೇಳಿದ್ದೆ. ಇದೀಗ ಕೇತುದೆಸೆ ಕಳೆದಿದೆ. ಇನ್ಮುಂದೆ ಕೋಮಲ್ ಸಿನಿಮಾಗಳು ಹಿಟ್ ಆಗುತ್ತವೆ. ಸಿನಿಮಾ ರಂಗದಲ್ಲಿ ಮತ್ತೆ ಕೋಮಲ್ ಅಗಾಧವಾಗಿ ಬೆಳೆಯುತ್ತಾರೆ ಎಂದು ತಮ್ಮನ ಬಗ್ಗೆ ಜಗ್ಗೇಶ್ ಹೇಳಿದ್ದಾರೆ. 2020’ ಎಂಬ ಚಿತ್ರದ ಮೂಲಕ ಮತ್ತೆ ನಟನೆಗೆ ವಾಪಸ್ಸಾಗಿದ್ದಾರೆ.
ಈಗ ‘ಕಾಲಾಯ ನಮಃ’ ಎಂಬ ಚಿತ್ರದಲ್ಲಿ ಸದ್ಯದಲ್ಲೇ ನಟಿಸುತ್ತಿದ್ದಾರೆ. ಕೋಮಲ್ ನಟನೆಯ ನಮೋ ಭೂತಾತ್ಮ ಸಿನಿಮಾ ಭಾಗ 2 ಆಗಿ ಮೂಡಿ ಬರಲಿದೆಯಂತೆ. ಅಲ್ಲದೇ, ಕೋಮಲ್ ಗೆ ಸಿನಿಮಾ ಮಾಡಲು ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗುವುದರಲ್ಲಿ ಅನುಮಾನವಿಲ್ಲ ಅಂತಿದ್ದಾರೆ ಜಗ್ಗೇಶ್. ಇಂಥದ್ದೇ ಒಂದು ಸಮಸ್ಯೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೂ ಎದುರಾಗಿತ್ತಂತೆ. ‘ಈ ದೆಸೆ ಬಂದಾಗ ಅಮಿತಾಭ್ ಏಳು ವರ್ಷ ಮನೆಯಲ್ಲಿ ಇರಬೇಕಾಯಿತು.
ಏಳು ವರ್ಷಗಳ ನಂತರ ಅಮರ್ ಸಿಂಗ್, ಅಮಿತಾಭ್ ಅವರನ್ನು ಕರೆದುಕೊಂಡು ಹೋಗಿ ಅಮರನಾಥ ದರ್ಶನ ಮಾಡಿಸಿದರು. ಆ ನಂತರ ಅಮಿತಾಭ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಕೋಮಲ್ಗೂ ಅದೇ ಕೇತು ಸಮಸ್ಯೆ ಇತ್ತು. 2022ರಲ್ಲಿ ಮುಗಿಯುತ್ತದೆ. ಆ ನಂತರ 20 ವರ್ಷ ನಿನ್ನದೇ ಎಂದು ಚಾಲೆಂಜ್ ಮಾಡಿದ್ದೆ. ಯಾವ ಕ್ಷೇತ್ರಕ್ಕೆ ಹೋದರೂ ಅವನು ಗೆಲ್ಲುತ್ತಾನೆ. ಅವನನ್ನು ಆ ಭಗವಂತನೇ ಕಾಪಾಡುತ್ತಾನೆ. ಅಂಥದ್ದೊಂದು ಕಾಲ ಈಗ ಕೋಮಲ್ಗೆ ಬಂದಿದೆ’ ಎನ್ನುತ್ತಾರೆ ಜಗ್ಗೇಶ್.