ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ವೆಕೇಷನ್ ಸ್ಪಾಟ್ ಮಾಲ್ಡೀವ್ಸ್ನಲ್ಲಿ ಸೆಲೆಬ್ರಿಟಿಗಳಿಗೆ ವಿಶೇಷ ಆಫರ್ಗಳಿರುತ್ತವೆ. ಸೌತ್ ಟು ನಾರ್ತ್ ಬಹಳಷ್ಟು ಸ್ಟಾರ್ ಕಪಲ್, ನಟ, ನಟಿಯರು ಟ್ರಿಪ್ ಹೋಗುತ್ತಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಾಗಿ ಮಾಲ್ಡೀವ್ಸ್ ಟ್ರಿಪ್ ಹೋಗಿರುವುದು ಎಲ್ಲರಿಗೂ ಗೊತ್ತು. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ದುಬಾರಿ ಪ್ರವಾಸ ಮುಗಿಸಿ ಸದ್ಯ ವಾಪಾಸ್ ಆಗಿದ್ದಾರೆ. ಇಬ್ಬರೂ ಮಾಲ್ಡೀವ್ಸ್ ಹೋಗುವಾಗ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಕೆಲವೇ ಕ್ಷಣಗಳ ಅಂತರದಲ್ಲಿ ಇಬ್ಬರೂ ಏರ್ಪೋರ್ಟ್ಗೆ ಎಂಟ್ರಿ ಕೊಟ್ಟಿದ್ದರು. ಬರುವಾಗಲು ಸಹ ಇಬ್ಬರೂ ಕೆಲವೇ ಕ್ಷಣಗಳ ಅಂತರದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇತ್ತೀಚಿಗಷ್ಟೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ ರಶ್ಮಿಕಾ ಮಂದಣ್ಣ. ಮಾಲ್ಡೀವ್ಸ್ ತುಂಬಾ ದುಬಾರಿ.
ಅಲ್ಲಿನ ರೆಸಾರ್ಟ್ ನಲ್ಲಿ ತಂಗಲು ದಿನಕ್ಕೆ ಲಕ್ಷಗಟ್ಟಲೆ ಸುರಿಬೇಕು. ರೆಸಾರ್ಟ್ನ ಒಂದು ದಿನದ ಖರ್ಚು ಹೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ರಶ್ಮಿಕಾ ಹಾಗೂ ವಿಜಯ್ ಮಾಲ್ಡೀವ್ಸ್ನಲ್ಲಿ ಉಳಿದುಕೊಂಡ ರೆಸಾರ್ಟ್ ಒಝೆನ್ ರಿಸರ್ವ್ ಬೊಲಿಪುಶಿ. ಈ ರೆಸಾರ್ಟ್ ಸಖತ್ ಫೇಮಸ್. ಮಾಲ್ಡೀವ್ಸ್ ನಿಂದ ರಶ್ಮಿಕಾ ಒಂದಿಷ್ಟು ಪೋಟೋಗಳನ್ನು ಸಹ ಶೇರ್ ಮಾಡಿದ್ದಾರೆ. ರಶ್ಮಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಲ್ಲಿ ಒಂದು ದಿನ ಉಳಿದುಕೊಳ್ಳಲು ತಗುಲುವ ವೆಚ್ಚ 1,38,743 ರೂ. ಸುಮಾರು ಒಂದೂ ಕಾಲು ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತದೆ. ರಶ್ಮಿಕಾ ಉಳಿದುಕೊಂಡ ರೆಸಾರ್ಟ್ ಒಝೆನ್ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿ ಮಾಹಿತಿಯಲ್ಲಿ ಈ ಮೊತ್ತವನ್ನು ತಿಳಿಸಲಾಗಿದೆ.
ಇನ್ನು ಇಲ್ಲಿನ ರೂಮ್ಗಳ ಬೆಲೆ ಒಂದಕ್ಕಿಂತ ಇನ್ನೊಂದಕ್ಕೆ 20, 25 ಸಾವಿರಗಳಷ್ಟು ವ್ಯತ್ಯಾಸವನ್ನು ಹೊಂದಿದೆ. ಬಹಳ ಅಗತ್ಯವಿದ್ದ ಪ್ರವಾಸ ಕೊನೆಗೊಳ್ಳುತ್ತಿದೆ. ಈ ಸ್ಥಳಕ್ಕೆ ವಿದಾಯ ಹೇಳಬೇಕಾಗಿರುವುದನ್ನು ನಂಬಲಾಗುತ್ತಿಲ್ಲ ಎಂಬ ಬರಹವನ್ನು ಮಾಲ್ಡೀವ್ಸ್ನಿಂದ ಹೊರಟ ವೇಳೆ ಪೋಸ್ಟ್ ಮಾಡಿದ್ದಾರೆ ರಶ್ಮಿಕಾ. ಹಿಂದಿಯಲ್ಲಿ ಗುಡ್ಬೈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಶ್ಮಿಕಾ ಮಾಲ್ಡೀವ್ಸ್ ಫ್ಲೈಟ್ ಹತ್ತಿದ್ದರು.
ರಶ್ಮಿಕಾ ಮೊದಲ ಹಿಂದಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಸಲ್ಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ ಸದ್ಯ ಪ್ರವಾಸವನ್ನು ವಸ್ತ್ ಮಜಾ ಮಾಡಿದ್ದಾರೆ. ಸದ್ಯ ರಶ್ಮಿಕಾ ಬಳಿ ಕೈ ತುಂಬಾ ಸಿನಿಮಾಗಳಿವೆ. ಹಿಂದಿಯಲ್ಲಿ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುದಿಸಿದ್ದು ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಹಾಗೂ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.