ಇತ್ತೀಚೆಗಷ್ಟೇ ಜೀಕನ್ನಡ ವಾಹಿನಿಯಲ್ಲಿ ಜೀಕುಟುಂಬ ಅವಾರ್ಡ್ಸ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡಿರುವ ಕಲಾವಿದರನ್ನು ಗುರುತಿಸಿ, ಅವರಿಗೆಲ್ಲಾ ಅವಾರ್ಡ್ಸ್ ಕೊಡಲಾಯಿತು. ಜೀಕುಟುಂಬ ಅವಾರ್ಡ್ಸ್ ನಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ ಪಾತ್ರದಲ್ಲಿ ನಟಿಸುತ್ತಿರುವ ಧನಂಜಯ್ ಅವರಿಗೆ ವರ್ಷದ ಹೊಸ ಸೆನ್ಸೇಷನ್ ಅವಾರ್ಡ್ ಬಂದಿದೆ.
ಸಿದ್ದೇಗೌಡ ಪಾತ್ರದ ಮೂಲಕ ಧನಂಜಯ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಎಂದರೆ ತಪ್ಪಲ್ಲ. ಕಷ್ಟದಲ್ಲಿರುವವರಿಗೆ ಯಾವುದೇ ಸ್ವಾರ್ಥ ಇಲ್ಲದೇ ಸಹಾಯ ಮಾಡುವ ಪಾತ್ರ ಇದು. ಹಾಗೆಯೇ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾಗಿರುವ ಭಾವನಾಳನ್ನು ಕಂಡರೆ ಸಿದ್ದೇಗೌಡರಿಗೆ ಪ್ರೀತಿ. ಆ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಭಾವನಾಳಿಗೆ ಗೊತ್ತಿಲ್ಲದ ಹಾಗೆ ಮಲಗಿದ್ದಾಗಲೇ ತಾಳಿ ಕಟ್ಟಿಬಿಟ್ರು ಸಿದ್ದೇಗೌಡ್ರು.

ಈಗ ಮನೆಯ ಎಲ್ಲರಿಗೂ ಈ ವಿಷಯ ಗೊತ್ತಾಗಿ, ಭಾವನಾ ಸಿದ್ದೇಗೌಡ್ರ ಮನೆಗೆ ಹೋಗಿದ್ದು ಆಗಿದೆ. ಭಾವನಾಳಿಗೆ ಸಿದ್ದೇಗೌಡ್ರು ಮನಸ್ಸು ಅರ್ಥವಾಗದೆ, ಇನ್ನು ತಿರಸ್ಕರಿಸುತ್ತಿದ್ದಾಳೆ ಭಾವನಾ. ಇದು ಧಾರವಾಹಿ ಕಥೆ, ಆದರೆ ಈ ಸಿದ್ದೇಗೌಡ ಪಾತ್ರದಲ್ಲಿ ಧನಂಜಯ್ ಅವರ ಅಭಿನಯ ಅಂತೂ ಬಹಳ ಚೆನ್ನಾಗಿ ಮೂಡಿಬರುತ್ತಿದೆ ಎನ್ನುತ್ತಿದ್ದಾರೆ ವೀಕ್ಷಕರು. ಇನ್ನು ಧನಂಜಯ್ ಅವರು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ನಟಿಸಿದ್ದಾರೆ. ಇದು ಹಲವರಿಗೆ ಗೊತ್ತಿಲ್ಲದ ವಿಷಯ.
ಕಲಾವಿದರು ಸಾಮಾನ್ಯವಾಗಿ ಸೀರಿಯಲ್ ನಲ್ಲಿ ನಟಿಸಿದ ಬಳಿಕ ಸಿನಿಮಾಗೆ ಬರುತ್ತಾರೆ. ಆದರೆ ಧನಂಜಯ್ ಅವರ ಕೇಸ್ ಉಲ್ಟಾ, ಈಗಾಗಲೇ ಇವರು ವಾಸಂತಿ ನಲಿದಾಗ ಹಾಗೂ ಥಗ್ಸ್ ಆಫ್ ರಾಮಘಡ ಎನ್ನುವ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಇವರು ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು, ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಹೀಗೆ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ ಧನಂಜಯ್.
ಈಗ ಕಿರುತೆರೆಯಲ್ಲಿ ಲಕ್ಷ್ಮಿ ನಿವಾಸ ಧಾರಾವಾಹಿಯ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಇವರ ಪಾತ್ರದ ಅಭಿನಯ ನೋಡಿ ಕಿರುತೆರೆಗೆ ಒಳ್ಳೆ ಕಲಾವಿದ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ ವೀಕ್ಷಕರು. ಇನ್ನು ಧನಂಜಯ್ ಅವರ ತಾಯಿ ಕೂಡ ಕಿರುತೆರೆ ನಟಿ. ಹಲವು ಕನ್ನಡ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲೂ ಅಮ್ಮ ಮಗ ಇಬ್ಬರು ನಟಿಸುತ್ತಿದ್ದು, ಇವರ ತಾಯಿ ಚೆಲುವಿಯ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ

