ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ಹೊಸ ಧಾರವಾಹಿ ವಧು. ಕಲರ್ಸ್ ಕನ್ನಡ ಯಾವಾಗಲೂ ಉತ್ತಮವಾದ ಸ್ವಂತ ಕಥೆಗಳನ್ನು ಹೊರತರುವ ಮೂಲಕ ಜನರಿಗೆ ಮನರಂಜನೆ ನೀಡುತ್ತದೆ. ವಧು ಧಾರಾವಾಹಿಯಲ್ಲಿ ಸಹ ಅದೇ ರೀತಿ, ಇದು ವಿಭಿನ್ನವಾದ ಕಥೆಯನ್ನು ಹೊಂದಿರುವ ಧಾರಾವಾಹಿ. ಡೈವೋರ್ಸ್ ಲಾಯರ್ ನ ಮದುವೆ ಕಥೆ ಇದು. ಈ ಸ್ಟೋರಿ ಲೈನ್ ಕೇಳೋಕೆ ಬಹಳ ಹೊಸತು ಅನ್ನಿಸುತ್ತಿದೆ. ಇನ್ನು ಈ ಧಾರಾವಾಹಿಯ ಮೂಲಕ ನಾಯಕಿಯಾಗಿ ವಧು ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆ ಯಾರು? ಈ ಹಿಂದೆ ಇವರು ಯಾವ ಧಾರಾವಾಹಿಯಲ್ಲಿ ನಟಿಸಿದ್ದರು ಗೊತ್ತಾ? ಇಲ್ಲಿದೆ ಡೀಟೇಲ್ಸ್

ವಧು ಧಾರಾವಾಹಿ ಈಗಾಗಲೇ 2 ಪ್ರೊಮೋಗಳನ್ನು ಬಿಡುಗಡೆ ಮಾಡಿದ್ದು, ಈ ಪ್ರೊಮೋಗಳು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ವಧು ಧಾರಾವಾಹಿಯ ಪ್ರೊಮೋದಲ್ಲಿ ಆಕೆ ಲಾಯರ್, ಅದರಲ್ಲೂ ಡೈವೋರ್ಸ್ ಲಾಯರ್, ಆದರೆ ಆಕೆಯ ತಂದೆಗೆ ಮಗಳ ಮದುವೆಯನ್ನು ಅದ್ಧೂರಿಯಾಗಿ ಸುಂದರವಾಗಿ ಮಾಡಬೇಕು ಎಂದು ಆಸೆ, ಹಾಗಾಗಿ ಮಗಳಿಗೆ ವಧು ಎಂದೇ ಹೆಸರನ್ನು ಇಟ್ಟಿದ್ದಾರೆ. ವಧುವಿಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು ಎನ್ನುವುದು ಅವರ ಆಸೆ, ವಧುವಿಗೂ ಮದುವೆ ಆಗಬೇಕು ಎನ್ನುವುದು ಆಕೆಯ ಮುಂದಿನ ಗುರಿ.. ವಧುವಿಗೆ ಸ್ಪೂರ್ತಿ ಆಗಿರುವವರು ಲಾಯರ್ ಪಾತ್ರದಲ್ಲಿ ನಟಿಸುತ್ತಿರುವ ಸೀತಾರಾಮ್ ಅವರು.
ಹೌದು, ಟಿ. ಎನ್. ಸೀತಾರಾಮ್ ಅವರು ವಧು ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಸೀತಾರಾಮ್ ಅವರು ಒಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದರೆ ಆ ಧಾರವಾಹಿ ಖಂಡಿತವಾಗಿ ಚೆನ್ನಾಗಿರುತ್ತದೆ ಎನ್ನುವುದು ನಂಬಿಕೆ. ಇನ್ನು ಸುಧಾ ಬೆಳವಾಡಿ ಅವರು ಸೇರಿದಂತೆ ಉತ್ತಮವಾದ ತಾರಾಗಣ ಈ ಧಾರವಾಹಿಯಲ್ಲಿದೆ. ಲಕ್ಷಣ ಧಾರಾವಾಹಿಯಲ್ಲಿ ತಮ್ಮನ ಪಾತ್ರದಲ್ಲಿ ನಟಿಸಿದ್ದ ಶ್ರೀಕಾಂತ್ ಅವರು ವಧು ಧಾರಾವಾಹಿ ಮೂಲಕ ಹೀರೋ ಆಗಿದ್ದಾರೆ. ಇವರ ಪ್ರೊಮೋ ಸಹ ಜನರಿಗೆ ಬಹಳ ಇಷ್ಟವಾಗಿದೆ. ವಧುವಿಗೆ ಬೆಸ್ಟ್ ಹುಡುಗ ಸಿಗಬೇಕು ಎನ್ನುವುದು ಅವರ ಕುಟುಂಬದ ಆಸೆ.

ಆದರೆ ಹೀರೋಗೆ ಈಗಾಗಲೇ ಮದುವೆಯಾಗಿ, ಆತನ ಪತ್ನಿ ವಿಚ್ಛೇದನ ಕೊಡಬೇಕು ಅಂದುಕೊಂಡಿದ್ದಾಳೆ. ತನ್ನ ಡೈವೋರ್ಸ್ ಕೇಸ್ ತೆಗೆದುಕೊಂಡು ಹೀರೋಯಿನ್ ಹತ್ತಿರ ಬರುತ್ತಾನೆ ಹೀರೋ, ಇವರಿಬ್ಬರ ನಡುವೆ ಪ್ರೀತಿ ಹೇಗೆ ಶುರುವಾಗುತ್ತದೆ? ಮದುವೆ ಅಗೋಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಧಾರಾವಾಹಿಯ ಕಥೆ. ಇನ್ನು ಹೀರೋ ತಾಯಿ ಪಾತ್ರದಲ್ಲಿ ವಿನಯ ಪ್ರಸಾದ್ ಅವರು ಅಭಿನಯಿಸುತ್ತಿದ್ದಾರೆ. ಉತ್ತಮ ತಾರಾಬಳಗವನ್ನೇ ಹೊಂದಿರೆ ವಧು ಧಾರಾವಾಹಿ. ಈ ಧಾರಾವಾಹಿಯಲ್ಲಿ ಹೀರೋಯಿನ್ ವಧು ಪಾತ್ರದಲ್ಲಿ ನಟಿಸುತ್ತಿರುವುದು ದುರ್ಗಶ್ರೀ ಅವರು. ಇವರ ಹೆಸರು ಗೊತ್ತಿಲ್ಲದೇ ಇದ್ದರು, ಇವರ ಮುಖ ಪರಿಚಯ ಇದ್ದೇ ಇರುತ್ತದೆ.
ಉದಯ ಟಿವಿಯ ನೇತ್ರಾವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ದುರ್ಗಶ್ರೀ ಅವರಿಗೆ ನಟಿ ಎನ್ನುವುದರ ಜೊತೆಗೆ ಭರತನಾಟ್ಯ ಡ್ಯಾನ್ಸರ್ ಸಹ ಹೌದು. ಇವರ ತಾಯಿಗೆ ತಮ್ಮ ಮಗಳು ನಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಆಸೆ ಇತ್ತು, ಅದೇ ರೀತಿ ದುರ್ಗಾ ಅವರು ನಟಿ ಆಗಿದ್ದಾರೆ. ನೇತ್ರಾವತಿ ಧಾರಾವಾಹಿಯ ತಂಗಿ ಪಾತ್ರಕ್ಕೆ ಆಡಿಷನ್ ಕೊಡುವುದಕ್ಕೆ ಹೋದವರು, ಪರ್ಫಾರ್ಮೆನ್ಸ್ ಚೆನ್ನಾಗಿದ್ದ ಕಾರಣ ನಾಯಕಿಯ ಪಾತ್ರಕ್ಕೆ ಆಯ್ಕೆಯಾದರು. ಇದು ಅವರ ಲಕ್, ತೆಲುಗಿನಲ್ಲಿ ವೈಷ್ಣವಿ, ಅರ್ಧಂಗಿ ಸೇರಿದಂತೆ 3 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ವಧು ಧಾರಾವಾಹಿಯ ಮೂಲಕ ಮತ್ತೊಂದು ಹೊಸ ಪಾತ್ರದ ಮೂಲಕ ಜನರ ಎದುರು ಬರುತ್ತಿದ್ದಾರೆ.