ಬಿಗ್ ಬಾಸ್ ಶೋ ಎಂದ ಮೇಲೆ ಅಲ್ಲಿ ಕುತೂಹಲ ಇರಲೇಬೇಕು. ಈ ಶೋ ಇಂದ ಪ್ರತಿ ವಾರ ಒಬ್ಬೊಬ್ಬರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಕಿಚ್ಚ ಸುದೀಪ್ ಅವರು ಈ ವಾರದ ವೀಕೆಂಡ್ ಎಪಿಸೋಡ್ ಆರಂಭದಲ್ಲಿಯೇ ಈ ವಾರ ಡಬಲ್ ಎಲಿಮಿನೇಶನ್ ನಡೆಯುತ್ತದೆ ಎಂದು ಸುಳಿವು ನೀಡಿದ್ದರು. ಅದೇ ರೀತಿಯಲ್ಲಿ ಈ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಅನುಷಾ ರೈ ಹಾಗು ಧರ್ಮ ಕೀರ್ತಿ ರಾಜ್ ಇಬ್ಬರು ಡಬಲ್ ಎಲಿಮಿನೇಷನ್ ನಲ್ಲಿ ಹೊರಬಂದಿದ್ದಾರೆ. ಇವರಿಬ್ಬರ ಅಭಿಮಾನಿಗಳಿಗೆ ಇದು ಬೇಸರ ತಂದಿದೆ. ಅಷ್ಟಕ್ಕೂ ಅನುಷಾ ರೈ ಅವರಿಗೆ ಈಗ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಶೋ ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಅಸಲಿ ವಿಷಯ ಏನು ಎಂದರೆ, ಶೋ ಶುರುವಾದಾಗ ಕೂಡ ಇವರಿಬ್ಬರು ಜೊತೆಯಾಗಿ ಜೋಡಿಯಾಗಿಯೇ ಬಿಗ್ ಬಾಸ್ ಮನೆಗೆ ಬಂದರು. ಅದೇ ರೀತಿ ಇವರಿಬ್ಬರ ಎಲಿಮಿನೇಷನ್ ಕೂಡ ಜೋಡಿಯಾಗಿಯೇ ಆಗಿದೆ. ಅನುಷಾ ಅವರು ನೇರ ನುಡಿ ಸ್ವಭಾವದ ಹುಡುಗಿಯೇ ಆದರೂ ಸಹ, ಹೆಚ್ಚು ದಿವಸಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಉಳಿಯಲು ಸಾಧ್ಯ ಆಗಲಿಲ್ಲ. ಯಾಕೆಂದರೆ ಇವರು ನೇರ ಸ್ವಭಾವದವರೆ ಆಗಿದ್ದರು ವಿವಾದಗಳಲ್ಲಿ ಸಿಲುಕಿಕೊಳ್ಳಲಿಲ್ಲ.
ಟಾಸ್ಕ್ ಗಳಲ್ಲಿ ಸಹ ಹೇಳಿಕೊಳ್ಳುವಂಥ ಸೂಪರ್ ಪರ್ಫಾರ್ಮೆನ್ಸ್ ಕೊಟ್ಟಿರಲಿಲ್ಲ. ಕೆಲವೊಮ್ಮೆ ಮಾತನಾಡಿದರು ಸಹ, ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಧರ್ಮಾ ಕೀರ್ತಿ ರಾಜ್ ಅವರೊಡನೆ ಕೆಲ ಸಮಯ ಕಾಣಿಸಿಕೊಂಡರು ಸಹ, ಬೇರೆಯವರ ಹಾಗೆ ಪ್ರಮುಖವಾಗಿ ಎಲ್ಲಿಯು ಕಾಣಿಸಿಕೊಳ್ಳಲಿಲ್ಲ. ಈ ಎಲ್ಲಾ ಕಾರಣಗಳಿಗೆ ಇರಬಹುದೋ ಏನೋ, ಇಷ್ಟು ಬೇಗ ಅನುಷಾ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಇವರು ಇನ್ನಷ್ಟು ದಿವಸಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇರುತ್ತಾರೆ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದು ಸುಳ್ಳಾಗಿದೆ.

ಅನುಷಾ ರೈ ಅವರು ಎಲಿಮಿನೇಟ್ ಆಗಿದ್ದು, ಇವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಈಗ ಚರ್ಚೆ ಶುರುವಾಗಿದ್ದು, ಮಾಹಿತಿಗಳ ಪ್ರಕಾರ ಅನುಷಾ ಅವರಿಗೆ ಒಂದು ವಾರಕ್ಕೆ 70 ಸಾವಿರ ರೂಪಾಯಿಗಳ ಸಂಭಾವನೆ ನಿಗದಿ ಆಗಿತ್ತು. 7 ವಾರಗಳ ಕಾಲ ಅನುಷಾ ಬಿಗ್ ಬಾಸ್ ಮನೆಯೊಳಗೆ ಇದ್ದರು, 8 ವಾರಕ್ಕೆ ಒಟ್ಟು ₹4,90,000 ರೂಪಾಯಿಗಳ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ಇನ್ನು 2 ಲಕ್ಷ ರೂಪಾಯಿಗಳ ಮೊತ್ತದ ಉಡುಗೊರೆ ಸಹ ಅನುಷಾ ಅವರಿಗೆ ಕೊಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಒಟ್ಟಿನಲ್ಲಿ ಅನುಷಾ ಅವರಿಗೆ ಒಳ್ಳೆಯ ಸಂಭಾವನೆ ಬಿಗ್ ಬಾಸ್ ಕಡೆಯಿಂದ ಸಿಕ್ಕಿದೆ.
ಅನುಷಾ ಅವರ ಸಂಭಾವನೆ ಬಗೆಗಿನ ವಿಚಾರ ಇದು. ಇನ್ನು ಈ ವಾರದ ವೀಕೆಂಡ್ ಎಪಿಸೋಡ್ ಒಂದು ರೀತಿ ಫೈರ್ ಬಾಂಬ್ ತರವೇ ಇತ್ತು ಎಂದು ಹೇಳಿದರು ಖಂಡಿತ ತಪ್ಪಲ್ಲ. ಸುದೀಪ್ ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರು, ಇದುವರೆಗೂ ಸುದೀಪ್ ಅವರು ಇಷ್ಟು ಕೋಪ ಮಾಡಿಕೊಂಡಿದ್ದು ಕಂಡಿದ್ದೇ ಇಲ್ಲ. ಚೈತ್ರಾ ಅವರು ಹೇಳಿದ ಸುಳ್ಳುಗಳು, ಮಾಡಿದ ಕೆಲಸ ಇದೆಲ್ಲದಕ್ಕೂ ಸುದೀಪ್ ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರು. ಅವರ ಒಂದೊಂದು ಮಾತುಗಳು ಕೂಡ ಚಪ್ಪಲಿಯನ್ನು ಶಾಲಿಗೆ ಸುತ್ತಿಕೊಂಡು ಹೊಡೆದ ಹಾಗಿತ್ತು ಎನ್ನುತ್ತಿದ್ದಾರೆ ಅಭಿಮಾನಿಗಳು.