
ನಟಿ ಸಾಯಿಪಲ್ಲವಿ ಅವರು ನಟನೆ ಶುರು ಮಾಡಿದ್ದು ಮಲಯಾಳಂ ನ ಪ್ರೇಮಂ ಸಿನಿಮಾ ಮೂಲಕ. ಮೊದಲ ಸಿನಿಮಾದಲ್ಲೇ ಎಲ್ಲರ ಮನಸ್ಸಿಗೆ ಇಷ್ಟವಾದ ಈ ನಟಿ, ನಂತರ ತೆಲುಗಿಗೆ ಎಂಟ್ರಿ ಕೊಟ್ಟರು. ತೆಲುಗು, ತಮಿಳು ಹಾಗೂ ಮಲಯಾಳಂ ಮೂರು ಭಾಷೆಗಳಲ್ಲಿ ಸ್ಟಾರ್ ಆಗಿರುವ ಸಾಯಿಪಲ್ಲವಿ ಅವರು ಗಾರ್ಗಿ ಸಿನಿಮಾದ ಕನ್ನಡ ವರ್ಷನ್ ಗೆ ತಾವೇ ಡಬ್ ಮಾಡುವ ಮೂಲಕ ಕನ್ನಡಿಗರಿಂದ ಹೆಚ್ಚು ಪ್ರಶಂಸೆ ಪಡೆದುಕೊಂಡರು.
ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತದ ಅತ್ಯಂತ ಪ್ರಬುದ್ಧ ನಟಿ ಎಂದರೂ ತಪ್ಪಲ್ಲ. ನ್ಯಾಚುರಲ್ ಬ್ಯೂಟಿ ಎಂದೇ ಇವರನ್ನು ಕರೆಯುತ್ತಾರೆ. ನಟಿ ಸಾಯಿಪಲ್ಲವಿ ಹಾಗೂ ನಟ ಶಿವ ಕಾರ್ತಿಕೇಯನ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಅಮರನ್ ಚಿತ್ರ ಮೊನ್ನೆ ಗುರುವಾರವಷ್ಟೇ ತೆರೆಕಂಡಿದ್ದು, ಈ ಸಿನಿಮಾಗೆ ಇವರಿಬ್ಬರು ಪಡೆದಿರುವ ಸಂಭಾವನೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಕನ್ನಡ ಚಿತ್ರಪ್ರೇಮಿಗಳಿಗೂ ಸಾಯಿಪಲ್ಲವಿ ಅಂದ್ರೆ ತುಂಬಾ ಇಷ್ಟ, ಆದಷ್ಟು ಬೇಗ ಇವರು ಕನ್ನಡದಲ್ಲಿಯೂ ಒಂದು ಸಿನಿಮಾ ಮಾಡಲಿ ಎನ್ನುವುದು ಕನ್ನಡ ಅಭಿಮಾನಿಗಳ ಆಸೆ ಕೂಡ ಹೌದು. ಸಾಯಿಪಲ್ಲವಿ ಅವರು ಇತ್ತೀಚೆಗೆ ಅಮರನ್ ಸಿನಿಮಾದಲ್ಲಿ ನಟಿಸಿದ್ದಾರೆ, ಇದು ತಮಿಳುನಾಡಿನ ವೀರಯೋಧ ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಚರಿತ್ರೆ, ಮೇಜರ್ ಮುಕುಂದ್ ಅವರ ಪಾತ್ರದಲ್ಲಿ ನಟ ಶಿವಕಾರ್ತಿಕೇಯನ್, ಅವರ ಪತ್ನಿ ಇಂದು ರೆಬೇಕಾ ವರ್ಗಿಸ್ ಪಾತ್ರದಲ್ಲಿ ಸಾಯಿಪಲ್ಲವಿ ನಟಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಅಮರನ್ ಸಿನಿಮಾ ಆಕ್ಟೊಬರ್ 31ರಂದು ತಮಿಳು, ತೆಲುಗು, ಹಿಂದಿ, ಕನ್ನಡ ಭಾಷೆಯಲ್ಲಿ ತೆರೆಕಂಡಿದೆ. ಮೊದಲ ದಿನವೇ 42 ಕೋಟಿ ಗಳಿಸಿ, ಈ ಕಥಯನ್ನು ಮೆಚ್ಚಿರುವ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಶಿವಕಾರ್ತಿಕೇಯನ್ ಹಾಗೂ ಸಾಯಿಪಲ್ಲವಿ ಜೋಡಿ ಮೋಡಿ ಮಾಡುತ್ತಿದೆ. ಅಮರನ್ ಸಿನಿಮಾವನ್ನು ನಟ ಕಮಲ್ ಹಾಸನ್ ಅವರು ನಿರ್ಮಿಸಿದ್ದು, ರಾಜಕುಮಾರ್ ಪೆರಿಯಸಾಮಿ ಅವರು ನಿರ್ದೇಶನ ಮಾಡಿದ್ದಾರೆ.

ತೆರೆಕಂಡು ಸಕ್ಸಸ್ ಕಾಣುತ್ತಿರೋ ಅಮರನ್ ಸಿನಿಮಾಗೆ ಸಾಯಿಪಲ್ಲವಿ ಹಾಗು ಶಿವಕಾರ್ತಿಕೇಯನ್ ಇಬ್ಬರಿಗೂ ಭಾರಿ ಸಂಭಾವನೆ ಸಿಕ್ಕಿದೆ ಎಂದು ಮಾಹಿತಿ ಸಿಕ್ಕಿದೆ, ಶಿವಕಾರ್ತಿಕೇಯನ್ ಅವರಿಗೆ ಬರೋಬ್ಬರಿ 30 ಕೋಟಿ ಸಂಭಾವನೆ ನೀಡಲಾಗಿದೆ. ಇನ್ನು ಸಾಯಿಪಲ್ಲವಿ ಅವರಿಗೆ 3 ಕೋಟಿ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇಬ್ಬರು ಇದುವರೆಗೂ ಪಡೆದಿರುವ ಅತಿಹೆಚ್ಚು ಸಂಭಾವನೆ ಇದು ಎಂದು ಮಾಹಿತಿ ಸಿಕ್ಕಿದೆ