ಟ್ರೋಲ್ ರಾಣಿ ಎಂದೇ ಪ್ರಸಿದ್ದಿ ಪಡೆದಿರುವ “ರಶ್ಮಿಕಾ ಮಂದಣ್ಣ”.ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದ್ದಾರೆ. ಇವರು ಹೆಚ್ಚಾಗಿ ಟ್ರೋಲ್ ಒಳಗಾಗುತ್ತಾರೆ ಎಂದು ದೋಷಿಸಿದ್ದಾರೆ.ಆದರೆ ಆ ರೀತಿ ಆಗಲು ಈ ನಟಿಯ ವರ್ತನೆ ಮಾತ್ರ ಕಾರಣ ಎಂದು ಯಾರಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಹೌದು ಈ ನಟಿ “ಸಾನ್ವಿ” ಆಗಿ ಬಣ್ಣದ ಲೋಕಕ್ಕೆ ಪರಿಚಯಿಸಿಕೊಂಡರು. ಆ ನಂತರ ರಾತ್ರೋರಾತ್ರಿ ‘ನ್ಯಾಶಿನಲ್ ಕ್ರಶ್’ ಎಂಬ ಬಿರುದು ಕೂಡ ಪಡೆದುಕೊಂಡರು.ಹೀಗೆ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡಂತೆ ಈ ನಟಿಯ ಅತಿಯಾದ ವರ್ತನೆ ಕೂಡ ಮಿತಿ ಮೀರುತ್ತಿದೆ.

ಇಂದು ಈ ನಟಿ ಕನ್ನಡ ಅಲ್ಲದೆ ತೆಲಗು ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.ಸದ್ಯದಲ್ಲಿ ತಮಿಳಿನಲ್ಲಿ ರಶ್ಮಿಕಾ ನಟನೆಯ ‘ವಾರೀಸು’ ಚಿತ್ರೀಕರಣ ಮುಗಿದಿದೆ. ‘ಪುಷ್ಪ- 2’ ಶೂಟಿಂಗ್ ಶುರುವಾಗಿದೆ. ಬಾಲಿವುಡ್ನಲ್ಲಿ ರಣ್ಬೀರ್ ಕಪೂರ್ ಜೊತೆ ‘ಅನಿಮಲ್’ ಚಿತ್ರದಲ್ಲಿ ನಟಿಸ್ತಿದ್ದಾರೆ. ‘ಮಿಷನ್ ಮಜ್ನು’ ಬಿಡುಗಡೆ ಆಗಬೇಕಿದೆ. ಇನ್ನು ಬಾಲಿವುಡ್ ಪ್ರವೇಶಿಸಿದ ಮೇಲೆ ಹಾಟ್ ಹಾಟ್ ಫೋಟೊಶೂಟ್ಗಳಲ್ಲಿ ಕೊಡಗಿನ ಬೆಡಗಿ ಮಿಂಚುತ್ತಿದ್ದಾರೆ.
ಇಷ್ಟೆಲ್ಲಾ ಅಲ್ಲದೆ ಈ ನಟಿ ಇದೀಗ ಬೇರೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.ಹೌದು ಇಲ್ಲಿಯ ವರೆಗೂ ರಶ್ಮಿಕಾ ಗ್ಲಾಮರಸ್ ಪಾತ್ರಗಳನ್ನು ನಿರ್ವಹಣೆ ಮಾಡಿಲ್ಲ.ಆದರೆ ಟಾಲಿವುಡ್ ನಲ್ಲಿ ತಮ್ಮ ಎರಡನೇ ಸಿನಿಮಾವಾದ “ಗೀತಾ ಗೋವಿಂದಮ್” ನಲ್ಲಿ ಮಾತ್ರ ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಂಡು ಬಹಳ ಸುದ್ದಿಯಾಗಿದ್ದರು.ಅದಾದ ನಂತರ ಯಾವ ದೃಶ್ಯಗಳನ್ನು ಈಕೆ ನಿರ್ವಹಿಸುತ್ತಿಲ್ಲಾ.ಆದರೆ ಇದೀಗ ಎಲ್ಲರೂ ಅಚ್ಚರಿ ಪಡುವಂತಹ ಸುದ್ದಿ ಬಹಳ ಹೈಪ್ ಪಡೆದುಕೊಳ್ಳುತ್ತಿದೆ.
“ಮಹೇಶ್ ಬಾಬು” ಅವರ ಇನ್ನು ಹೆಸರಿಡದ ಚಿತ್ರದಲ್ಲಿ ಈ ನಟಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.”ತ್ರಿವಿಕ್ರಂ” ಹಾಗೂ ಮಹೇಶ್ ಬಾಬು ಅವರ ಚಿತ್ರಾವದ “SSMB28” ಸಿನಿಮಾದಲ್ಲಿ ರಶ್ಮಿಕಾ ಗ್ಲಾಮರರ್ಸ್ ಆಗಿ ಕಾಣಿಸಿಕೊಂಡು ತೆರೆ ಮೇಲೆ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಲಿದ್ದಾರೆ ಎಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.ಇನ್ನು ಈ ಸಿನಿಮಾದಲ್ಲಿ “ಪೂಜಾ ಹೆಗ್ಡೆ ಹಾಗೂ ಶ್ರೀ ಲೀಲಾ” ಅವ್ರು ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇದೀಗ ರಶ್ಮಿಕಾ ಅವರು ಕೂಡ ಈ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ ಎನ್ನುತ್ತಿವೆ ಹಲವಾರು ಮೂಲಗಳು.
ಕೆಲವೊಮ್ಮೆ ಇಂತಹ ಹಾಡುಗಳು ಸಿನಿಮಾಗಳನ್ನು ಗೆಲ್ಲಿಸುವಲ್ಲಿ ಸದ್ಯವಾಗುವ ಹಲವಾರು ಉಧಾಹರಣೆ ಗಳನ್ನು ನಾವು ನೋಡಿದ್ದೇವೆ.ಅದ್ರಲ್ಲೂ ಕೇವಲ ಎರಡು ದಿನಗಳ ಕೆಲಸಕ್ಕೆ ಇಂತಹ ಹಾಡಿನಿಂದ ದೊಡ್ಡ ಮೊತ್ತವನ್ನು ಕೂಡ ಪಡೆಯ ಬಹುದು ಎಂಬ ಮಾತುಗಳು ಕೊಡ ಸಿನಿಮಾ ರಂಗದಲ್ಲಿ ಇದೆ. ಇದೀಗ ಸಮಂತಾ,ಕಾಜಲ್ ಅವರ ಸಾಲಿಗೆ ರಶ್ಮಿಕಾ ಅವರು ಕೂಡ ಸೇರುವ ಯೋಚನೆ ಮಾಡಿದ್ದಾರೆ.ಇದೇ ಮೊದಲ ಬಾರಿಗೆ ವಿಶೇಷ ಹಾಡಿನ ಮೂಲಕ ರಶ್ಮಿಕಾ ತೊಡಗಿಸಿಕೊಳ್ಳುತ್ತಿರುವುದು ಜನರು ಎಷ್ಟರ ಮಟ್ಟಿಗೆ ಮೆಚ್ಚಿಕೊಳ್ಳುತ್ತಾರೆ ಎಂದು ನಾವು ಕಾದುನೋಡಬೇಕಿದೆ.