ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿರುವ ಪ್ರಬಲವಾದ ಸ್ಪರ್ಧಿಗಳಲ್ಲಿ ತ್ರಿವಿಕ್ರಂ ಒಬ್ಬರು. ಇವರು ಬಹಳಷ್ಟು ಹುಡುಗಿಯರ ಫೇವರೆಟ್ ಸ್ಪರ್ಧಿ ಎಂದರೆ ತಪ್ಪಲ್ಲ. ತ್ರಿವಿಕ್ರಂ ಅವರು ಹಾನೆಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿರುವ ರೀತಿ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅವರಿಗೆ ಹೆಚ್ಚು ಅಭಿಮಾನಿಗಳನ್ನು ತಂದುಕೊಡುತ್ತಿದೆ. ಸ್ಟ್ರಾಂಗ್ ಸ್ಪರ್ಧಿ ಆಗಿರುವ ತ್ರಿವಿಕ್ರಂ, ಫಿನಾಲೆ ತಲುಪಿ, ಗೆಲ್ಲುವ ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತಿದೆ ಎಂದರೆ ತಪ್ಪಲ್ಲ. ಒಬ್ಬ ನಟನಾಗಿ ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ, ಆದರೆ ತ್ರಿವಿಕ್ರಂ ನಿಜಕ್ಕೂ ಯಾರು? ಯಾವ ಊರಿನವರು ಏನು ಓದಿದ್ದಾರೆ ಗೊತ್ತಾ? ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ..

ತ್ರಿವಿಕ್ರಂ ಅವರನ್ನು ನಾವೆಲ್ಲರೂ ಕಲರ್ಸ್ ಕನ್ನಡ ವಾಹಿನಿಯ ಪದ್ಮಾವತಿ ಧಾರಾವಾಹಿಯಲ್ಲಿ ನೋಡಿದ್ದೇವೆ. ನಾಯಕ ಸೂಪರ್ ಸ್ಟಾರ್ ಸಾಮ್ರಾಟ್ ಪಾತ್ರದಲ್ಲಿ ತ್ರಿವಿಕ್ರಂ ಅಭಿನಯಿಸಿದ್ದರು. ಆಗ ಇವರ ಪಾತ್ರಕ್ಕೆ ಭಾರಿ ಮೆಚ್ಚುಗೆ ಮತ್ತು ಜನಪ್ರಿಯತೆ ಎರಡು ಕೂಡ ಸಿಕ್ಕಿತ್ತು. ಕಿರುತೆರೆಯಲ್ಲಿ ಈ ಧಾರಾವಾಹಿಗೆ ಒಳ್ಳೆಯ ಹೆಸರು, ಬೇಡಿಕೆ, ಜನಪ್ರಿಯತೆ ಎಲ್ಲವೂ ಸಿಕ್ಕಿತ್ತು ಎಂದರೆ ತಪ್ಪಲ್ಲ. ಪದ್ಮಾವತಿ ನಂತರ ಕಿರುತೆರೆ ಇಂದ ದೊಡ್ಡ ಬ್ರೇಕ್ ಪಡೆದುಕೊಂಡಿದ್ದ ತ್ರಿವಿಕ್ರಮ್ ಅವರು ಇದೀಗ ಬಿಗ್ ಬಾಸ್ ಶೋ ಮೂಲಕ ಮತ್ತೆ ಟಿವಿಗೆ ರೀಎಂಟ್ರಿ ಕೊಟ್ಟಿದ್ದಾರೆ. ಜನರಿಗೆ ಮತ್ತೆ ಇಶ್ಟವಾಗುತ್ತಿದ್ದಾರೆ..
ಟಾಸ್ಕ್ ಗಳನ್ನು ಚೆನ್ನಾಗಿ ನಿಭಾಯಿಸುವ ತ್ರಿವಿಕ್ರಂ ಒಂದು ರೀತಿಯಲ್ಲಿ ಮನೆಯ ಒಳಗಿರುವ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ, ಹೊರಗಿರುವವರ ಪ್ರೀತಿಯನ್ನ ಕೂಡ ಗೆಲ್ಲುತ್ತಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ತ್ರಿವಿಕ್ರಂ ಅವರು ಬಹಳ ಒಳ್ಳೆಯ ಮನುಷ್ಯ, ಹಾಗೆಯೇ ಇವರು ಬದುಕಿನಲ್ಲಿ ತುಂಬಾ ಕಷ್ಟಪಟ್ಟು ಇಂದು ಒಬ್ಬ ನಟನಾಗಿ ಬೆಳೆದು ನಿಂತಿದ್ದಾರೆ. ತ್ರಿವಿಕ್ರಂ ಅವರು ಬಡತನದಲ್ಲಿ ಬೆಳೆದು ಬಂದವರು. ಮೂಲತಃ ಇವರದ್ದು ತುಮಕೂರು. ತುಮಕೂರಿನ ಗುಬ್ಬಿಯಲ್ಲಿ ತ್ರಿವಿಕ್ರಂ ಅವರು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ. ಅವರು ಶಾಲಾ ಶಿಕ್ಷಣ ಮುಗಿಸಿದ್ದು ಕೂಡ ಅಲ್ಲಿಯೇ..

ತುಮಕೂರಿನಲ್ಲಿ ಇದ್ದುಕೊಂಡೇ ಪಿಯುಸಿ ವರೆಗು ಓದಿದರು ತ್ರಿವಿಕ್ರಂ, ಇವರಿಗೆ ಕ್ರಿಕೆಟ್ ನಲ್ಲಿ ಭಾರಿ ಆಸಕ್ತಿ ಇತ್ತು. ಚಿಕ್ಕ ವಯಸ್ಸಿನಿಂದ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ತ್ರಿವಿಕ್ರಂ ಅವರು ಕ್ರಿಕೆಟ್ ಗಾಗಿ ಬೆಂಗಳೂರಿಗೆ ಬಂದರು. ಬಳಿಕ ಕರೆಸ್ಪಾಂಡೆನ್ಸ್ ನಲ್ಲಿ ಎಂಬಿಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹೌದು, ತ್ರಿವಿಕ್ರಂ ಅವರು ಸುಮಾರು 8 ವರ್ಷಗಳ ಕಾಲ ಕ್ರಿಕೆಟ್ ನಲ್ಲಿಯೇ ನಿರತರಾಗಿದ್ದರು, ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಆದರೆ ಇಂಜೂರಿ ಆದ ಕಾರಣ ಕ್ರಿಕೆಟ್ ಮುಂದುವರೆಸಲು ಸಾಧ್ಯ ಆಗಲಿಲ್ಲ. ಆಗ ಜಿಮ್ ಕಡೆಗೆ ಗಮನ ಹರಿಸಿದರು. ತ್ರಿವಿಕ್ರಂ ಅವರಿಗೆ ಸೆಲೆಬ್ರಿಟಿ ಜಿಮ್ ಟ್ರೇನರ್ ಆಗಬೇಕು ಎನ್ನುವ ಆಸೆ ಇತ್ತು..
ಅದೇ ನಿಟ್ಟಿನಲ್ಲಿ ಕೆಲಸ ಮಾಡುವಾಗ ಧಾರಾವಾಹಿಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಜೊತೆ ಜೊತೆಯಲಿ ಧಾರಾವಾಹಿಯ ಸಣ್ಣ ಪಾತ್ರ ಒಂದರಲ್ಲಿ ತ್ರಿವಿಕ್ರಂ ನಟಿಸಿದ್ದರು, ಬಳಿಕ ಪದ್ಮಾವತಿ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶ ಸಿಕ್ಕಿತು, ಈ ಧಾರಾವಾಹಿ ಇಂದ ಅವರಿಗೆ ಒಳ್ಳೆಯ ಹೆಸರು ಕೂಡ ಬಂತು. ಅಷ್ಟೇ ಅಲ್ಲದೇ, ಪ್ರೇಮ ಬರಹ, ರಂಗನಾಯಕಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಹ ತ್ರಿವಿಕ್ರಂ ನಟಿಸಿದ್ದಾರೆ. ಈಗ ಬಿಗ್ ಬಾಸ್ ಮೂಲಕ ಮತ್ತೊಮ್ಮೆ ಜನರಿಗೆ ತುಂಬಾ ಇಷ್ಠವಾಗುತ್ತಿದ್ದಾರೆ.