ಹೆಂಡತಿಯನ್ನು ಕೆಲಸಕ್ಕೆ ಹೋಗು ಸಂಪಾದಿಸ್ಕೊಂಡು ಬಾ ಎನ್ನುವುದಾಗಿ ಗಂಡ ಒತ್ತಾಯಿಸುವ ಅಧಿಕಾರ ಅವನಿಗಿರುವುದಿಲ್ಲ. ತಾನು ಕೆಲಸಕ್ಕೆ ಹೋಗುತ್ತೇನೆ ಅನ್ನುವಾಗ ಹೋಗಲೇಬಾರದು ಎಂದು ಅಡ್ಡಿ ಮಾಡುವ ಅಧಿಕಾರವೂ ಸಹ ಇರುವುದಿಲ್ಲ. ಇದೊಂದು ಒಬ್ಬರ ವೈಯುಕ್ತಿಕ ಇಚ್ಛೆಯಾಗಿರುತ್ತದೆ. ತನಗೆ ಕೆಲಸಕ್ಕೆ ತೆರಳಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬಹುದು ,ಎಂಬ ಮನೋಭಾವನೆ ಇದ್ದರೆ ಧಾರಾಳವಾಗಿ ಹೋಗಬಹುದು. ಇತ್ತೀಚಿನ ಜೀವನದಲ್ಲಿ ಒಬ್ಬರ ದುಡಿಮೆಯ ಒಂದು ಮನೆಯಲ್ಲಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಸಂಸಾರ ನಿಗಿಸಲು ಕಷ್ಟವಾಗುತ್ತದೆ.
ಯಾರದೋ ಜೀವನದಲ್ಲಿ ಅಥವಾ ಯಾರೋ ಗಂಡ ಹೆಂಡತಿ ಸರಿಯಿಲ್ಲ ಅಂದಾಗ ನಮ್ಮ ಗಂಡ ಹೆಂಡತಿಯನ್ನು ಅನುಮಾನಿಸುವುದು ಸರಿಯಲ್ಲ. ಕೆಲವರ ಯೋಚನೆ ಹೆಂಡತಿ ದುಡಿದು ಬಂದರೆ ನಮ್ಮನ್ನು ದೌರ್ಜನ್ಯ ಮಾಡಬಹುದು ಅನ್ನುವುದಾಗಿರುತ್ತದೆ. ಆದರೆ ಕೆಲಸಕ್ಕೆ ತೆರಳುವುದರಿಂದ ಎಲ್ಲಾ ಸಂದರ್ಭದಲ್ಲಿ ಪತ್ನಿಗೆ ಪತಿ ಬಳಿ ಕೈ ಚಾಚಲು ಒಳ್ಳೆಯದಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೂ ಕೆಲಸಕ್ಕೆ ಹೋಗಲು ಅವಕಾಶ ನೀಡಬೇಕು. ಅವರಿಗೂ ಅವರದ್ದೇ ಆದ ಆರ್ಥಿಕ ಸ್ವಾತಂತ್ರ್ಯ ಇದ್ದೇ ಇರುತ್ತದೆ.
ಪತಿ ಶ್ರೀಮಂತನಾಗಿರುವ ಸಂದರ್ಭ ದಲ್ಲಿ ಯಾಕೆ ಕೆಲಸಕ್ಕೆ ತೆರಳಬೇಕು. ಅನ್ನುವ ಯೋಚನೆ ಬಂದೇ ಬರುತ್ತದೆ. ಅಂದರೆ ಮನೆಯಲ್ಲಿ ಕೂತು ಕೂತು ಇಲ್ಲಸಲ್ಲದೆ ಯೋಚನೆಗಳು ಬರುವುದಕ್ಕಿಂತ, ನಾವು ಕೆಲಸಕ್ಕೆ ಸೇರುವುದು ಸೂಕ್ತ. ಎಲ್ಲರ ಜೊತೆ ಬೆರೆತಾಗ ನಮಗೆ ನಮ್ಮ ಮನೆಯವರ ಬಗ್ಗೆ ಗೌರವ ಹೆಚ್ಚುತ್ತದೆ. ಮತ್ತು ಹೊಂದಿಕೊಂಡು ಹೋಗುವುದನ್ನು ಕಲಿಯುತ್ತೇವೆ. ಕೆಲಸಕ್ಕೆ ತೆರಳಿದಾಗ ನಮಗೆ ರೂ.50 ದುಡಿಯಲು ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ನಿಜಾಂಶಗಳು ಅರ್ಥವಾಗುತ್ತದೆ.
ದುಡ್ಡಿನ ಬೆಲೆ ಗೊತ್ತಾಗುತ್ತದೆ. ಎಷ್ಟು ಕಷ್ಟಪಟ್ಟು ನೋಡಿಕೊಳ್ಳುತ್ತಿದ್ದಾರೆ ಅನ್ನುವುದು ಮನವರಿಕೆಯಾಗುತ್ತದೆ. ಮನೆಯಲ್ಲಿಯ ನಾಲ್ಕು ಗೋಡೆಗಳ ಮಧ್ಯೆ ನಿಮ್ಮನ್ನು ಕೂರಿಸಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಜೀವನೋತ್ಸಹಾ ಗಳಿರುವುದಿಲ್ಲ. ಇಬ್ಬರೂ ಕೂತು ಮಾತನಾಡುವುದರಿಂದ ಜೀವನದಲ್ಲಿರುವ ತೊಡಕುಗಳನ್ನು ಮೊದಲೇ ಊಹಿಸಿ ಸರಿ ಮಾಡಿಕೊಂಡು ಕೆಲಸಗಳಿಗೆ ಹೋಗಲು ಮುಂದಾಗಿ. ದಾಂಪತ್ಯ ಜೀವನದಲ್ಲಿ ಅನ್ಯೂನ್ಯತೆಯಿಂದಿರಿ.