ಸೋಶಿಯಲ್ ಮೀಡಿಯಾ ಅನ್ನುವ ಮಿನಿ ಜಗತ್ತಿನಲ್ಲಿ ದಿನನಿತ್ಯ ಲಕ್ಷಾಂತರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೆ ಅವುಗಳೆಲ್ಲವೂ ಕೇವಲ ಮನರಂಜನೆಗಷ್ಟೇ ಸೀಮಿತವಾಗಿರುವುದಿಲ್ಲ. ಇದೀಗ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಎಚ್ಚರಿಕೆ ನೀಡುವಂತಿದೆ. ಹೌದು, ನೀವು ಕೂಡ ನಿಮ್ಮ ಮೊಬೈಲ್ ಕವರ್ ನಲ್ಲಿ ಹಣವನ್ನು ಇಡುವವರಾದರೆ ಈ ವೈರಲ್ ವಿಡಿಯೋವನ್ನು ನೋಡಲೇ ಬೇಕು.

https://www.instagram.com/reel/CxxU6tzhEZs/?utm_source=ig_web_copy_link
ಭಾರತೀಯರಾದ ನಾವು ಬಹಳ ಬುದ್ಧಿವಂತರು ಎಂದು ನಮಗೆಲ್ಲರಿಗೂ ತಿಳಿದ ವಿಚಾರ. ಹೆಚ್ಚಿನವರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಡಿಮೆ ಖರ್ಚಿನಲ್ಲಿ ತಮ್ಮ ಎಲ್ಲಾ ಕೆಲಸವನ್ನು ಮಾಡಲು ಬಯಸುತ್ತಾರೆ, ಆದರೆ ಕೆಲವೊಮ್ಮೆ ಕೆಲ ತಂತ್ರಗಳು ಜನರಿಗೆ ದುಬಾರಿಯಾಗಿ ಪರಿಣಮಿಸುತ್ತವೆ. ಅಂತಹುದೇ ಒಂದು ತಂತ್ರಗಾರಿಕೆ ಅಂದರೆ ಅದು ಫೋನ್ ಕವರ್ ನಲ್ಲಿ ಹಣವನ್ನು ಇಡುವುದು. ನೀವೂ ಕೂಡ ಈ ರೀತಿ ಹಣವನ್ನು ಇಡುತ್ತಿದ್ದರೆ, ತಕ್ಷಣ ನಿಲ್ಲಿಸಿ, ಇಲ್ಲದಿದ್ದರೆ ಈ ಅಭ್ಯಾಸವು ನಿಮಗೆ ಭಾರಿ ಅಪಾಯಕಾರಿಯಾಗಿ ಪರಿಣಮಿಸಬಹುದು.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಫೋನ್ನ ಪ್ರೊಸೆಸರ್ ಪೂರ್ಣ ವೇಗದಲ್ಲಿ ಕಾರ್ಯನಿರ್ವಹಿಸಿದಾಗ, ನಮ್ಮ ಫೋನ್ ಬಿಸಿಯಾಗುತ್ತದೆ ಎಂದು ಹೇಳಲಾಗಿದೆ. ಇದರಿಂದ ಶಾಖ ಉತ್ಪತ್ತಿಯಾಗುತ್ತದೆ. ಈ ಶಾಖವು ತುಂಬಾ ಅಪಾಯಕಾರಿ. ಇದರಿಂದಾಗಿ ನಿಮ್ಮ ಫೋನ್ ಸುಲಭವಾಗಿ ಬೆಂಕಿಯನ್ನು ಹಿಡಿಯಬಹುದು. ನೋಟುಗಳನ್ನು ತಯಾರಿಸಲು ಕಾಗದದ ಹೊರತಾಗಿ ಹಲವು ಬಗೆಯ ರಾಸಾಯನಿಕಗಳನ್ನು ಸಹ ಬಳಸುತ್ತಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಮತ್ತು ಈ ರಾಸಾಯನಿಕಗಳಿಂದಾಗಿ ಬೆಂಕಿ ಹೊತ್ತಿಕೊಳ್ಳುವ ಅಪಾಯ ಇರುತ್ತದೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ.