ರಾಜ್ಯ ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ವಿಚಾರ ನಿಲ್ಲೋ ಆಗೆ ಕಾಣ್ತಾ ಇಲ್ಲ. ನಾಯಕರುಗಳು ಒಬ್ಬರಲ್ಲ ಒಬ್ಬರು ಪವರ್ ಶೇರಿಂಗ್ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಹಿಂದೆಯೆಲ್ಲಾ ತೆರೆಮರೆಯಲ್ಲಿ ಚರ್ಚೆಯಾಗ್ತಾ ಇದ್ದ ವಿಚಾರ ಬಹಿರಂಗಕ್ಕೆ ಬಂದಿದ್ದೆ ಡಿಕೆ ಶಿವಕುಮಾರ್ ನಿಂದ. ಯಾವಾಗ ಡಿಕೆ ಶಿವಕುಮಾರ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದರೋ ಅಂದಿನಿಂದ ಬಹಿರಂಗವಾಗಿಯೇ ಮಾತನಾಡಲು ಪ್ರಾರಂಭಿಸಿದರು ನಾಯಕರು.

ಎರಡೂವರೆ ವರ್ಷ ಸಿದ್ದರಾಮಯ್ಯ ಹಾಗೂ ಉಳಿದ ವರ್ಷ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋ ಚರ್ಚೆ ಇಂದು ನಿನ್ನೆಯದಲ್ಲ. ಬಹಳಷ್ಟು ತಿಂಗಳುಗಳಿಂದ ಈ ಚರ್ಚೆ ಮುಂದುವರೆದಿದೆ. ಪವರ್ ಶೇರಿಂಗ್ ಬಗ್ಗೆ ಹೇಳಿಕೆ ಕೊಡಬೇಡಿ ಅಂತ ಹೈ ಕಮಾಂಡ್ ಹೇಳಿದರೂ ಇದ್ಯಾಕೋ ನಿಲ್ಲೋತರ ಕಾಣ್ತಾ ಇಲ್ಲ. ಇಷ್ಟು ದಿನ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದರು. ಆದರೆ ಈಗ ಎಲ್ಲಾ ಪಕ್ಷದವರು ಬಹಿರಂಗವಾಗಿಯೇ ವ್ಯಂಗ್ಯ ಮಾಡ್ತಾ ಇದ್ದಾರೆ. ಒಂದಿಷ್ಟು ಜನ ಡಿಕೆ ಶಿವಕುಮಾರ್ ಗೂ ಅಧಿಕಾರ ಸಿಗಲಿ ಅಂತ ಹೇಳ್ತಾ ಇದ್ದಾರೆ.

ಬಗಿರಂಗವಾಗಿಯೇ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರು ಸಿದ್ದರಾಮಯ್ಯ ರಾಜಿನಾಮೆ ಕೊಡ್ತಾರೆ ಅಂತ ಹೇಳುತ್ತಲೇ ಇದ್ದಾರೆ. ಬಜೆಟ್ ಅಧಿವೇಶನದ ಬಳಿಕ ಸಿಎಂ ಸ್ಥಾನ ಇರೋದಿಲ್ಲ ಅಂತ ಹೇಳುತ್ತಲೇ ಇದ್ದಾರೆ. ಇನ್ನೂ ಮುಂದುವರೆದು ಕ್ಷಿಪ್ರ ಕ್ರಾಂತಿ ಆಗುತ್ತೆ ಅಂತಲೂ ಹೇಳಲಾಗುತ್ತಿದೆ. ಬಜೆಟ್ ಮಂಡನೆ ಬಳಿಕವೂ ಇದು ಸಿಎಂ ಸಿದ್ದರಾಮಯ್ಯರ ಕೊನೆಯ ಬಜೆಟ್ ಅಂತ ಬಿಜೆಪಿ ನಾಯಕರು ಕುಟುಕಿದ್ದರು. ಈಗ ಹಳ್ಳಿ ಹಕ್ಕಿ ವಿಶ್ವನಾಥ್ ಕೂಡ ಸಿಎಂ ಬದಲಾವಣೆ ಕುರಿತು ಮಾತನಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಹೆಚ್ ವಿಶ್ವನಾಥ್, ಸಿದ್ದರಾಮಯ್ಯನವರ ಕೆಲವು ಆಪ್ತರೇ ಇದು ಸಿದ್ರಾಮಯ್ಯನವರ ಕೊನೆಯ ಬಜೆಟ್ ಎಂದು ಹೇಳುತ್ತಿದ್ದಾರೆ. ಹಾಗಂತ ಕೊನೆಯ ಬಜೆಟ್ ಗೆ ಮೊಳೆ ಹೊಡೆದು ಬಿಟ್ಟು ಹೋಗೋದು ಸರೀನಾ ಎಂದು ಬಜೆಟ್ ಕುರಿತು ಮಾತನಾಡಿದ್ದಾರೆ. ತಲಾ 30 ತಿಂಗಳಿಗೆ ಅಧಿಕಾರ ಹಂಚಿಕೆ ಸಂಬಂಧ ಮಾತುಕತೆ ಆಗಿದೆ. ಡಿ ಕೆ ಶಿವಕುಮಾರ್ ಕಾಂಗ್ರೆಸ್ ಕಟ್ಟಿದವರು. ಅವರು ಕಟ್ಟಿದ್ದ ಮನೆಗೆ ಬಂದು ಸೇರಿಕೊಂಡವರು ಸಿದ್ದರಾಮಯ್ಯ.

ಅವರನ್ನು ಕಾಂಗ್ರೆಸ್ ಗೆ ಕರೆತಂದವರನ್ನು ಕೂಡ ಸಿದ್ದರಾಮಯ್ಯ ನೆನೆಸಿಕೊಳ್ಳುವುದಿಲ್ಲ. ಅಧಿಕಾರ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ಅಪ್ಪನ ಮನೆ ಆಸ್ತಿಯಲ್ಲ.ಅಧಿಕಾರ ಕಾಂಗ್ರೆಸ್ ಪಾರ್ಟಿ ಮತ್ತು ಜನರ ಆಸ್ತಿ. ಹೈಕಮಾಂಡ್ ಹೇಳಿದರೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ.
ಈ ಮೂಲಕ ಇದ್ದಂತಹ ಸಿಎಂ ಬದಲಾವಣೆ ಚರ್ಚೆಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ ಹೆಚ್ ವಿಶ್ವನಾಥ್. ಈಗಾಗಲೇ ಬೀದಿ ಬೀದಿಯಲ್ಲಿ ಈ ವಿಚಾರ ಚರ್ಚೆ ಬೆನ್ನಲ್ಲೇ ದಿನಕ್ಕೊಬ್ಬರು ನಾಯಕರು ಮಾತನಾಡುತ್ತಿರೋದು ನೋಡಿದ್ರೆ ಅವದಿಗೂ ಮುನ್ನವೇ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರಾ ಸಿದ್ದರಾಮಯ್ಯ ಅನ್ನೊ ಅನುಮಾನ ವ್ಯಕ್ತವಾಗ್ತಾ ಇದೆ.