ತಾವು ಸಿಎಂ ಆಗಬೇಕು. ಶತಾಯ ಗತಾಯ ಏನಾದರೂ ಸಿಎಂ ಆಗಬೇಕು ಅಂತಿದ್ದ ಡಿಕೆ ಶಿವಕುಮಾರ್ ಗೆ ಈಗ ಸಿಹಿ ಸುದಗದಿಯೊಂದು ದೊರೆತಂತಾಗಿದೆ. ಈ ಅವಧಿಯಲ್ಲೇ ಡಿಕೆ ಶಿವಕುಮಾರ್ ಸಿಎಂ ಆಗ್ತಾರಂತೆ. ಹೀಗಂತ ನಾವೇನು ಸುಳ್ಳು ಹೇಳ್ತಾ ಇಲ್ಲ. ನಿಮ್ಮ ಮುಂದೆ ಸಾಕ್ಷಿ ಇಟ್ಟೇ ಈ ಮಾತು ಹೇಳುತ್ತಿದ್ದೇವೆ. ನಾಳೆಯೇ ಸಿಎಂ ಸ್ಥಾನ ಡಿಕೆಶಿಗೆ ಲಭಿಸಬಹುದು. ಇದೆ ಹೇಗೆ ಅನ್ನೋದನ್ನ ಮುಂದೆ ಓದಿ.
ಕಾಂಗ್ರೆಸ್ ಪಕ್ಷದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪಕ್ಷ ಮುನ್ನಡೆಸುತ್ತಿದ್ದಾರೆ. ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರಮ ವಹಿಸಿ ಪಕ್ಷದ ಗೆಲುವಿಗೆ ಕಾರಣರಾದರು. ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆ ಶಿವಕುಮಾರ್ ಜೋಡೆತ್ತುಗಳ ರೀತಿಯಲ್ಲಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾನೂ ಸಿಎಂ ಆಗಬೇಕು ಅನ್ನೋ ತವಕ ಇದ್ದೇ ಇದೆ. ಆದರೆ ಅದಕ್ಕೆ ಅಡ್ಡಿಯಾಗಿರೋದು ಸಿಎಂ ಸಿದ್ದರಾಮಯ್ಯ.
ಕೇವಲ ಹಣ ಖರ್ಚು ಮಾಡಿದ್ದರಿಂದಲೋ ಅಥವಾ ಕಾರ್ಯಕರ್ತರನ್ನ ಒಟ್ಟುಗೂಡಿಸಿದ್ದರಿಂದಲೋ ಪಕ್ಷ ಅಧಿಕಾರಕ್ಕೆ ಬಂತು ಅಂತಲ್ಲ. ಸಿದ್ದರಾಮಯ್ಯ ಅನ್ನೋ ವರ್ಚಸ್ಸು ಇದ್ದಿದ್ದರಿಂದಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹಳೆ ಮೈಸೂರು ಭಾಗ, ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ರನ್ನ ನೋಡಿಯೇ ಮತ ಹಾಕಿದ್ದು ಅನ್ನೋದು ಅನೇಕರ ಮಾತು. ಇದೆಲ್ಲವೂ ಕೂಡ ಇತಿಹಾಸವೇ. ಸಿದ್ದರಾಮಯ್ಯ ವರ್ಚಸ್ಸಿನ ಜೊತೆಗೆ ಡಿಕೆಯಂತಹ ಬಂಡೆ ಕೂಡ ಜೊತೆಗಿದ್ದರೆ ಒಳ್ಳೆಯದು ಅನ್ನೋದು ಮತ್ತೊಂದು ವರ್ಗದ ಮಾತು.

ಪಕ್ಷಕ್ಕೆ ತಾವು ನೀಡಿದ ಕೊಡುಗೆ ಗಮನಿಸಿ ಸಿಎಂ ಸ್ಥಾನ ಸಿಗಬೇಕು ಅಂತ ಡಿಕೆ ತಂತ್ರ, ರಣತಂತ್ರ ಎಲ್ಲವನ್ನೂ ಕೂಡ ಮಾಡುತ್ತಲೇ ಇದ್ದಾರೆ. ಯಜ್ಞ ಯಾಗಾದಿಗಳಿಂದ ಹಿಡಿದು, ಶಾಸಕರನ್ನ ತನ್ನತ್ತ ಸೆಳೆಯುವ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಷ್ಟು ಸುಲಭಕ್ಕೆ ಸಿಎಂ ಸ್ಥಾನ ಸಿಗುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಇಲ್ಲದೇ ಹೋದರೆ ಕಾಂಗ್ರೆಸ್ ಹೇಗೆ ಅನ್ನೋದನ್ನೂ ಹೈ ಕಮಾಂಡ್ ಚಿಂತನೆ ಮಾಡಿದೆ. ಹೀಗಾಗಿ ಪ್ರತಿ ಬಾರಿಯೂ ಈ ವಿಚಾರ ಹೈ ಕಮಾಂಡ್ ಮುಂದೆ ಬಂದಾಗ ಅಥವಾ ಅಂತಹ ಬೆಳವಣಿಗೆ ನಡೆದಾಗಲೂ ಕಂಡೂ ಕಾಣದಂತೆ ಇದೆ ಹೈ ಕಮಾಂಡ್.
ಇನ್ನು ಮುಂದುವರೆದಂತೆ ಆಗಿಂದಗ್ಲೇ ಡಿಕೆ ಮುಂದಿನ ನಡೆ ಹಾಗೂ ಸಿಎಂ ಭವಿಷ್ಯದ ಕುರಿತು ಒಂದಿಷ್ಟು ಹೇಳಿಕೆಗಳು, ಸ್ವಾಮೀಜಿಗಳ ಮಾತುಗಳು ವೈರಲ್ ಆಗ್ತನೇ ಇರುತ್ತದೆ. ಈಗ ಇಂತಹದ್ದೇ ಹೇಳಿಕೆಯೊಂದು ವೈರಲ್ ಆಗಿದೆ. ಇಷ್ಟು ದಿನ ಸಿಎಂ ಆಗೋ ಕನಸು ಕಾಣ್ತಾ ಇದ್ದ ಡಿಕೆ ಶಿವಕುಮಾರ್ ಗೆ ಸಿಎಂ ಆಗೋ ಸಮಯ ಬಂದೇ ಬಿಡ್ತಾ ಅನ್ನೋ ಚರ್ಚೆ ಶುರುವಾಗಿದೆ. ಈ ಸಂಬಂಧ ದಕ್ಷಿಣ ಭಾರತದ ಏಕೈಕ ಮಹಾಮಂಡಳೇಶ್ವರ ಅಮ್ಮ ಭೈರವಿ ಭವಿಷ್ಯ ನುಡಿದಿದ್ದಾರೆ.

ಈ ಹುಬ್ಬಳ್ಳಿ ಸಿದ್ದರೂಢಾ ಮಠಕ್ಕೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ಡಿಕೆ ಸಿಎಂ ಭವಿಷ್ಯದ ಕುರಿತು ಮಾತನಾಡಿದ್ದಾರೆ. ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ. ಈ ಹಿಂದೆ ಅಂದರೆ ಮೂರು ವರ್ಷದ ಹಿಂದೆ ಅಂದರೆ ಈಗ ಏನು ಹೀನ ರಾಜಕೀಯ ನಡೆಯುತ್ತಿದೆಯೋ ಅದಕ್ಕೂ ಮುನ್ನ ಡಿ ಕೆ ಶಿವಕುಮಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದೆ. ನನಗೆ ಅವರ ಮನೆಯಲ್ಲಿ ಅವರ ಪತ್ನಿ ಸೀರೆಯನ್ನು ಕೊಟ್ಟರು, ಅವರು ಗಣಪತಿ ವಿಗ್ರಹವನ್ನು ನೀಡಿದರು. ಮುಂದೆ ಏನು ಅಂತ ಕೇಳಿದರು. ಯಾವುದರ ಬಗ್ಗೆ ಅಂದರೆ ರಾಜಕೀಯ ಜೀವನ ಅಂದರು. ಅದಕ್ಕೆ ನಾನು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗುತ್ತೆ ಎಂದು ಹೇಳಿದ್ದೆ. ಅಂದರೆ ಏನು ಅಂತ ಡಿಕೆಶಿ ಕೇಳಿದರು, ನೀವು ದುಡಿದ ದುಡ್ಡನ್ನು ಇನ್ನೊಬ್ಬರು ತಿಂದು ತೇಗುತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದ್ದೆ ಅದರಂತೆ ಈಗ ಬೇರೆಯವರು ಸಿಎಂ ಆಗಿದ್ದಾರೆ. ನಾನು ಯಾರ ಪರವೂ ಅಲ್ಲ ಎಂದು ಭೈರವಿ ಅಮ್ಮ ಹೇಳಿದ್ದಾರೆ.
ಇನ್ನು ಮುಂದುವರೆದು ಡಿಕೆ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿರುವ ಅವರು,ಈ ಹಿಂದೆಯೇ ಹೇಳಿದ್ದೇ ಯಾವಾಗ ಆಗುತ್ತಾರೆ ಎಂಬುದು ಹೇಳಲ್ಲ. ಇರುವ ಕುರ್ಚಿ ಖಾಲಿ ಆದರೆ ನಾಳೆ ಆಗಬಹುದು ಆದರೆ ಮುಖ್ಯಮಂತ್ರಿ ಈ ಅವಧಿಯಲ್ಲಿ ಆಗಿಯೇ ಆಗುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ವೈರಲ್ ಆಗೋದ್ರ ಜೊತೆಗೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಅಂತಿದ್ದ ಅವರ ಬೆಂಬಲಿಗರಿಗೆ ಮತ್ತಷ್ಟು ಬಲ ನೀಡಿದಂಗಾಗಿದೆ.