ನೊಣವಿನ ಕೆರೆ ಅಜ್ಜಯ್ಯ ಅಂದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ವಿಶೇಷ ಭಕ್ತಿ.. ಅವರು ಹಾಕಿದ ಗೆರೆಯನ್ನು ಡಿ.ಕೆ.ಶಿವಕುಮಾರ್ ದಾಟೋದಿಲ್ಲ.. ಅದ್ರಲ್ಲೂ 2023ರ ಚುನಾವಣೆ ಸಮಯದಲ್ಲಿ ಈ ನೊಣವಿನ ಕೆರೆ ಅಜ್ಜಯ್ಯನ ಅಣತಿಯಂತೆಯೇ ಡಿ.ಕೆ.ಶಿವಕುಮಾರ್ ನಡೆದುಕೊಂಡಿದ್ದರು.. ಅಜ್ಜಯ್ಯನ ಆಶೀರ್ವಾದ ಪಡೆದ ಮೇಲೆಯೇ ಅಭ್ಯರ್ಥಿಗಳಿಗೆ ಬಿ ಫಾರಂಗಳನ್ನು ಹಂಚಿದ್ದರು.. ಈ ಬಾರಿ ಕಾಂಗ್ರೆಸ್ಗೆ 136 ಸ್ಥಾನ ಬರುತ್ತೆ ಅಂತ ಡಿ.ಕೆ.ಶಿವಕುಮಾರ್ ಪದೇ ಪದೇ ಹೇಳುತ್ತಾ ಬಂದಿದ್ದರು.. ಈ ಭವಿಷ್ಯ ನುಡಿದಿದ್ದದ್ದು ಇದೇ ನೊಣವಿನ ಕೆರೆ ಅಜ್ಜಯ್ಯ.. ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿತ್ತು.. ಇದೀಗ ಅದೇ ಅಜ್ಜಯ್ಯ ಅವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅಂತ ಹೇಳ್ತಿದ್ದಾರೆ.. ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಅಜ್ಜಯ್ಯ ಇಂತಹದ್ದೊಂದು ಭವಿಷ್ಯ ನುಡಿದಿರೋದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ..

ತುಮಕೂರು ಜಿಲ್ಲೆ ನೊಣವಿನ ಕೆರೆಯ ಕಾಡಸಿದ್ಧೇಶ್ವರ ಮಠಾಧ್ಯಕ್ಷರಾಗಿರುವ ಡಾ. ಕರಿವೃಷಭ ದೇಶೀಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿಯವರೇ ಈ ಅಜ್ಜಯ್ಯನವರು.. ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಈ ಮಠಕ್ಕೆ ನಡೆದುಕೊಳ್ಳುತ್ತಾರೆ.. ಅಜ್ಜಯ್ಯನವರು ಸೂಚಿಸಿದಂತೆ ನಡೆಯುತ್ತಾರೆ.. ಇದಕ್ಕೊಂದು ಉದಾಹರಣೆ ಇತ್ತೀಚೆಗೆ ನಡೆದ ಮಹಾ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದು.. ಸ್ವತಃ ಅಜ್ಜಯ್ಯನವರೇ ಡಿ.ಕೆ.ಶಿವಕುಮಾರ್ ದಂಪತಿಯನ್ನು ಮಹಾ ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದರು.. ಅಲ್ಲಿ ಅಜ್ಜಯ್ಯನ ಅಣತಿಯಂತೆ ಡಿ.ಕೆ.ಶಿವಕುಮಾರ್ ದಂಪತಿ ಪುಣ್ಯ ಸ್ನಾನ ಮಾಡಿ ಬಂದಿತ್ತು.. ಇದೀಗ ಈ ಬಗ್ಗೆಯೂ ಅಜ್ಜಯ್ಯ ಹೇಳಿಕೆ ನೀಡಿದ್ದಾರೆ.. ಕುಂಭಮೇಳಕ್ಕೆ ಡಿ.ಕೆ.ಶಿವಕುಮಾರ್ ಹೋಗಿ ಬಂದಿದ್ದರ ಹಿಂದಿನ ಉದ್ದೇಶವನ್ನೂ ಸ್ವಾಮೀಜಿ ಹೇಳಿದ್ದಾರೆ..
ಯಾದಗಿರಿ ಸಮೀಪದ ಶ್ರೀಕ್ಷೇತ್ರ ಅಬ್ಬೆ ತುಮಕೂರಿನಲ್ಲಿ ಅಜ್ಜಯ್ಯನವರು ಮಾತನಾಡಿದ್ದಾರೆ.. ಈ ವೇಳೆ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೇಳಿದ್ದಾರೆ.. ರೈತರು, ವರ್ತಕರು ಸೇರಿ ಸಮಸ್ತ ಸದ್ಭಕ್ತರಿಗೂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬ ಬಯಕೆ ಇದೆ.. ಅವರ ಬಯಕೆಯಂತೆಯೇ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಅಜ್ಜಯ್ಯನವರು ಭವಿಷ್ಯ ನುಡಿದಿದ್ದಾರೆ.. ಆದ್ರೆ ಇದೇ ದಿನ ಅವರು ಸಿಎಂ ಆಗುತ್ತಾರೆ ಎಂದು ಹೇಳೋದಕ್ಕೆ ಆಗೋದಿಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆಗೋದಂತೂ ಪಕ್ಕಾ ಎಂದು ಅವರು ಹೇಳಿದ್ದಾರೆ.. ಡಿ.ಕೆ.ಶಿವಕುಮಾರ್ ಹಾಗೂ ನಾನು ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದೆವು.. ಇಬ್ಬರೂ ಪವಿತ್ರ ಗಂಗಾಸ್ನಾನ ಮಾಡಿ ಬಂದಿದ್ದೇವೆ.. ಇದೇ ವೇಳೆ ಅಲ್ಲಿ ನಾವು ಸಂಕಲ್ಪವನ್ನೂ ಮಾಡಿದ್ದೇವೆ.. ಹೀಗಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಖಚಿತ ಎಂದು ಅಜ್ಜಯ್ಯ ಹೇಳಿದ್ದಾರೆ..

ಡಿ.ಕೆ.ಶಿವಕುಮಾರ್ ಅವರಿಗೆ ಕಾಡ ಸಿದ್ದೇಶ್ವರ ಮಠದ ಆಶೀರ್ವಾದ ಇದೆ.. ಮಠದ ಆಶೀರ್ವಾದದಿಂದ ಅವರ ಸಿಎಂ ಸ್ಥಾನದ ಹಾದಿ ಸುಗಮವಾಗಲಿದೆ.. ಈ ಬಗ್ಗೆ ಈಗಾಗಲೇ ಪ್ರತಿನಿತ್ಯ ಚರ್ಚೆಗಳು ನಡೆಯುತ್ತಿವೆ. ಡಿ.ಕೆ.ಶಿವಕುಮಾರ್ ಅವರಿಗೆ ಭಗವಂತನ ಆಶೀರ್ವಾದ ಸಿಗುತ್ತದೆ.. ಸಮಸ್ತ ಜನರ ಆಶಯದಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಅವರು ಹೇಳಿದ್ದಾರೆ..
ಸಮಸ್ತ ಜನರ ಸಂಕಲ್ಪದಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ. ಬಡವರ, ರೈತರ ಪ್ರೀತಿ ವಿಶ್ವಾಸ ಗಳಿಸಿ ಉತ್ತಮ ನಾಯಕನಾಗಿ ಬಾಳಲಿ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿ ಎಂದು ಆಶೀರ್ವಾದ ಮಾಡುವುದಾಗಿ ಅಜ್ಜಯ್ಯ ಅವರು ಹೇಳಿದ್ದಾರೆ. ರಾಜ ಎಂಬುವವನು ಜನರ ಪಾಲಿಗೆ ಪ್ರತ್ಯಕ್ಷ ದೈವವಿದ್ದಂತೆ.. ಅದರಂತೆ ಡಿ.ಕೆ.ಶಿವಕುಮಾರ್ ಬಾಳಲಿ. ಜನರ ಆಶೋತ್ತರಗಳನ್ನು ಅವರು ಚಾಚೂ ತಪ್ಪದೆ ಈಡೇರಿಸುವಂತಾಗಲಿ ಎಂದು ಅಜ್ಜಯ್ಯ ಹರಿಸಿದ್ದಾರೆ.. ಡಿ.ಕೆ.ಶಿವಕುಮಾರ್ ಅವರಲ್ಲಿ ಮುತ್ಸದ್ದಿ ರಾಜಕಾರಣಿ ಇದ್ದಾರೆ.. ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ.. ಅವರು ಅವರು ಸೌಹಾರ್ದತೆಯ ರಾಜಪುತ್ರರು. ಅವರು 140 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ.. ಹೀಗಾಗಿ ಅವರಿಗೆ ಈಗ ಎಲ್ಲವೂ ಒಳ್ಳೆಯದಾಗಲಿದೆ ಎಂದೂ ಅಜ್ಜಯ್ಯ ತಿಳಿಸಿದ್ದಾರೆ..